ಕುಮಟಾ:ಪ್ರಸ್ತಕ ಸಾಲಿನ ರಾಜ್ಯ ಮತ್ತು ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತ ರವೀಂದ್ರ ಭಟ್ಟ ಸೂರಿ ಅವರನ್ನು ಕುಮಟಾ ತಾಲೂಕಿನ ಹೆಗಡೆಯ ಗೆಳೆಯರ ಬಳದ ಪದಾಧಿಕಾರಿಗಳು ಸನ್ಮಾನಿಸಿ, ಗೌರವಿಸಿದರು.
ಸನ್ಮಾನ ಸ್ವೀಕರಿಸಿ, ಡಾ.ರವೀಂದ್ರ ಭಟ್ಟ ಮಾತನಾಡಿ, ಹಿತ್ತಲ ಗಿಡ ಮದ್ದಲ್ಲ ಎಂಬ ಮಾತಿದೆ. ನಮ್ಮೂರಿನ ವ್ಯಕ್ತಿಗಳು ಮಾಡಿದ ಸಾಧನೆ ನಮ್ಮ ಗಮನಕ್ಕೆ ಬರುವುದಿಲ್ಲ. ಆದರೆ ನೀವೆಲ್ಲ ನನ್ನನ್ನು ನಿಮ್ಮೂರಿನವನು ಎಂಬ ಅಭಿಮಾನದಿಂದ ಸನ್ಮಾನಿಸಿ, ಗೌರವಿಸಿದ್ದೀರಿ. ಈ ಸನ್ಮಾನ ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಮತ್ತಷ್ಟು ಸಾಧನೆ ಮಾಡಲು ಇದು ನನಗೆ ಪ್ರೇರಣೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ.ಜಿ.ಜಿ.ಹೆಗಡೆ ಮಾತನಾಡಿ, ಸಾಧಕರನ್ನು ಗೌರವಿಸುವ ಸಂಪ್ರದಾಯ ಉತ್ತಮವಾದದ್ದು. ಇಂತಹ ಕಾರ್ಯಕ್ರಮ ಇನ್ನಷ್ಟು ಜನರಿಗೆ ಸಾಧನೆಗೆ ಪ್ರೇರಣೆಯನ್ನು ನೀಡುತ್ತದೆ. ರವೀಂದ್ರ ಭಟ್ಟ ಅವರ ಕಾರ್ಯ ನಿರ್ವಹಣಾ ಸಾಮಥ್ರ್ಯ ಅದ್ಭುತವಾದೆ. ಅವರು ಕೇವಲ ಶಿಕ್ಷಣ ಕ್ಷೇತ್ರದಲ್ಲಿ ಮಾತ್ರವಲ್ಲದೇ, ವಿವಿಧ ರಂಗದಲ್ಲೂ ವಿಶೇಷ ಸಾಧನೆ ಮಾಡಿದ್ದಾರೆ. ಅವರು ಜಿಲ್ಲಾ ಹಾಗೂ ರಾಜ್ಯ ಪ್ರಶಸ್ತಿಯನ್ನು ಒಂದೇ ವರ್ಷದಲ್ಲಿ ಪಡೆದು ಮಾಡಿದ ವಿಶೇಷ ಸಾಧನೆ ನಮ್ಮ ಊರಿಗೆ ಹೆಮ್ಮೆ ಎಂದರು.
ಹೆಗಡೆ ಗ್ರಾ.ಪಂ ಮಾಜಿ ಅಧ್ಯಕ್ಷ ಮಂಜುನಾಥ ಪಟಗಾರ, ವಿವಿಧ ಸಮಾಜದ ಪ್ರಮುಖರಾದ ರಾಮದಾಸ ಬಾಳೇರಿ, ಕೆ.ಎಂ.ಮುಕ್ರಿ, ಯೋಗೇಶ ಪಟಗಾರ ಅಭಿನಂದನಾ ನುಡಿಗಳನ್ನಾಡಿದರು. ಪತ್ರಕರ್ತ ಅಮರನಾಥ ಭಟ್ಟ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಹೆಗಡೆ ಊರಿನ ವಿವಿಧ ಸಮಾಜದ ಮುಖಂಡರು ಹಾಗೂ ನಾಗರಿಕರು ಉಪಸ್ಥಿತರಿದ್ದರು.
Leave a Comment