• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಅಂತರರಾಷ್ಟ್ರೀಯ ಬೆಳೆ ಸಂಶೋಧನಾ ಸಂಸ್ಥೆ ಕೃಷಿ ಸಂಶೋಧನಾ ಚಟುವಟಿಕೆಗಳಲ್ಲಿ ಡ್ರೋನ್‌ಗಳ ಬಳಕೆಗೆ ಡಿಜಿಸಿಎ ಅನುಮತಿ

November 16, 2020 by Sachin Hegde Leave a Comment

ಕೃಷಿ ಸಂಶೋಧನಾ ಚಟುವಟಿಕೆಗಳಲ್ಲಿ ಡ್ರೋನ್‌ಗಳನ್ನು ಬಳಸಿಕೊಳ್ಳಲು ತೆಲಂಗಾಣದ ಹೈದರಾಬಾದ್‌ನ ಅರೆ-ಶುಷ್ಕ ಉಷ್ಣವಲಯದ ಅಂತಾರಾಷ್ಟ್ರೀಯ ಬೆಳೆ ಸಂಶೋಧನಾ ಸಂಸ್ಥೆಗೆ (ಐಸಿಆರ್‌ಐಎಸ್ಎಟಿ) ನಾಗರಿಕ ವಿಮಾನಯಾನ ಸಚಿವಾಲಯ (ಎಂಒಸಿಎ) ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಷರತ್ತುಬದ್ಧ ಅನುಮತಿ ನೀಡಿವೆ.

Drone Based Survey


ನಾಗರಿಕ ವಿಮಾನಯಾನ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀ ಅಂಬರ್ ದುಬೆ ಮಾತನಾಡಿ, “ಭಾರತದಲ್ಲಿ ಕೃಷಿ ಕ್ಷೇತ್ರದಲ್ಲಿ ವಿಶೇಷವಾಗಿ ತಂತ್ರಜ್ಞಾನ ಆಧಾರಿತ ನಿಖರ ಕೃಷಿ, ಮಿಡತೆ ನಿಯಂತ್ರಣ ಮತ್ತು ಬೆಳೆ ಇಳುವರಿ ಸುಧಾರಣೆಯಲ್ಲಿ ಡ್ರೋನ್‌ಗಳು ದೊಡ್ಡ ಪಾತ್ರ ವಹಿಸಲು ಸಜ್ಜಾಗಿವೆ. ಭಾರತದ 6.6 ಲಕ್ಷಕ್ಕೂ ಹೆಚ್ಚು ಹಳ್ಳಿಗಳಿಗೆ ಕಡಿಮೆ ವೆಚ್ಚದ ಡ್ರೋನ್ ಪರಿಹಾರಗಳನ್ನು ಕಂಡುಹಿಡಿಯುವಂತೆ ಯುವ ಉದ್ಯಮಿಗಳು ಮತ್ತು ಸಂಶೋಧಕರನ್ನು ಸರ್ಕಾರ ಪ್ರೋತ್ಸಾಹಿಸುತ್ತಿದೆ. ” ಎಂದು ಹೇಳಿದರು.
ಷರತ್ತುಬದ್ಧ ಅನುಮತಿಯು ಅದನ್ನು ನೀಡಿದ ದಿನಾಂಕದಿಂದ 6 ತಿಂಗಳವರೆಗೆ ಅಥವಾ ಡಿಜಿಟಲ್ ಸ್ಕೈ ಪ್ಲಾಟ್‌ಫಾರ್ಮ್ (ಹಂತ -1) ನ ಸಂಪೂರ್ಣ ಕಾರ್ಯಾಚರಣೆಯವರೆಗೆ ಮಾನ್ಯವಾಗಿರುತ್ತದೆ. ಕೆಳಗೆ ತಿಳಿಸಿರುವ ಎಲ್ಲಾ ಷರತ್ತುಗಳು ಮತ್ತು ಮಿತಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಮಾತ್ರ ಈ ವಿನಾಯಿತಿ ಮಾನ್ಯವಾಗಿರುತ್ತದೆ. ಯಾವುದೇ ಷರತ್ತಿನ ಉಲ್ಲಂಘನೆಯಾದರೆ ಈ ಅನುಮತಿ ಅನೂರ್ಜಿತವಾಗುತ್ತದೆ.
