ಯಲ್ಲಾಪುರ :
ತಾಲೂಕಾ ಮಾರ್ಕೆಟಿಂಗ್ ಸೊಸೈಟಿಯು ರೈತರಿಗೆ ಬೇಕಾದ ಎಲ್ಲ ರೀತಿಯ ವಸ್ತುಗಳನ್ನು ಸ್ಪರ್ಧಾತ್ಮಕ ದರದಲ್ಲಿ ಒಂದೇ ಸೂರಿನಡಿ ನೀಡುತ್ತಿದೆ. ರೈತರ ಬೆನ್ನೆಲುಬಾಗಿ ನಿಂತ ಟಿಎಂಎಸ್ ಇಂದು ಉತ್ತಮ ಪ್ರಗತಿಯತ್ತ ಸಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

ಅವರು ಸೋಮವಾರ ಪಟ್ಟಣದ ತಾಲೂಕಾ ಮಾರ್ಕೆಟಿಂಗ್ ಸೊಸೈಟಿಯ ಸೂಪರ್ ಮಾರ್ಟ್ ಆವಾರದಲ್ಲಿ ಟಿಎಂಎಸ್ ವತಿಯಿಂದ ದೀಪಾವಳಿ ಪ್ರಯುಕ್ತ ವಿಶೇಷ ರಿಯಾಯತಿ ದರದ ಮಾರಾಟ ಮೇಳಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ರೈತರಿಗೆ ಸಹಕಾರಿ ಸಂಸ್ಥೆಯೇ ಒಂದು ಶಕ್ತಿಯಾಗಿದೆ. ಸಹಕಾರಿ ಸಂಸ್ಥೆ ಗಟ್ಟಿಯಾಗಿದ್ದಾಗ ಮಾತ್ರ ರೈತರು ಹೆಚ್ಚು ಪ್ರವರ್ಧಮಾನಕ್ಕೆ ಬರಲು ಸಾಧ್ಯ. ಆನಿಟ್ಟಿನಲ್ಲಿ ತಾಲೂಕಿನ ಎಲ್ಲ ಸಹಕಾರಿ ಸಂಸ್ಥೆಗಳು ರೈತರ ಜೊತೆ ಉತ್ತಮ ಸಂಬಂಧವನ್ನಿಟ್ಟುಕೊಂಡು ರೈತರ ಸಂಪಕಷ್ಟಗಳಲ್ಲಿ ಭಾಗಿಯಾಗಿ ಮುನ್ನಡೆಯುತ್ತಿದೆ. ರೈತರು ಕೂಡ ಅಷ್ಟೇ ಪ್ರೀತಿಯಿಂದ ಸಹಕಾರಿ ವ್ಯವಸ್ಥೆಯಲ್ಲಿ ಭಾಗಿಯಾಗಬೇಕೆಂದರು.
ಟಿಎಂಎಸ್ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿ, ತಾಲೂಕಿನ ಪ್ರತಿಯೊಬ್ಬ ಕೃಷಿಕನಿಗೂ ಮತ್ತು ನಗರವಾಸಿಗಳಿಗೂ ಅಗತ್ಯವಾದ ನಿತ್ಯಜೀವನದ ಎಲ್ಲ ವಸ್ತುಗಳು ಮತ್ತು ಕೃಷಿಗೆ ಪೂರಕವಾದ ಎಲ್ಲ ಸಲಕರಣೆಗಳೂ ಗೊಬ್ಬರ ಸೇರಿದಂತೆ ಎಲ್ಲ ಧಾನ್ಯಗಳು ಸ್ಪರ್ಧಾತ್ಮಕ ದರದಲ್ಲಿ ನೀಡುತ್ತಿದ್ದೇವೆ ಎಂದರು.
ಪಂಚಾಯತರಾಜ್ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ಉಪಾಧ್ಯಕ್ಷ ನರಸಿಂಹ ಕೊಣೆಮನೆ, ನಿರ್ದೇಶಕರಾದ ವೆಂಕರಮಣ ಬೆಳ್ಳಿ, ವೆಂಕರಮಣ ಭಟ್ಟ ಕಿರಕುಂಭತ್ತಿ, ಅಡಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ಎಂ.ಆರ್.ಹೆಗಡೆ, ರೈತ ಮುಖಂಡ ಪಿ.ಜಿ.ಭಟ್ಟ, ಬಿಜೆಪಿ ತಾಲೂಕಾಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ್, ಟಿಎಂಎಸ್ನ ಉಮೇಶ ಹೆಗಡೆ, ವಿ.ಟಿ.ಹೆಗಡೆ ತೊಂಡೆಕೆರೆ ಉಪಸ್ಥಿತರಿದ್ದರು.
Leave a Comment