ಭಟ್ಕಳ :ತಾಲೂಕಾ ಆಡಳಿತ, ತಾಲೂಕಾ ಪಂಚಾಯತ, ಪುರಸಭೆ ಹಾಗೂ ಪಟ್ಟಣ ಪಂಚಾಯತ್ ಜಾಲಿ ಇವರ ಸಂಯುಕ್ತ ಆಶ್ರಯದಲ್ಲಿ 65ನೇ ಕರ್ನಾಟಕ ರಾಜ್ಯೋತ್ಸವವನ್ನು ಸಹಾಯಕ ಆಯುಕ್ತ ಭರತ್ ಸೆಲ್ವಂ ತಾಲೂಕಾ ಕ್ರೀಡಾಂಗಣದಲ್ಲಿ ಶ್ರೀಭುವನೇಸ್ವರಿ ದೇವಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದಸಹಾಯಕ ಆಯುಕ್ತ ಭರತ್ ಸೆಲ್ವಂ ಕರ್ನಾಟಕ ಏಕೀಕರಣಕ್ಕಾಗಿ ದುಡಿದ ಕನ್ನಡಕ್ಕಾಗಿ ಹೋರಾಟ ಮಾಡಿದ ಹೋರಾಟಗಾರರು ಅಖಂಡ ಕರ್ನಾಟಕದ ರಚನೆಗೆ ಶ್ರಮಿಸಿದ್ದಾರೋ ಅವರೆಲ್ಲ ನೆನಪಿಸಿಕೊಳ್ಳುವ ದಿನವೂ ಆಗಿದೆ . ಸರ್ಕಾರಿ ನೌಕರರಾದ ನಾವೆಲ್ಲ ಕಚೇರಿಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಎಲ್ಲಾ ಸರ್ಕಾರಿ ಹೆಚ್ಚಾಗಿ ಕನ್ನಡ ಭಾಷೆಯಲ್ಲಿ ಮಾತನಾಡಿ ಕನ್ನಡ ಭಾಷೆಯನ್ನು ಜೀವಂತವಾಗಿರಿಸೋಣ ಎಂದು ಹೇಳಿದರು
ಈ ಸಂಧರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರ ಪೈಕಿ ಸಂಗೀತ ಕ್ಷೇತ್ರದಲ್ಲಿ ಈಶ್ವರ ನಾಯ್ಕ ಹಕ್ರೆ, ಸಾಹಿತ್ಯದಲ್ಲಿ ಪೊಲೀಸ ಕಾನ್ಸ್ಟೇಬಲ್ ಮಂಜುನಾಥ ನಾಯ್ಕ ಯಲ್ವಡಿಕವರು., ಜನಪದ ಕಲೆಯಲ್ಲಿ ದಾಮೋದರ ಗೊಂಡ ಹೋದ್ಲುರು, ಯಕ್ಷೆಗಾನ ತಾಳ ಮದ್ದಳೆಯಲ್ಲಿ ನಾರಾಯಣ ಮಧ್ಯಸ್ಥ, ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಇದೆ ಮೊದಲ ಬಾರಿಗೆ ಈ ವರ್ಷದದಿಂದ ಸಹಾಯಕ ಆಯುಕ್ತ ಭರತ್ ಸೆಲ್ವಂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉರ್ದು ಶಾಲೆಯಲ್ಲಿ ತೃತೀಯ ಭಾಷೆಯಲ್ಲಿ ಕನ್ನಡ ಅತಿ ಹೆಚ್ಚು ಅಂಕ ಪಡೆದ 3 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಸನ್ಮಾನ ಮಾಡಲಾಯಿತು
ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಇಲ್ಲಿನ ತಾಲೂಕಾ ಕ್ರೀಡಾಂಗಣದಲ್ಲಿ ಭುವನೇಶ್ವರಿ ದೇವಿಗೆ ಸಹಾಯಕ ಆಯುಕ್ತರು, ಅಧಿಕಾರಿಗಳು ಪೂಜೆ ಸಲ್ಲಿಸಿ ಧ್ವಜಾರೋಹಣ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ಈ ಬಾರಿ ಕೋರೊನಾ ಹಿನ್ನೆಲೆಯಲ್ಲಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವಿಲ್ಲವಾಗಿದ್ದು ಆದರೆ ಸರ್ಕಾರಿ ನೌಕರು ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಬೆರಳೆಣಿಕೆಯಷ್ಟು ಬಂದಿರುವುದು ವಿಷಾದನಿಯವಾಗಿದೆಯವಾಗಿದೆ.
Leave a Comment