ರಿಮೋಟ್ ಪೈಲಟ್ ಏರ್‌ಕ್ರಾಫ್ಟ್ ಸಿಸ್ಟಂಗಳನ್ನು ಬಳಸಿಕೊಂಡು ಐಸಿಆರ್‌ಐಎಸ್ಎಟಿಯು ಸಂಶೋಧನಾ ಕ್ಷೇತ್ರದ ಕೃಷಿ ಸಂಶೋಧನಾ ಚಟುವಟಿಕೆಗಳಿಗಾಗಿ ಡೇಟಾ ಪಡೆದುಕೊಳ್ಳಲು ಐಸಿಆರ್‌ಐಎಸ್ಎಟಿಗೆ ಷರತ್ತುಗಳು ಮತ್ತು ಮಿತಿಗಳು ಈ ಕೆಳಕಂಡಂತಿವೆ:
ಸಿಎಆರ್ ಸೆಕ್ಷನ್ 3, ಸರಣಿ ಎಕ್ಸ್, ಭಾಗ I (ಅಂದರೆ 5.2 (ಬಿ), 5.3, 6.1, 6.2, 6.3, 7.1. 7.3, 9.2, 9.3, 11.1 (ಡಿ), 11.2 (ಎ), 12.4), ನಾಗರಿಕ ವಿಮಾನಯಾನ ಸಚಿವಾಲಯವು 1937 ರ ವಿಮಾನ ನಿಯಮಗಳ ನಿಯಮ 15 ಎ ಪ್ರಕಾರ ಐಸಿಆರ್‌ಐಎಸ್ಎಟಿ ಈ ವಿನಾಯಿತಿ ಪಡೆಯುತ್ತದೆ.
ರಿಮೋಟ್ ಪೈಲಟ್ ಏರ್ಕ್ರಾಫ್ಟ್ ಸಿಸ್ಟಮ್ (ಆರ್‌ಪಿಎಎಸ್) ಕಾರ್ಯಾಚರಣೆಗಾಗಿ ಐಸಿಆರ್‌ಐಎಸ್ಎಟಿ (ಎ) ಸ್ಥಳೀಯ ಆಡಳಿತ (ಬಿ) ರಕ್ಷಣಾ ಸಚಿವಾಲಯ (ಸಿ) ಗೃಹ ವ್ಯವಹಾರ ಸಚಿವಾಲಯ (ಡಿ) ಭಾರತೀಯ ವಾಯುಪಡೆ ಮತ್ತು (ಇ) ಭಾರತ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ದಿಂದ ಅಗತ್ಯ ಅನುಮತಿಗಳನ್ನು ಪಡೆದುಕೊಳ್ಳಬೇಕು.
ಐಸಿಆರ್‌ಐಎಸ್ಎಟಿಯು ಭಾರತ ಸರ್ಕಾರಕ್ಕೆ ಸ್ವಯಂಪ್ರೇರಣೆಯಿಂದ ಬಹಿರಂಗಪಡಿಸಿದ ಮತ್ತು ಮಾನ್ಯ ಡ್ರೋನ್ ಸ್ವೀಕೃತಿ ಸಂಖ್ಯೆ (DAN) (ಅಂದರೆ QUADICRISAT2019 ಗಾಗಿ D1DAOOT2C) ಯೊಂದಿಗೆ ನೀಡಲಾದ ರಿಮೋಟ್ ಪೈಲಟ್ ಏರ್ಕ್ರಾಫ್ಟ್ ಸಿಸ್ಟಮ್ ಅನ್ನು ಮಾತ್ರ ಕಾರ್ಯಾಚರಣೆಗೆ ಬಳಸಬೇಕು.
