ಕರಾವಳಿ ಮಲೆ ನಾಡಿನಲ್ಲಿ ಮಳೆಯ ಲಕ್ಷಣಗಳು ಕಡಿಮೆಯಾದ ಸೂಚನೆ ಎಂಬAತೆ ಸಣ್ಣ ಪ್ರಮಾಣದಲ್ಲಿ ಮಂಜು ಬೀಳುವುದಕ್ಕೆ ಸುರುವಾಗಿರುವ ಈ ಸಮಯದಲ್ಲಿ ಚಿಟ್ಟೆಗಳಾಗಿ ರೂಪಾಂತರವಾಗುವ ಕಂಬಳಿಹುಳಗಳ ಸಂತತಿ ಎಲ್ಲೆಂದರಲ್ಲಿ ಕಂಡುಬರುತ್ತಿದೆ. ಹಸಿರು ಎಲೆಗಳನ್ನು ಗಬಗಬನೆ ಮುಕ್ಕುವ ಲಾರ್ವಾಗಳು ಮರದಲ್ಲಿ ನೇತಾಡುತ್ತಿರುತ್ತವೆ. ಕಂಬಳಿ ಹುಳಗಳು ಮರದಲ್ಲಿ ನೇತಾಡಿದರೆ ಏನಪ್ಪಾ ತೊಂದರೆ ಅಂದುಕೊಳ್ಳುತ್ತಿದ್ದರಾ ತೊಂದರೆ ಇರುವುದೇ ಅಲ್ಲಿ.
ಕರಾವಳಿ ಮಲೆನಾಡಿನ ಯಾವುದೇ ರಸ್ತೆಯಲ್ಲಿ ಸಾಗಿದರೂ ರಸ್ತೆಯ ಎರಡೂ ಬದಿಯಲ್ಲಿ ಗಿಡ ಮರಗಳು ಕಾಣಸಿಗುತ್ತವೆ. ಬಹಳಷ್ಟುಕಡೆ ಮರದ ಟೊಂಗೆಗಳು ರಸ್ತೆಗೆ ಚಾಚಿಕೊಂಡಿರುತ್ತವೆ. ರಸ್ತೆಬದಿಯಲ್ಲಿರುವ ಮರಗಳಲ್ಲಿ ನೇತಾಡುತ್ತಿರುವ ಕಂಬಳಿ ಹುಳಗಳು ಬೈಕ್ ಸವಾರರ ಮೈಮೇಲೆ ಬಿದ್ದರೆ ವಿಪರೀತ ತುರಿಕೆ ಕಾಣಿಸಿಕೊಳ್ಳುತ್ತದೆ ಮಾತ್ರವಲ್ಲ ಬೈಕ್ ಚಲಾಯಿಸುತ್ತಿರುವವನ ಕಣ್ಣು ಅಥವಾ ಮುಖಕ್ಕೆ ಕಂಬಳಿ ಹುಳು ಬಡಿದರೆ ವಿಚಲಿತರಾಗಿ ಅಪಘಾತಕ್ಕೀಡಾಗುವ ಸಾಧ್ಯತೆಯೂ ಅಧಿಕ. ಇದೇ ಕಾರಣದಿಂದ ನವೆಂಬರ್ ಇಂದ ಜನೆವರಿ ವರೆಗಿನ ಅವಧಿಯಲ್ಲಿ ಕಾಡಿನಲ್ಲಿ ಹಾದು ಹೋದ ರಸ್ತೆಗಳಲ್ಲಿ ಸಂಚರಿಸುವಾಗ ಮುನ್ನೆಚ್ಚರಿಕಾಕ್ರಮಗಳನ್ನು ಕೈಗೊಳ್ಳಬೇಕು ಎನುತ್ತಾರೆ. ಹೆಲ್ಮೆಟ್ ಧರಿಸುವುದರಿಂದ ಅಪಘಾತಗಳಲ್ಲಿ ಪ್ರಾಣಾಪಾಯದಿಂದ ಪಾರಾಗುವ ಜೊತೆಗೆ ಕಂಬಳಿ ಹುಳಮುಂತಾದ ಕೀಟಗಳಿಂದಲೂ ಸುರಕ್ಷಿತವಾಗಿರಬಹುದು.


Leave a Comment