ಭಟ್ಕಳ: ಡಿ19 ರಂದು ನಡೆಯಲಿರುವ ಬೃಹತ್ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ನಡೆಯಿತು.

ಸಭೆಯಲ್ಲಿ ಹಾಜರಿದ್ದ ಹಿರಿಯ ಸಿವಿಲ್ ನ್ಯಾಯಾಧೀಶ ಜಗದೀಶ ಶಿವಪೂಜಿ, ಪ್ರಧಾನ ಸಿವಿಲ್ ನ್ಯಾಯಾಧೀಶ ಆರ್. ನಾಗೇಂದ್ರ, ವಕೀಲರ ಸಂಘದ ಅಧ್ಯಕ್ಷ ಆರ್. ಆರ್. ಶ್ರೇಷ್ಟಿ ರಾಷ್ಟ್ರೀಯ ಲೋಕ ಅದಾಲತ್ ಕುರಿತು ವಿವರಿಸಿದರು.
ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ಪ್ರಯೋಜನ ಪಡೆಯವವರ ಕುರಿತು ಮೊದಲೇ ಮಾಹಿತ ಸಂಗ್ರಹಿಸಿ ನೀಡುವಂತೆ ಹಾಗೂ ನ್ಯಾಯವಾದಿಗಳು ಸರಿಯಾದ ತಿಳುವಳಿಕೆಯನ್ನು ನೀಡಿ ಲೋಕ ಅದಾಲತ್ ಕಾರ್ಯಕ್ರಮವನ್ನು ಅತ್ಯಂತ ಯಶಸ್ವೀಗೊಳಿಸುವತ್ತ ಕ್ರಮ ಕೈಗೊಳ್ಳಬೇಕು ಎಂದೂ ಕೋರಲಾಯಿತು.
ಬ್ಯಾಂಕ್ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಮೋಟಾರು ವಾಹನ ಪ್ರಕರಣಗಳು, ಸಿವಿಲ್ ವ್ಯಾಜ್ಯಗಳು, ಜನನ-ಮರಣ ನೋಂದಣಿಗೆ ಸಂಬಂಧಪಟ್ಟ ಪ್ರಕರಣಗಳು ಇತ್ಯಾದಿಗಳನ್ನು ಹೆಚ್ಚು ಹೆಚ್ಚು ಲೋಕ ಅದಾಲತ್‍ನಲ್ಲಿ ಇಡುವುದಕ್ಕೆ ಕಕ್ಷಿದಾರರಿಗೆ ಮನವರಿಕೆ ಮಾಡಿಕೊಡುವಲ್ಲಿ ಸರಿಯಾದ ಮಾರ್ಗದರ್ಶನ ನೀಡುವಂತೆಯೂ ವಕೀಲರುಗಳಿಗೆ ತಿಳಿಸಲಾಯಿತು.
ಸಭೆಯಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಎಂ.ಜೆ.ನಾಯ್ಕ, ಹಿರಿಯ ವಕೀಲರುಗಳಾದ ಕೆ.ಎಸ್.ರೈ, ಜೆ.ಡಿ.ಭಟ್ಟ, ವಿ.ಎಫ್. ಗೋಮ್ಸ್, ಮಂಜುನಾಥ ಟಿ.ಗೊಂಡ, ನಾಗರಾಜ ಈ.ಎಚ್., ಎಸ್.ಬಿ. ಬೊಮ್ಮಾಯಿ, ಕೆ.ಎಚ್.ನಾಯ್ಕ, ಶಂಕರ ಕೆ. ನಾಯ್ಕ, ಎಂ.ಟಿ.ನಾಯ್ಕ ಮುಂತಾದವರು ಉಪಸ್ಥಿತರಿದ್ದು ತಮ್ಮ ತಮ್ಮ ಅನಿಸಿಕೆಗಳನ್ನು ತಿಳಿಸಿದರು
Leave a Comment