ಕಾರವಾರ : ಕರ್ನಾಟಕ ರಕ್ಷಣಾ ಉದ್ಯೋಗದ ಸಂಬಂಧ ಆಂದೋಲನ ಮಾಡಲು ನಿರ್ಣಯ ಮಾಡಲಾಗಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ ಹೇಳಿದರು.ಕಾರವಾರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಮಾಡಿದರು. ಉಗ್ರ ಕ್ರಾಂತಿಕಾರಿ ಹೋರಾಟ ಮಾಡಲಾಗುವುದು.

ಖಾಸಗಿ, ಸರಕಾರಿ ಇಲಾಖೆಗಳಲ್ಲಿ ಶೆ.೧೦೦ ರಷ್ಟು ಉದ್ಯೋಗ ಜಿಲ್ಲೆಯವರಿಗೆ ಮೀಸಲಿಡಬೇಕು. ಅಲಗೇರಿಯಲ್ಲಿ ವಿಮಾನ ನಿಲ್ದಾಣ ಆಗಲಿ. ಆದರೆ ವಿಮಾನ ನಿಲ್ದಾಣಕ್ಕೆ ಸುಕ್ರಿ ಬೊಮ್ಮ ಗೌಡರ ಹೆಸರಿಡಬೇಕು ಎಂದು ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಆಗ್ರಹಿಸಿದರು.ಕೊಂಕಣ ರೈಲ್ವೆಯಲ್ಲಿ ಸ್ಥಳೀಯರಿಗೆ ಶೇ.೫ ರಷ್ಟು ನೌಕರಿಯಿಲ್ಲ.ಸೀಬರ್ಡ ಕಂಪನಿಗಳಲ್ಲಿ ಸ್ಥಳೀಯರಿಗೆ ನೌಕರಿ ಸಿಕ್ಕಿಲ್ಲ.ಇದಕ್ಕೆ ಹೊಣೆಯಾರು.irb ಯಲ್ಲಿ ಶೇ.೮೫ ರಷ್ಟು ಜನ ಹೊರಗಿನವರು. ನ.೨೩ ಕ್ಕೆ ಐಆರ್ ಬಿ ವಿರುದ್ಧ ಹೋರಾಟ ಮಾಡಲಾಗುವುದು. ವೆಸ್ಟಕೊಸ್ಟನಲ್ಲಿ, ಗ್ರಾಸಿಂನಲ್ಲಿ ಬಹಳ ಜನ ಹೊರಗಿನವರು. ಮೊದಲು ಮನವಿ.ನಂತರ ಹೋರಾಟ ಖಚಿತ ಎಂದು ಭಾಸ್ಕರ ಪಟಗಾರ ಹೇಳಿದರು..ಡಿಪ್ಲೊಮಾ ,ಎಂಜಿನಿಯರಿಂಗ್ ಮಾಡಿದವರು ಇದ್ದಾರೆ. ಹಾಗಾಗಿ ಕೆಲಸ ಸಿಗದ ಯುವಕರು ನಮ್ಮ ಜೊತೆ ಬನ್ನಿ ಎಂದು ಕರೆ ನೀಡಿದರು.ಉತ್ತರ ಕನ್ನಡ ಜಿಲ್ಲೆಯ ಉದ್ಯಮಗಳಲ್ಲಿ ಉತ್ತರ ಕನ್ನಡದವರಿಗೆ ಉದ್ಯೋಗ ಎಂಬ ಬ್ಯಾನರ್ ಅಡಿ ಕರವೇ ಹೋರಾಟ ಮಾಡಲಿದೆ ಎಂದರು. ಭೂಮಿ ಕಳೆದು ಕೊಂಡವರಿಗೆ ಹಾಗೂ ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿ ಎಂದರು.
ನರೇಂದ್ರ ತಳೇಕರ, ದತ್ತಾತ್ರೇಯ ಗೌಡ, ರಾಜೇಶ್ ಹರ್ಕಡೆ,ನರೇಂದ್ರ ಮುಂತಾದವರು ಉಪಸ್ಥಿತರಿದ್ದರು.
Leave a Comment