
ಹಳಿಯಾಳ:- ರಾಜ್ಯದ ಹಿರಿಯ ಪತ್ರಕರ್ತ, ಹಾಯ್ ಬೆಂಗಳೂರು ಪತ್ರಿಕೆ ಸಂಸ್ಥಾಪಕ, ಸಾಹಿತಿ ರವಿ ಬೆಳಗೆರೆ ಅವರನ್ನು ಕಳೆದುಕೊಂಡಿದ್ದು ಪತ್ರಿಕಾ ರಂಗಕ್ಕೆ ಅಷ್ಟೇ ಅಲ್ಲದೇ ಸಾಹಿತ್ಯ ಕ್ಷೇತ್ರಕ್ಕೂ ತುಂಬಲಾರದ ನಷ್ಟವಾಗಿದೆ ಎಂದು ಉತ್ತರ ಕನ್ನಡ ಜಿಲ್ಲೆ ಶರಣ ಸಾಹಿತ್ಯ ಪರಿಷತ್ನ ಜಿಲ್ಲಾಧ್ಯಕ್ಷ ಶಿವದೇವ ದೇಸಾಯಿಸ್ವಾಮಿ ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆ ಹಳಿಯಾಳ ಘಟಕದಿಂದ ಪಟ್ಟಣದ ಪ್ರಮುಖ ಶ್ರೀ ಶಿವಾಜಿ ವೃತ್ತದಲ್ಲಿ ದಿ.ರವಿ ಬೆಳಗೆರೆ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಕ್ಯಾಂಡಲ್ ಬೆಳಗಿಸುವ ಮೂಲಕ ಭಾವಪೂರ್ಣ ಶೃದ್ದಾಂಜಲಿ ಸಲ್ಲಿಸಲಾಯಿತು.
ಹಳಿಯಾಳ ನಾಗರೀಕ ವೇದಿಕೆ ಅಧ್ಯಕ್ಷ ಮಂಜುನಾಥ ಮಾದರ, ಪತ್ರಕರ್ತ ಯೋಗರಾಜ ಎಸ್.ಕೆ., ರವಿ ಬೆಳೆಗೆರೆ ಅಭಿಮಾನಿ ನಾಗೇಶ ಹೆಗಡೆ ಮಾತನಾಡಿದರು.
ಈ ಸಂದರ್ಭದಲ್ಲಿ ಕರವೇ ಹಳಿಯಾಳ ತಾಲೂಕಾ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ, ಪ್ರಮುಖರಾದ ಚಂದ್ರಕಾಂತ ದುರ್ವೆ, ಮಹೇಶ ಆನೆಗುಂದಿ, ಸುರೇಶ, ರಾಮಾ, ಸುಧಾಕರ ಇತರರು ಇದ್ದರು.

Leave a Comment