• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಸ್ಕೂಬಾ ಡೈವಿಂಗ್ ಪುನರಾರಂಭ ಮುರುಡೇಶ್ವರ ದತ್ತ ಪ್ರವಾಸಿಗರ ದಂಡು

November 5, 2020 by bkl news Leave a Comment

ಭಟ್ಕಳ: ಸ್ಕೂಬಾ ಡೈವಿಂಗ್ ಅಂದಾಕ್ಷಣ ಮೊದಲು ನೆನಪಾಗೋದು ಕರಾವಳಿ ಜಿಲ್ಲೆ ಉತ್ತರಕನ್ನಡ. ರಾಜ್ಯದಲ್ಲೇ ಸ್ಕೂಬಾ ಡೈವಿಂಗ್ ಮಾಡಲು ಅನುಕೂಲಕರ ವಾತಾವರಣ ಇರೋದು ಅಂದ್ರೆ ಅದು ಮುರುಡೇಶ್ವರದ ನೇತ್ರಾಣಿಯಲ್ಲಿ. ಕೊರೊನಾ ಹಿನ್ನಲೆಯಲ್ಲಿ ಬಂದ್ ಆಗಿದ್ದ ಸ್ಕೂಬಾ ಡೈವಿಂಗ್‌ಗೆ ಇದೀಗ ಮತ್ತೆ ಚಾಲನೆ ದೊರೆತಿದ್ದು ಪ್ರವಾಸಿಗರೂ ಸಹ ಸ್ಕೂಬಾ ಮಾಡಲು ಮುಗಿಬೀಳುತ್ತಿದ್ದಾರೆ‌.

ಹೌದು, ಒಂದೆಡೆ ವಿಶಾಲವಾದ ಕಡಲತೀರ, ಇನ್ನೊಂದೆಡೆ ಜಲಪಾತ, ಬೆಟ್ಟಗುಡ್ಡಗಳ ಸಾಲನ್ನ ಹೊಂದಿರುವ ಉತ್ತರಕನ್ನಡ ಜಿಲ್ಲೆಗೆ ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ಬಾರಿ ಕೊರೊನಾ ಕಾರಣದಿಂದಾಗಿ ಪ್ರವಾಸೋದ್ಯಮ ಸಾಕಷ್ಟು ನಷ್ಟ ಅನುಭವಿಸುವಂತಾಗಿದ್ದು ಅನ್‌ಲಾಕ್ 5.0 ಜಾರಿ ಬಳಿಕ ಬಂದ್ ಆಗಿದ್ದ ಕೆಲ ಪ್ರವಾಸಿ ತಾಣಗಳು ಮತ್ತೆ ತೆರೆದುಕೊಂಡಿದ್ದವು. ಇದೀಗ ಇದಕ್ಕೆ ಸ್ಕೂಬಾ ಡೈವಿಂಗ್ ಸೇರ್ಪಡೆಯಾಗಿದ್ದು, ಸಮುದ್ರದಾಳದ ವಿಸ್ಮಯ ವೀಕ್ಷಿಸುವ ಪ್ರವಾಸಿಗರಿಗೆ ಜಿಲ್ಲಾಡಳಿತ ಅವಕಾಶ ನೀಡಿದೆ.ಭಟ್ಕಳ ತಾಲ್ಲೂಕಿನ ಮುರ್ಡೇಶ್ವರದಿಂದ ಸುಮಾರು 14 ಕಿಲೋ ಮೀಟರ್ ದೂರದಲ್ಲಿರುವ ನೇತ್ರಾಣಿ ನಡುಗಡ್ಡೆ ಸಮೀಪ ಸ್ಕೂಬಾ ಡೈವಿಂಗ್ ಮಾಡಲಾಗುತ್ತದೆ. ಅಂಡಮಾನ್ ನಿಕೋಬಾರ್ ಹೊರತುಪಡಿಸಿದ್ರೆ ದೇಶದಲ್ಲೇ ಸ್ಕೂಬಾ ಡೈವಿಂಗ್ ನಡೆಸಲು ಸೂಕ್ತ ಪರಿಸರವನ್ನು ಹೊಂದಿರುವ ಏಕೈಕ ತಾಣವಾಗಿರೋದ್ರಿಂದ ರಾಜ್ಯ, ದೇಶ, ವಿದೇಶಗಳ ಪ್ರವಾಸಿಗರೂ ಸಹ ಸ್ಕೂಬಾ ಡೈವಿಂಗ್ ಮಾಡೋದಕ್ಕೆ ಅಂತಾನೇ ಮುರುಡೇಶ್ವರಕ್ಕೆ ಭೇಟಿ ನೀಡುತ್ತಾರೆ. ಆದ್ರೆ ಕೊರೊನಾ ಕಾರಣದಿಂದ ಬಂದ್ ಆಗಿದ್ದ ಸ್ಕೂಬಾ ಡೈವಿಂಗ್ ಇದೀಗ ಮತ್ತೆ ಪ್ರಾರಂಭಗೊಂಡಿದ್ದು ಕೊರೊನಾ ಆತಂಕದ ನಡುವೆಯೂ ಪ್ರವಾಸಿಗರು ಮುಗಿಬೀಳುತ್ತಿದ್ದಾರೆ.

