ಯಲ್ಲಾಪುರ:
ಪಟ್ಟಣದ ತಾಲೂಕು ಪಂಚಾಯಿತಿ ಆವಾರದ ಹಿಂದೆ ಬೆಳೆದು ನಿಂತ ಪೊದೆ, ಗಿಡಗಂಟಿಗಳನ್ನು ಗಣಪತಿಗಲ್ಲಿ ಶಾಲೆಯ ಮುಖ್ಯಾಧ್ಯಾಪಕ ಆರ್.ಐ. ನಾಯ್ಕ ಸ್ವಚ್ಛಗೊಳಿಸುವ ಮೂಲಕ ಮಾದರಿಯಾಗಿದ್ದಾರೆ.
ತಾ.ಪಂ ಆವರಣದಲ್ಲಿರುವ ಗಾಂಧಿ ಕುಟೀರ, ಸಾಮಥ್ರ್ಯಸೌಧ ಹಾಗೂ ಶಾಸಕರ ಭವನದ ಹಿಂದೆ ನಿರ್ವಹಣೆಯಿಲ್ಲದೇ ಅಪಾರ ಪ್ರಮಾಣದಲ್ಲಿ ಗಿಡಗಂಟಿಗಳು ಬೆಳೆದು ನಿಂತಿತ್ತು. ವರ್ಷಗಳೇ ಕಳೆದರೂ ಅದನ್ನು ಸ್ವಚ್ಛಗೊಳಿಸುವ ಬಗೆಗೆ ಸಂಬಂಧಪಟ್ಟವರು ಗಮನ ಹರಿಸಿರಲಿಲ್ಲ. ಇದನ್ನು ಗಮನಿಸಿದ ಶಿಕ್ಷಕ ಆರ್.ಐ.ನಾಯ್ಕ ವೀಡ್ಕಟರ್ ಮೂಲಕ ಅದನ್ನು ಸ್ವಚ್ಛಗೊಳಿಸಿದ್ದಾರೆ.
ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಆ ನೆಲೆಯಲ್ಲಿ ಸ್ವಚ್ಛತಾ ಕಾರ್ಯವನ್ನು ಮಾಡಿರುವುದಾಗಿ ಆರ್. ಐ. ನಾಯ್ಕ ಹೇಳಿದ್ದಾರೆ.

Leave a Comment