ಐಸಿಆರ್‌ಐಎಸ್ಎಟಿ ಕಾರ್ಯಾಚರಣೆಯ ವ್ಯಾಪ್ತಿ ಮತ್ತು ಎಸ್‌ಒಪಿ ನಕಲನ್ನು ಡಿಜಿಸಿಎಯ ಫ್ಲೈಟ್ ಸ್ಟ್ಯಾಂಡರ್ಡ್ಸ್ ಡೈರೆಕ್ಟೊರೇಟ್ (ಎಫ್‌ಎಸ್‌ಡಿ) ಸಲ್ಲಿಸಬೇಕು. ರಿಮೋಟ್ ಪೈಲಟ್ ಏರ್ಕ್ರಾಫ್ಟ್ ಸಿಸ್ಟಮ್ ಕಾರ್ಯಾಚರಣೆಯನ್ನು ಎಸ್‌ಒಪಿ ಪರಿಶೀಲನೆ / ಅನುಮೋದನೆಯ ನಂತರವೇ ಕೈಗೊಳ್ಳಬೇಕು.
ಡಿಜಿಸಿಎಯ ನಿಯಂತ್ರಣ ಮತ್ತು ಮಾಹಿತಿ ನಿರ್ದೇಶನಾಲಯದಿಂದ ವೈಮಾನಿಕ ಛಾಯಾಗ್ರಹಣಕ್ಕೆ ಸಂಬಂಧಿಸಿದಂತೆ ಐಸಿಆರ್‌ಐಎಸ್ಎಟಿ ಅಗತ್ಯ ಅನುಮತಿ ಪಡೆಯಬೇಕು.
ಆರ್‌ಪಿಎಎಸ್ ಮೂಲಕ ತೆಗೆಯುವ ಛಾಯಾಚಿತ್ರಗಳು/ವಿಡಿಯೋಗಳನ್ನು ತೆಗೆದುಕೊಂಡರೆ ಐಸಿಆರ್‌ಐಎಸ್ಎಟಿ ಮಾತ್ರ ಬಳಸಬೇಕು. ಆರ್‌ಪಿಎಎಸ್‌ ಮತ್ತು ಅದರ ಮೂಲಕ ಸಂಗ್ರಹಿಸಿದ ಡೇಟಾದ ಸುರಕ್ಷತೆಗೆ ಐಸಿಆರ್‌ಐಎಸ್ಎಟಿ ಜವಾಬ್ದಾರವಾಗಿರುತ್ತದೆ.
ಆರ್‌ಪಿಎಎಸ್‌ನ ಕಾರ್ಯಾಚರಣೆಯನ್ನು ವಿಷುಯಲ್ ಲೈನ್ ಆಫ್ ಸೈಟ್ (ವಿಎಲ್‌ಒಎಸ್) ಒಳಗೆ ಹಗಲಿನ ಕಾರ್ಯಾಚರಣೆಗೆ (ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ) ನಿರ್ಬಂಧಿಸಲಾಗುತ್ತದೆ.
ಈ ಕಾರ್ಯಾಚರಣೆಗಳಿಂದ ಡಿಜಿಸಿಎಗೆ ಉಂಟಾಗುವ ಯಾವುದೇ ಕಾನೂನು ಪ್ರಕರಣಗಳು ಅಥವಾ ಸಮಸ್ಯೆಗಳಿಂದಾಗುವ ನಷ್ಟವನ್ನು ಐಸಿಆರ್‌ಐಎಸ್ಎಟಿ ಭರಿಸಬೇಕಾಗುತ್ತದೆ.
ಆರ್‌ಪಿಎಎಸ್ ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿದೆ ಎಂದು ಐಸಿಆರ್‌ಐಎಸ್ಎಟಿ ಖಚಿತಪಡಿಸಿಕೊಳ್ಳಬೇಕು ಮತ್ತು ಅಸಮರ್ಪಕ ಕಾರ್ಯದಿಂದಾಗಿ ಸಂಭವಿಸುವ ಯಾವುದೇ ಘಟನೆಗಳಿಗೆ ಜವಾಬ್ದಾರವಾಗಿರುತ್ತದೆ.
ಸಲಕರಣೆಗಳೊಂದಿಗೆ ಭೌತಿಕ ಸಂಪರ್ಕದಿಂದಾಗಿ ಯಾರಾದರೂ ಗಾಯಗೊಂಡರೆ ವೈದ್ಯಕೀಯ -ಕಾನೂನು ಸಮಸ್ಯೆಗಳಿಗೆ ಐಸಿಆರ್‌ಐಎಸ್ಎಟಿ ಜವಾಬ್ದಾರವಾಗಿರುತ್ತದೆ.