ಇನ್ನು ಕೊರೊನಾ ಹಿನ್ನಲೆಯಲ್ಲಿ ಮೊದಲ ಹಂತದಲ್ಲಿ ಜಿಲ್ಲಾಡಳಿತ ಕಡಲತೀರಗಳು ಹಾಗೂ ದೇವಸ್ಥಾನಗಳಿಗೆ ಮಾತ್ರ ಪ್ರವೇಶಿಲು ಅವಕಾಶವನ್ನು ನೀಡಿತ್ತು. ಇದೀಗ ಜಿಲ್ಲೆಯ ಕೊರೊನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿರುವುದರ ಜೊತೆಗೆ ಪ್ರವಾಸಿಗರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ಸ್ಕೂಬಾ ಡೈವಿಂಗ್ ನಡೆಸಲೂ ಸಹ ಅನುಮತಿ ನೀಡಿದೆ. ಇನ್ನು ಸ್ಕೂಬಾ ಡೈವಿಂಗ್ ಮಾಡಲು ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಮುಗಿಬೀಳುತ್ತಿದ್ದು ಕೊರೊನಾ ಮಾರ್ಗಸೂಚಿಯಂತೆ ಸ್ಕೂಬಾಕ್ಕೆ ಬಳಸುವ ಉಪಕರಣಗಳನ್ನು ಸ್ಯಾನಿಟೈಸ್ ಮಾಡುವಿಕೆಯಂತ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಸಹ ಕೈಗೊಳ್ಳಲಾಗುತ್ತಿದೆ. ಹೀಗಾಗಿ ಪ್ರವಾಸಕ್ಕೆ ಬರಲು ಯಾವುದೇ ಆತಂಕ ಇಲ್ಲ‌ ಅಂತಾ ಸ್ಕೂಬಾ ಆಯೋಜಕರು ತಿಳಿಸಿದ್ದಾರೆ.

ಒಟ್ಟಾರೇ ಕೊರೊನಾ ಸಂಕಷ್ಟದ ನಡುವೆ ಪ್ರವಾಸೋದ್ಯಮ ತೆರೆದುಕೊಳ್ಳುತ್ತಿದ್ದು ಧಾರ್ಮಿಕವಾಗಿಯೂ ಸಾಕಷ್ಟು ಪ್ರಸಿದ್ಧಿ ಹೊಂದಿರುವ ಮುರುಡೇಶ್ವರಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರೂ ಆಗಮಿಸುತ್ತಿದ್ದಾರೆ. ಹೀಗಾಗಿ ಸ್ಕೂಬಾ ಜೊತೆಗೆ ಉಳಿದ ಜಲಸಾಹಸ ಕ್ರೀಡೆಗಳೂ ಸಹ ಚೇತರಿಕೆ ಕಾಣುವಂತಾಗಿದ್ದು ಆಯೋಜಕರೂ ಫುಲ್ ಖುಷ್ ಆಗಿದ್ದಾರೆ.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Bhatkal News, Canara News, Trending, ಪ್ರವಾಸ, ವಿಡಿಯೋ Tagged With: a wide beach, coastal district, even scuba diving, Murudeshwar's Othrarani, recovery, scuba diving, Scuba Diving Resume Murudeshwara Dutta Tourist Horde, Uttarakannad district with hilltops, Uttarakannad. Scuba Diving, Water sports, waterfalls on the other side, ಇನ್ನೊಂದೆಡೆ ಜಲಪಾತ, ಉತ್ತರಕನ್ನಡ. ರಾಜ್ಯದಲ್ಲೇ, ಕರಾವಳಿ ಜಿಲ್ಲೆ, ಜಲಸಾಹಸ ಕ್ರೀಡೆಗಳೂ ಸಹ ಚೇತರಿಕೆ, ಬೆಟ್ಟಗುಡ್ಡಗಳ ಸಾಲನ್ನ ಹೊಂದಿರುವ ಉತ್ತರಕನ್ನಡ ಜಿಲ್ಲೆ, ಮುರುಡೇಶ್ವರದ ನೇತ್ರಾಣಿ, ವಿದೇಶಗಳ ಪ್ರವಾಸಿಗರೂ ಸಹ ಸ್ಕೂಬಾ ಡೈವಿಂಗ್, ವಿಶಾಲವಾದ ಕಡಲತೀರ, ಸ್ಕೂಬಾ ಡೈವಿಂಗ್, ಸ್ಕೂಬಾ ಡೈವಿಂಗ್ ಮಾಡಲು ಅನುಕೂಲಕರ ವಾತಾವರಣ

Explore More:

About bkl news

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,116 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar