ಕುಮಟಾ: ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವಾಹನವನ್ನು ಹಿಂದಿಕ್ಕಲು ಅತಿವೇಗ ಹಾಗೂ ನಿಷ್ಕಾಳಜಿಯಿಂದ ಟವೆರಾ ವಾಹನವನ್ನು ಚಲಾಯಿಸಿ, ಎದುರಿನಿಂದ ಬರುತ್ತಿದ್ದ ಲಾರಿಗೆ ಅಪಘಾತ ಪಡಿಸಿದ ಘಟನೆ ಕುಮಟಾ ತಾಲೂಕಿನ ಮಿರ್ಜಾನ ಸಮೀಪದ ಖೈರೆಯಲ್ಲಿ ಸಂಭವಿಸಿದೆ.
ಟವೆರಾ ವಾಹನ ಚಾಲಕ ಬೆಳಗಾವಿ ಜಿಲ್ಲೆಯ ಚಂದೂರ ನಿವಾಸಿ ಮಹಾಂತೇಶ ಪಾಟೀಲ್(24) ಹಾಗೂ ಬೆಳಗಾವಿಯ ಸುಳೇಬಾವಿ ನಿವಾಸಿ ಶಶಿ ಲಕ್ಷ್ಮಣ ಉದ್ಯನ್ನನವರ್(24) ಗಾಯಗೊಂಡವರಾಗಿದ್ದಾರೆ. ಟವೆರಾ ವಾಹನದ ಚಾಲಕ ಕುಮಟಾ ಕಡೆಯಿಂದ ಅತಿವೇಗ ಹಾಗೂ ನಿಷ್ಕಾಳಜಿಯಿಂದ ವಾಹನ ಚಲಾಯಿಸಿ, ಎದುರಿನಲ್ಲಿ ಸಾಗುತ್ತಿರುವ ವಾಹನವನ್ನು ಓವರ್‍ಟೇಕ್ ಮಾಡಿ, ಅಂಕೋಲಾ ಕಡೆಯಿಂದ ಕುಮಟಾ ಕಡೆಗೆ ಬರುತ್ತಿದ್ದ ಲಾರಿಗೆ ಡಿಕ್ಕಿಪಡಿಸಿದ್ದಾನೆ. ಟವೆರಾ ವಾಹನದಲ್ಲಿದ್ದ ಇಬ್ಬರು ಗಾಯಗೊಂಡಿದ್ದು, ಎರಡೂ ವಾಹನಗಳು ಜಖಂಗೊಂಡಿದೆ. ಸ್ಥಳಕ್ಕೆ ಕುಮಟಾ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Comment