ಭಟ್ಕಳ: ರಾಷ್ಟ್ರೀಯ ಹೆದ್ದಾರಿ- 66 ರಿಂದ ರೈಲ್ವೆ ನಿಲ್ದಾಣ ರಸ್ತೆಗೆ ಹೋಗುವ ರಸ್ತೆಯನ್ನು ಅಂಡರ್ ಪಾಸ್ ನೀಡುವ ಕುರಿತು ಸಹಾಯಕ ಆಯುಕ್ತರ ಮೂಲಕ ಜಿಲ್ಲಾಧಿಕಾರಿಗಳಿಗೆ ಫೈಜಾನ್ ಅಹ್ಮದ್ ಸೌದಾಗರ್ ಹಾಗೂ ಉಸ್ಮಾನ್ ನಗರದ ನಿವಾಸಿಗಳು ಶುಕ್ರವಾರದಂದು ಭಟ್ಕಳ ಸಹಾಯಕ ಆಯುಕ್ತರ ಮೂಲಕ ಮನವಿ ಸಲ್ಲಿಸಿದರು.

ಮನವಿಯಲ್ಲಿ ಉಸ್ಮಾನ್ ನಗರ, ಗುಳ್ಮಿ, ಬೆಳಲಖಂಡ, ಕಿದ್ವಾಯ್ ರಸ್ತೆ ಹಾಗೂ ಭಟ್ಕಳ ರೈಲ್ವೆ ನಿಲ್ದಾಣಕ್ಕೆ ಹೋಗುವವರಿಗೆ ಅಧಿಕೃತ ರಸ್ತೆಯಿದ್ದು, ರಸ್ತೆಯಲ್ಲಿ ದಿನಾಲು ನೂರಾರು ವಾಹನಗಳು, ಶಾಲಾ ಬಸ್ಸುಗಳು, ಖಾಸಗಿ ಕಾರು ಇತ್ಯಾದಿಗಳು ವಾಹನಗಳು ಓಡಾಡುತ್ತವೆ. ರಾಷ್ಟ್ರೀಯ ಹೆದ್ದಾರಿ ಅಗಲೀಕರಣದಿಂದಾಗಿ ಈ ಭಾಗವು ಭಟ್ಕಳ ನಗರದಿಂದ ಪ್ರತ್ಯೇಕವಾದಂತಾಗಲಿದ್ದು ಈ ಭಾಗಕ್ಕರ ಅಂಡರ್ ಪಾಸ್ ತೀವ್ರ ಅಗತ್ಯವಾಗಿರುತ್ತದೆ. ಈ ರಸ್ತೆಯೂ ರೈಲ್ವೆ ನಿಲ್ದಾಣ ಸೇರಿದಂತೆ ಪ್ರಮುಖ ರಸ್ತೆಯ ಸಂಪರ್ಕ ಹೊಂದಲಿದ್ದು, ಸಾಕಷ್ಟು ಮನೆಗಳು ಈ ಭಾಗದಲ್ಲಿವೆ.
ಇನ್ನು ಈ ಭಾಗದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ಹರಿಜನ, ಗಿರಿಜನ, ಸರಕಾರಿ ಸಂಸ್ಥೆ, ಪಶುವೈದ್ಯ ಇಲಾಖೆ ಆಸ್ಪತ್ರೆ, ಹಿಂದೂ ರುದ್ರಭೂಮಿ, ಸರ್ಕಾರಿ ಶಾಲೆ, ಮಹಿಳಾ ಮಂಡಳ ಗಿರಿಜನ ವಿವಿಧೋದ್ದೇಶ ಸಹಕಾರಿ ಸಂಘ, ಲ್ಯಾಂಪ್ಸ್ ಸೊಸೈಟಿ ಸೇರಿದಂತೆ ಸುಮಾರು 500 ಕ್ಕೂ ಹೆಚ್ಚು ಮನೆಗಳಿದ್ದು 4 ಸಾವಿರದಷ್ಟು ಜನಸಂಖ್ಯೆ ಈ ಭಾಗದಲ್ಲಿ ಇದು ಈ ಹಿಂದೆ ಯೋಜನಾ ನಿರ್ದೇಶಕರು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಂಗಳೂರು ಇವರಿಗೆ ಸಹಾಯಕ ಆಯುಕ್ತರ ಮೂಲಕ ಅಂಡರ್ ಪಾಸ್ ನಿರ್ಮಿಸಿ ಕೊಡುವಂತೆ ಮನವಿ ನೀಡಿದ್ದರು ಇನ್ನೂ ತನಕ ಅವರ ಮನವಿಗೆ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಾಲಿ ಈ ಭಾಗದಲ್ಲಿ ರಸ್ತೆ ನಿರ್ಮಾಣ ಕಾರ್ಯ ಆರಂಭ ಮಾಡಿದ್ದು, ಸ್ಥಳಿಯರ ಕೋರಿಕೆಗೆ ಕನಿಷ್ಠ ಉತ್ತರ ಕೊಡುವ ಸೌಜನ್ಯವೂ ಸಹ ಹೆದ್ದಾರಿ ಪ್ರಾಧಿಕಾರವೂ ನೀಡಿಲ್ಲವಾಗಿದೆ.ಈ ಭಾಗದ ಜನರ ಅನುಕೂಲಕ್ಕಾಗಿ ತಕ್ಷಣ ಕ್ರಮ ಕೈಗೊಂಡು ಅಂಡರ ಪಾಸ ಮಾಡಿಕೊಡುವಂತೆ ರಾಷ್ಟ್ರೀಯ ಹೆದ್ದಾರಿ ಅವರಿಗೆ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಈ ಸಂದರ್ಭದಲ್ಲಿ ಉಸ್ಮಾನ್ ನಗರ, ಗುಳ್ಮಿ, ಬೆಳಲಖಂಡ, ಕಿದ್ವಾಯ್ ರಸ್ತೆ ನೂರಾರು ನಿವಾಸಿಗಳು ಇದ್ದರು.
Leave a Comment