ಹಳಿಯಾಳ :- ಹಳಿಯಾಳದ ಪ್ರತಿಷ್ಠಿತ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ(ಟಿಎಪಿಸಿಎಮ್ಎಸ್-ಮಾರ್ಕೆಟಿಂಗ್ ಸೊಸೈಟಿ)ದ ನೂತನ ಅಧ್ಯಕ್ಷರಾಗಿ ತುಕಾರಾಮ ಕೆ ಗೌಡಾ ಹಾಗೂ ಉಪಾಧ್ಯಕ್ಷರಾಗಿ ಅಷ್ಪಾಕಅಹ್ಮದ ಎಲ್ ಪುಂಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗುರುವಾರ ಇಲ್ಲಿಯ ಮಾರ್ಕೆಟಿಂಗ್ ಸೊಸೈಟಿಯಲ್ಲಿ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೇಯಲ್ಲಿ ಸರ್ವಾನುಮತದಿಂದ ನಾಗೇಶೆಟ್ಟಿಕೊಪ್ಪ-ಚಿಬ್ಬಲಗೇರಿ ವ್ಯವಸಾಯ ಸೇವಾ
ಸಹಕಾರಿ ಸಂಘ ನಿ.ನಾಗಶೇಟ್ಟಿಕೊಪ್ಪ ಕ್ಷೇತ್ರದಿಂದ ಟಿಎಪಿಸಿಎಮ್ಎಸ್ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿದ್ದ ತುಕಾರಾಮ ಕೆ ಗೌಡಾ ಅವರನ್ನು ನೂತನ ಅಧ್ಯಕ್ಷರಾಗಿ ಹಾಗೂ ಹಳಿಯಾಳ ‘ಪ್ರವರ್ಗ-ಅ’ ಕ್ಷೇತ್ರದಿಂದ ನಿರ್ದೇಶಕರಾಗಿ ಆಯ್ಕೆಯಾಗಿರುವ ಅಷ್ಪಾಕಅಹ್ಮದ ಲಿಯಾಖತ ಪುಂಗಿ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದ್ದು ಇವರ ಆಯ್ಕೆಯನ್ನು ಚುನಾವಣಾಧಿಕಾರಿ ತಹಶೀಲ್ದಾರ್ ವಿದ್ಯಾಧರ ಗುಳಗುಳೆ ಅವರು ಘೊಷಿಸಿದರು.

ಚುನಾವಣೆ ಪ್ರಕ್ರಿಯೇ ಬಳಿಕ ಮಾರ್ಕೆಟಿಂಗ್ ಸೊಸೈಟಿಗೆ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಅವರು ನೂತನ ಅಧ್ಯಕ್ಷ-ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಾರ್ಕೇಟಿಂಗ್ ಸೊಸೈಟಿಯ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಎಲ್ಲ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಅಲ್ಲದೇ ಅಧ್ಯಕ್ಷ-ಉಪಾಧ್ಯಕ್ಷರು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾಗಿರುವುದು ದಾಖಲೆಯಾಗಿದೆ. ಈ ಪ್ರತಿಷ್ಠಿತ ಟಿಎಪಿಸಿಎಂಎಸ್ ಸಂಸ್ಥೆಯನ್ನು ಬೆಳೆಸುವ ಜವಾಬ್ದಾರಿ ನೂತನವಾಗಿ ಆಯ್ಕೆಯಾದ ಎಲ್ಲ ನಿರ್ದೇಶಕರ ಮೇಲಿದ್ದು, ಮುಂದೆ ಯಾರು ಆರೋಪ ಮಾಡದಂತೆ ಜವಾಬ್ದಾರಿಯುತವಾಗಿ ಸೊಸೈಟಿಯ ಪ್ರಗತಿಗಾಗಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿ ಅಲ್ಲದೇ ಹಿರಿಯರು ಸ್ಥಾಪಿಸಿದ ಸಂಸ್ಥೆಯನ್ನು ಉಳಿಸಿ ಬೆಳೆಸುವ ಕಾರ್ಯ ಪಕ್ಷಾತೀತವಾಗಿ ಪ್ರಾಮಾಣಿಕತೆಯಿಂದ ಮಾಡುವಂತೆ ಹಾಗೂ ಎಲ್ಲ ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಸ್ಥೆಯ ಜೊತೆಗೆ ರೈತರ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸುವಂತೆ ಘೊಟ್ನೇಕರ ನೂತನ ಅಧ್ಯಕ್ಷ-ಉಪಾಧ್ಯಕ್ಷರಿಗೆ ಕರೆ ನೀಡಿದರು.
ನೂತನ ಅಧ್ಯಕ್ಷ ತುಕಾರಾಮ ಗೌಡಾ ಮಾತನಾಡಿ ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಅವರ ಮಾರ್ಗದರ್ಶನದಲ್ಲಿ ಎಲ್ಲ ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸೊಸೈಟಿಯ ಸರ್ವತೋಮುಖ ಅಭಿವೃಧ್ದಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.
