ಕೇಂದ್ರ ಕ್ರೀಡಾ ಸಚಿವಾಲಯ ಖೇಲೋ ಇಂಡಿಯಾ ಯೋಜನೆ ಅಡಿಯಲ್ಲಿ ಮೊದಲ ಬಾರಿಗೆ 2020-21ನೇ ಹಣಕಾಸು ವರ್ಷದಿಂದ ಮುಂದಿನ ನಾಲ್ಕು ವರ್ಷಗಳ ಅವಧಿಗೆ 500 ಖಾಸಗಿ ಕ್ರೀಡಾ ಅಕಾಡೆಮಿಗಳಿಗೆ ಆರ್ಥಿಕ ನೆರವು ನೀಡಲು ಹೊಸ ಪ್ರೋತ್ಸಾಹಕರ ಯೋಜನೆಯನ್ನು ಪರಿಚಯಿಸಿದೆ.

ಈ ಮಾದರಿಯಲ್ಲಿ ಖಾಸಗಿ ಅಕಾಡೆಮಿಗಳಿಗೆ ಆ ಅಕಾಡೆಮಿಗಳು ತರಬೇತಿ ಪಡೆದ ಆಟಗಾರರ ಸಾಧನೆಯ ಗುಣಮಟ್ಟ, ಅಕಾಡೆಮಿಯಲ್ಲಿ ಲಭ್ಯವಿರುವ ಕೋಚ್ ಗಳ ಗುಣಮಟ್ಟ, ಯಾವ ಕ್ಷೇತ್ರದಲ್ಲಿ ಗುಣಮಟ್ಟವಿದೆ ಮತ್ತು ಲಭ್ಯವಿರುವ ಮೂಲಸೌಕರ್ಯ ಹಾಗೂ ಕ್ರೀಡಾ ವಿಜ್ಞಾನ ಸೌಕರ್ಯ ಮತ್ತು ಸಿಬ್ಬಂದಿ ಆಧರಿಸಿ ನಾನಾ ವಿಭಾಗಗಳನ್ನಾಗಿ ಶ್ರೇಣೀಕರಿಸಲಾಗುವುದು. ಅದರಲ್ಲಿ 2028ರ ಒಲಿಂಪಿಕ್ಸ್ ಗೆ ಆಯ್ಕೆ ಮಾಡಿರುವ 14 ಕ್ರೀಡಾ ವಿಭಾಗಗಳಲ್ಲಿ ಆಯ್ಕೆಯಾಗಿರುವ ಕ್ರೀಡೆಗಳ ಅಕಾಡೆಮಿಗಳು ಮೊದಲ ಹಂತದಲ್ಲಿ ಆರ್ಥಿಕ ನೆರವಿಗೆ ಅರ್ಹವಾಗಿರುತ್ತವೆ.
ಈ ನಿರ್ಧಾರದ ಕುರಿತು ಮಾತನಾಡಿದ ಕೇಂದ್ರ ಕ್ರೀಡಾ ಮತ್ತು ಯುವಜನ ವ್ಯವಹಾರಗಳ ಸಚಿವ ಶ್ರೀ ಕಿರಣ್ ರಿಜಿಜು, “ದೇಶದಲ್ಲಿ ಅತ್ಯಂತ ಗುಡ್ಡಗಾಡು ಪ್ರದೇಶಗಳಲ್ಲಿನ ಕ್ರೀಡಾ ಪ್ರತಿಭೆ ಸೌಕರ್ಯಗಳನ್ನು ಉತ್ತೇಜಿಸಲು ಸರ್ಕಾರ ಈ ಪ್ರಮುಖ ನಿರ್ಧಾರ ಕೈಗೊಂಡಿದೆ. ದೇಶದ ನಾನಾ ಭಾಗಗಳಲ್ಲಿ ನಾನಾ ಸಣ್ಣ ಅಕಾಡೆಮಿಗಳು ಅಥ್ಲಿಟ್ ಗಳಿಗೆ ತರಬೇತಿ ನೀಡುವಲ್ಲಿ ಮತ್ತು ಅವರನ್ನು ಗುರುತಿಸುವಲ್ಲಿ ಉತ್ತಮ ಕೆಲಸ ಮಾಡುತ್ತಿವೆ. ಈ ಕ್ರಮದಿಂದಾಗಿ ಎಲ್ಲ ಅಕಾಡೆಮಿಗಳಿಗೆ ವಿಶೇಷವಾಗಿ ಖಾಸಗಿ ಅಕಾಡೆಮಿಗಳಿಗೆ ಉತ್ತೇಜನ ನೀಡುವ ಗುರಿ ಹೊಂದಲಾಗಿದೆ. ಜೊತೆಗೆ ಆ ಅಕಾಡೆಮಿಗಳ ಮೂಲಸೌಕರ್ಯ, ಸಂಪನ್ಮೂಲ ಮತ್ತು ಕ್ರೀಡಾ ವಿಜ್ಞಾನ ಸಲಕರಣೆಗಳನ್ನು ಅಭಿವೃದ್ಧಿಪಡಿಸಲು ಹಾಗೂ ಅವರಿಗೆ ಉತ್ತಮ ತರಬೇತಿ ನೀಡಲು ನೆರವಾಗಲಿದೆ’’ಎಂದರು.
