ಕುಮಟಾ: ಗ್ರಾಹಕರ ಸೋಗಿನಲ್ಲಿ ಬಂದ ವ್ಯಕ್ತಿಯೋರ್ವ ಇಲೆಕ್ಟ್ರಿಕಲ್ ಅಂಗಡಿಯಿಂದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವೈರಿಂಗ್ ಬಂಡಲ್ ಯಾಮಾರಿಸಿರುವ ಘಟನೆ ಕುಮಟಾ ಪಟ್ಟಣದ ಎಸ್.ಬಿಐ. ಬ್ಯಾಂಕ್ ಎದುರಿನ ಜಗದಂಬಾ ಇಲೆಕ್ಟ್ರಿಕಲ್ ಅಂಗಡಿಯಲ್ಲಿ ನಡೆದಿದೆ.

ಅಂಗಡಿಗೆ ಬಂದ ಈ ವ್ಯಕ್ತಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವೈರಿಂಗ್ ಖರೀದಿ ಮಾಡಿದ್ದಾನೆ. ಬಳಿಕ ಅಂಗಡಿಯವನಿಗೆ ಚೆಕ್ ನೀಡಿದ್ದು, ಆತನಿಂದ ಚೆಕ್ ಪಡೆದ ಅಂಗಡಿ ಮಾಲೀಕ, ಗ್ರಾಹಕನಿಗೆ ನೀವು ಇಲ್ಲೆ ನಿಂತಿರಿ ಎಂದು ಎದುರಿಗೆ ಇದ್ದ ಬ್ಯಾಂಕ್ಗೆ ಹೋಗಿ ಚೆಕ್ ಹಾಕಿ ಹಣ ತೆಗೆದುಕೊಂಡು ಬರುವುದಾಗಿ ಹೇಳಿ ಹೋಗಿದ್ದನು. ಆದರೆ ಈ ಖತರ್ನಾಕ್ ಕಳ್ಳ ಅಂಗಡಿಯಲ್ಲಿ ಖರೀದಿ ಮಾಡಿದ ಲಕ್ಷಾಂತ ಬೆಲೆಯ ವೈಯರ್ ಬಂಡಲ್ನ್ನು ತನ್ನ ಕಾರಿನಲ್ಲಿ ತುಂಬಿಕೊಂಡು ಪರಾರಿಯಾಗಿದ್ದಾನೆ. ಈತನ ಕೃತ್ಯ ಸಿ.ಸಿ.ಟಿ.ವಿ.ಯಲ್ಲಿ ಸೆರೆಯಾಗಿದ್ದು, ಆತನ ಬ್ಯಾಂಕ್ ಖಾತೆಯನ್ನು ಪರಿಶೀಲನೆ ನಡೆಸಲಾಗಿದ್ದು, ಬ್ಯಾಂಕ್ ಖಾತೆಯಲ್ಲಿ ಉಮರ್ ಎಂದು ನಮೂದಾಗಿದೆ. ಕಳ್ಳನ ಶೋಧ ಕಾರ್ಯಕ್ಕೆ ಕುಮಟಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Leave a Comment