ನೂತನ ಉಪಾಧ್ಯಕ್ಷ ಅಷ್ಪಾಕಅಹ್ಮದ ಪುಂಗಿ ಮಾತನಾಡಿ ಉಪಾಧ್ಯಕ್ಷ ಸ್ಥಾನ ತನಗೆ ದೊರೆತಿರುವುದು ನೀಜಕ್ಕೂ ಅಚ್ಚರಿಯಾಗಿದೆ. ಇದು ತನ್ನ ಅದೃಷ್ಟವೇ ಸರಿ ಶಾಸಕ ಆರ್ ವಿ ದೇಶಪಾಂಡೆ, ವಿಪ ಸದಸ್ಯ ಎಸ್.ಎಲ್.ಘೊಟ್ನೇಕರ ಹಾಗೂ ಎಲ್ಲ ನಿರ್ದೇಶಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಅವರ ಮಾರ್ಗದರ್ಶನದಲ್ಲಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತೇನೆ.
ಈ ಸಂದರ್ಭದಲ್ಲಿ ನಿರ್ದೇಶಕರಾದ ಮೇಘರಾಜ ಪಾಟೀಲ್, ಅನಂತ ಘೊಟ್ನೇಕರ, ಕೃಷ್ಣಾ ಶಹಾಪುರಕರ, ನಾಗರಾಜ ಪಾಟೀಲ್, ಸುಭಾಷ ಶಿಂಧೆ, ವಿಷ್ಣು ಮಿಶ್ಯಾಳೆ, ಜ್ಯೋತಿ ಗರಗ, ನಿರ್ಮಲಾ ಪಾಟೀಲ್, ತವನಪ್ಪಾ ಮುನವಳ್ಳಿ, ಮಾರುತಿ ಕಾಂಬ್ರೇಕರ, ಸಹಕಾರಿ ಯುನಿಯನ್ ಉಪಾಧ್ಯಕ್ಷ ಶಿವಪುತ್ರ ನುಚ್ಚಂಬ್ಲಿ ಸಹಾಯಕ ಚುನಾವಣಾಧಿಕಾರಿ ಹಳಿಯಾಳ ಸಹಾಯಕ ಕೃಷಿ ನಿರ್ದೇಶಕ ಪಿಐ ಮಾನೆ, ಸೊಸೈಟಿಯ ಮ್ಯಾನೇಜರ್ ಈಶ್ವರ ಪಾಟೀಲ್ ಇತರರು ಇದ್ದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ತೆಗ್ನಳ್ಳಿ ಗ್ರಾಮದ ತುಕಾರಾಮ ಖೊಬ್ಬಣ್ಣ ಗೌಡಾ ಅವರು ಪ್ರಥಮ ದರ್ಜೆ ಗುತ್ತಿಗೆದಾರರಾಗಿದ್ದು ಕಾಂಗ್ರೇಸ್ ಪಕ್ಷದ ಸಕ್ರೀಯ ಕಾರ್ಯಕರ್ತರಾಗಿರುವ ತುಕಾರಾಮ ಅವರು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಅವರ ಪರಮಾತ್ಮ ಬಳಗದಲ್ಲಿ ಒಬ್ಬರು. ಇವರು ಹಳಿಯಾಳ ಪಿಎಲ್ಡಿ ಬ್ಯಾಂಕ್ ನಿರ್ದೇಶಕರಾಗಿ, ರಾಜ್ಯ ಪಂಚಾಯತ ಪರಿಷತ್ ಸದಸ್ಯರಾಗಿ ಹಾಗೂ ಚಿಬ್ಬಲಗೇರಿ ಗ್ರಾಪಂ ಅಧ್ಯಕ್ಷರಾಗಿ 5 ವರ್ಷಗಳ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅಲ್ಲದೇ ಸದ್ಯ ನಾಗೇಶೆಟ್ಟಿಕೊಪ್ಪ-ಚಿಬ್ಬಲಗೇರಿ ವ್ಯವಸಾಯ ಸೇವಾ ಸಹಕಾರಿ ಸಂಘ ನಿ.ನಾಗಶೇಟ್ಟಿಕೊಪ್ಪದ ಅಧ್ಯಕ್ಷರಾಗಿದ್ದು ಮತ್ತೇ ಅವರಿಗೆ ಹಳಿಯಾಳದ ಪ್ರತಿಷ್ಠಿತ ಟಿಎಪಿಸಿಎಮ್ಎಸ್-ಮಾರ್ಕೆಟಿಂಗ್ ಸೊಸೈಟಿಯ ಅಧ್ಯಕ್ಷ ಪಟ್ಟ ಒಲಿದು ಬಂದಿದ್ದು ಅವರ ಅದೃಷ್ಠವೇ ಸರಿ.
ಟಿಎಪಿಸಿಎಮ್ಎಸ್ ಸಂಘದ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಅಷ್ಪಾಕಅಹ್ಮದ ಲಿಯಾಖತ ಪುಂಗಿ ಅವರು 2ನೇ ಬಾರಿಗೆ ಮಾರ್ಕೆಟಿಂಗ್ ಸೊಸೈಟಿಯ ನಿರ್ದೇಶಕರಾಗಿ ಆಯ್ಕೆಯಾಗಿದ್ದು ಅವರು ಹಾಲಿ ಸಹಾರಾ ಎಜ್ಯೂಕೇಷನ್ ಅಲ್ಫಲ್ ಟ್ರಸ್ಟ್ನ ಅಧ್ಯಕ್ಷರಾಗಿದ್ದು ಅವರಿಗೆ ಟಿಎಪಿಸಿಎಮ್ಎಸ್ನ ಉಪಾಧ್ಯಕ್ಷ ಗಾದಿಯ ಅದೃಷ್ಠ ಒಲಿದು ಬಂದಿದೆ.
Leave a Comment