ಈ ನಿರ್ಧಾರದ ಕುರಿತಂತೆ ಪ್ರತಿಕ್ರಿಯಿಸಿರುವ ಒಲಿಂಪಿಕ್ ಪದಕ ವಿಜೇತ ಗಗನ್ ನಾರಂಗ್, ಅವರೂ ಕೂಡ ಖಾಸಗಿ ಕ್ರೀಡಾ ಅಕಾಡೆಮಿಯನ್ನು ನಡೆಸುತ್ತಿದ್ದು, ಗಗನ್ ನಾರಂಗ್ ಉತ್ತೇಜನ ಫೌಂಡೇಷನ್ ಹೆಸರಿನಲ್ಲಿ ತರಬೇತಿ ನೀಡುತ್ತಿದ್ದಾರೆ. ಅವರು “ಈ ನಿರ್ಧಾರ ಖಾಸಗಿ ಅಕಾಡೆಮಿಗಳಿಗೆ ತುಂಬಾ ಉತ್ತೇಜನಕಾರಿಯಾಗಲಿದೆ. ಏಕೆಂದರೆ ಇದರಿಂದ ವಿಶ್ವದರ್ಜೆಯ ಮೂಲಸೌಕರ್ಯ ಸೃಷ್ಟಿಯಾಗುವುದಲ್ಲದೆ, ಅವರಿಗೆ ಉತ್ತೇಜನ ಸಿಗಲಿದೆ. ವಿಶ್ವದರ್ಜೆಯ ಅಥ್ಲೀಟ್ ಅಭಿವೃದ್ಧಿಗೆ ಉತ್ತಮ ಸಂಪನ್ಮೂಲಗಳು ಲಭ್ಯವಾಗಲಿವೆ’’ ಎಂದರು.
ಈ ಯೋಜನೆಯಡಿ ಎಸ್ಎಐ ಮತ್ತು ಎನ್ಎಸ್ಎಫ್ ಗಳು ಒಟ್ಟಾಗಿ ಕಾರ್ಯನಿರ್ವಹಿಸಲಿವೆ. ಎಸ್ಎಐ, ಎನ್ಎಸ್ಎಫ್ ಗಳ ಜೊತೆ ಸಮಾಲೋಚನೆ ನಡೆಸಲಿದೆ ಮತ್ತು ವರ್ಗೀಕರಣ ಮತ್ತು ಅಕಾಡೆಮಿಗಳ ಶ್ರೇಯಾಂಕವನ್ನು ಜಾರಿಗೊಳಿಸಲಿದೆ. ಎಷ್ಟು ಅಕಾಡೆಮಿಗಳಿಗೆ ನೆರವು ನೀಡಬೇಕು, ಎಷ್ಟು ಪ್ರಮಾಣದ ನೆರವು ನೀಡಬೇಕು ಎಂಬ ಕುರಿತು ಪ್ರತಿಯೊಂದು ಎನ್ಎಸ್ಎಫ್ ಗಳ ಸಾಮರ್ಥ್ಯ ಅರಿತು ಹೂಡಿಕೆ ಅಗತ್ಯತೆಗಳನ್ನು ಒಲಿಂಪಿಕ್ಸ್ ನಲ್ಲಿ ಶ್ರೇಷ್ಠತೆ ಉತ್ತೇಜನಕ್ಕೆ ಈ ಪ್ರೋತ್ಸಾಹ ದನ ಮಾದರಿಯನ್ನು ಆಯಾ ವಿಭಾಗಗಳಲ್ಲಿ ಜಾರಿಗೊಳಿಸಲಾಗುವುದು. ಒಟ್ಟಾರೆ ಗುಣಮಟ್ಟದ ತರಬೇತಿ ಸುಧಾರಣೆಗೆ ಎಲ್ಲ ಅಕಾಡೆಮಿಗಳಲ್ಲಿ ಕ್ರೀಡಾ ವಿಜ್ಞಾನ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಒತ್ತು ನೀಡಲಾಗುವುದು.
ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ ಪುಲ್ಲೆಲಾ ಗೋಪಿಚಂದ್, ಅವರು ಸರ್ಕಾರಕ್ಕೆ ಮತ್ತು ಎಸ್ಎಐಗೆ ಧನ್ಯವಾದಗಳನ್ನು ಹೇಳಿದ್ದಾರೆ. “ಇದು ದೇಶದಲ್ಲಿ ಕ್ರೀಡೆಗೆ ಉತ್ತೇಜನ ನೀಡುವ ಅತ್ಯಂತ ಮಹತ್ವದ ಹೆಜ್ಜೆಯಾಗಿದೆ ಮತ್ತು ಇದು ಎಲ್ಲ ವರ್ಗದ ಕ್ರೀಡಾ ವ್ಯಕ್ತಿಗಳಿಗೆ ಅನುಕೂಲವಾಗಲಿದೆ ಹಾಗೂ ಒಟ್ಟಾರೆ ಕ್ರೀಡಾ ಪೂರಕ ವಾತಾವರಣ ನಿರ್ಮಾಣವಾಗಲಿದೆ. ಕ್ರೀಡಾ ವಲಯದಲ್ಲಿ ಮುನ್ನಡೆಯಲು ಇದು ಅತ್ಯಂತ ಮಹತ್ವದ ಹೆಜ್ಜೆಯಾಗಿದೆ ಹಾಗೂ ಈ ಅದ್ಭುತ ನಿರ್ಧಾರಕ್ಕಾಗಿ ನಾನು ಭಾರತ ಸರ್ಕಾರದ ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರವನ್ನು ಅಭಿನಂದಿಸುತ್ತೇನೆ ಎಂದು ಗೋಪಿಚಂದ್ ಹೇಳಿದ್ದಾರೆ.
Leave a Comment