ಯಲ್ಲಾಪುರ:
ತಾಲೂಕಿನ ಚಿಪಗೇರಿಯ ಮಜ್ಜಿಗೆಹಳ್ಳದ ಬಳಿ ದಾಕ್ಲು ದೊಯಿಪೊಡೆ ಅವರ ಭತ್ತದ ಗದ್ದೆಗೆ ಹಳ್ಳದ ನೀರು ನುಗ್ಗಿ ಪ್ರತಿ ವರ್ಷ ಬೆಳೆಹಾನಿಯಾಗುತ್ತಿರುವ ಪ್ರದೇಶಕ್ಕೆ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಭೇಟಿ ನೀಡಿ ಪರಿಶೀಲಿಸಿದರು.
ಪ್ರತಿ ವರ್ಷ ಗದ್ದೆಗೆ ಹಳ್ಳದ ನೀರು ನುಗ್ಗಿ ಬೆಳೆಹಾನಿ ಉಂಟಾಗುತ್ತಿದ್ದು, ಹಳ್ಳ ಬೇರೆಡೆಯಿಂದ ಹರಿಯುವಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡುವಂತೆ ಗ್ರಾಮಸ್ಥರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಂತಾರಾಮ ಸಿದ್ದಿ, ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಪರ್ಯಾಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು.

Leave a Comment