ಜರ್ಮನಿಯಲ್ಲಿ ಅಕ್ಟೋಬರ್ 30ರಿಂದ ನವೆಂಬರ್ 10ರ ವರೆಗೆ ಕ್ವಾರಂಟೈನ್ ಗೆ ಒಳಗಾಗಲಿರುವ ಇಬ್ಬರು ಬ್ಯಾಡ್ಮಿಂಟನ್ ಆಟಗಾರರಾದ ಅಜಯ್ ಜಯರಾಮ್ ಮತ್ತು ಶುಭಂಕರ್ ದೇ ಅವರ ಊಟ ಮತ್ತು ವಸತಿ ವೆಚ್ಚವನ್ನು ಮಾನವೀಯ ನೆಲೆಯಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರವೇ ಭರಿಸಲಿದೆ. ಸಾಯ್ ಆ ಇಬ್ಬರು, ಆಟಗಾರರ ಹೋಟೆಲ್ ವಸತಿ ಮತ್ತು ಆಹಾರ ವೆಚ್ಚಕ್ಕಾಗಿ 1.46 ಲಕ್ಷ ರೂ. ಪಾವತಿಸಲಿದೆ. ಶೇ.90ರಷ್ಟು ಹಣವನ್ನು ತಕ್ಷಣವೇ ಬಿಡುಗಡೆ ಮಾಡಲಿದೆ.

ಈ ಇಬ್ಬರು ಆಟಗಾರರು ಸಾರ್ ಬ್ರುಕೆನ್ ನಲ್ಲಿ ನಡೆಯಲಿರುವ ಸಾರ್ ಲಾರ್ ಲಕ್ಸ್ ಓಪನ್ ಟೂರ್ನಿಯಲ್ಲಿ ಆಟವಾಡುವುದು ನಿಗದಿಯಾಗಿತ್ತು, ಆದರೆ ಅವರು ಲಕ್ಷ್ಯ ಸೇನ್ ಬಳಿ ತರಬೇತಿ ಪಡೆಯುತ್ತಿದ್ದರಿಂದ ಅವರನ್ನು ವಾಪಸ್ ಕರೆಯಿಸಿಕೊಳ್ಳಲಾಗುತ್ತಿದೆ. ಲಕ್ಷ್ಯ ಸೇನ್ ಅವರನ್ನು ಮೊದಲೇ ವಾಪಸ್ ಕರೆಸಿಕೊಳ್ಳಲಾಗಿತ್ತು. ಉಭಯ ಆಟಗಾರರು ಜರ್ಮನಿಗೆ ಆಗಮಿಸಿದ ವೇಳೆ ಮಾಡಲಾದ ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದ್ದು, ಅವರಿಗೆ ಲಕ್ಷ್ಯ ಜೊತೆ ತರಬೇತಿ ಪಡೆದಿದ್ದರು, ಆದರೆ ಲಕ್ಷ್ಯ ಕೋಚ್ ಡಿ.ಕೆ. ಸೇನ್ ಅವರ ಕೋವಿಡ್ ವರದಿ ಅಕ್ಟೋಬರ್ 27ರಂದು ಪಾಸಿಟಿವ್ ಬಂದಿತ್ತು. ಅವರ ನಿಕಟ ಸಂಪರ್ಕದಲ್ಲಿದ್ದ ಕಾರಣ ಇತರೆ ಆಟಗಾರರ ಸುರಕ್ಷತೆ ಮತ್ತು ಟೂರ್ನಿಗೆ ತೊಂದರೆಯಾಗದಂತೆ ಆ ಆಟಗಾರರನ್ನು ಹಿಂಪಡೆಯಲಾಗಿದೆ.
ಭಾರತೀಯ ಕ್ರೀಡಾ ಪ್ರಾಧಿಕಾರ ಇಬ್ಬರು ಆಟಗಾರರ ಸ್ಥಿತಿಗತಿಯ ಕುರಿತು ಫ್ರಾಂಕ್ ಫರ್ಟ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಆ ಆಟಗಾರರಿಗೆ ಅಗತ್ಯ ನೆರವು ನೀಡುತ್ತಿದೆ.
Leave a Comment