ಆರ್‌ಪಿಎಎಸ್‌ನ ಕಾರ್ಯಾಚರಣೆಯ ಸಮಯದಲ್ಲಿ ಅಪಘಾತ ಸಂಭವಿಸಿ ಯಾರಿಗಾದರೂ ಯಾವುದೇ ಹಾನಿಯಾದರೆ ಅದನ್ನು ಭರಿಸಲು ಐಸಿಆರ್‌ಐಎಸ್ಎಟಿ ವಿಮೆಯನ್ನು ಹೊಂದಿರಬೇಕು.
ಆರ್‌ಪಿಎಎಸ್‌ ಬಳಕೆಯ ಯಾವುದೇ ಸಂದರ್ಭದಲ್ಲೂ ಅಪಾಯಕಾರಿ ವಸ್ತು ಅಥವಾ ವೇರಿಯಬಲ್ ಪೇಲೋಡ್ ಅನ್ನು ಸಾಗಿಸಲಾಗುತ್ತಿಲ್ಲ ಎಂಬುದನ್ನು ಐಸಿಆರ್‌ಐಎಸ್ಎಟಿ ಖಚಿತಪಡಿಸಬೇಕು.
ಐಸಿಆರ್‌ಐಎಸ್ಎಟಿ ಸಾರ್ವಜನಿಕರು, ಆಸ್ತಿಪಾಸ್ತಿ, ಆಪರೇಟರ್ ಇತ್ಯಾದಿಗಳ ಸುರಕ್ಷತೆ ಮತ್ತು ಗೌಪ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು. ಇದಲ್ಲದೆ, ಯಾವುದೇ ಸಂಭವನೀಯ ಅವಘಡದ ಸಂದರ್ಭದಲ್ಲೂ, ಡಿಜಿಸಿಎ ಜವಾಬ್ದಾರವಾಗಿರುವುದಿಲ್ಲ.
ಸಂಬಂಧಿತ ಸಚಿವಾಲಯಗಳು / ಅಧಿಕಾರಿಗಳ ಅನುಮೋದನೆ ಇಲ್ಲದೆ ಸಿಎಆರ್ ಸೆಕ್ಷನ್ 3, ಎಕ್ಸ್ ಸರಣಿ, ಭಾಗ I ರ ಪ್ಯಾರಾ 13.1 ರಲ್ಲಿ ನಿರ್ದಿಷ್ಟಪಡಿಸಿದ 10-ಹಾರಾಟ ವಲಯಗಳಲ್ಲಿ ಆರ್‌ಪಿಎಎಸ್ ಕಾರ್ಯಾಚರಣೆಯನ್ನು ಐಸಿಆರ್‍ಎಸ್ಎಟಿ ನಡೆಸುವಂತಿಲ್ಲ.
ಸಿಎಆರ್‌ನ ನಿಬಂಧನೆಗಳ ಪ್ರಕಾರ ಆರ್‌ಪಿಎಎಸ್ ಅನ್ನು ವಿಮಾನ ನಿಲ್ದಾಣದ ಸುತ್ತಮುತ್ತಲ ಪ್ರದೇಶದಲ್ಲಿ ಕಾರ್ಯಾಚರಣೆ ಮಾಡಕೂಡದು. ವಿಮಾನ ನಿಲ್ದಾಣದ ಬಳಿ ಕಾರ್ಯಾಚರಣೆ ನಡೆಸಬೇಕಾದರೆ, ಆರ್‌ಪಿಎಎಸ್‌ನ ಕಾರ್ಯಾಚರಣೆಯ ಸಮಯ ಮತ್ತು ವಿಸ್ತೀರ್ಣದ ಬಗ್ಗೆ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ದಿಂದ ಮುಂಚಿತವಾಗಿಯೇ ಅನುಮೋದನೆ ಪಡೆದುಕೊಳ್ಳಬೇಕು.
ತರಬೇತಿ ಪಡೆದ / ಅನುಭವಿ ಉತ್ತಮ ಸಿಬ್ಬಂದಿ ಮಾತ್ರ ಆರ್‌ಪಿಎಎಸ್ ಅನ್ನು ನಿರ್ವಹಿಸುತ್ತಿರುವುದನ್ನು ಐಸಿಆರ್‍ಎಸ್ಎಟಿ ಖಚಿತಪಡಿಸಿಕೊಳ್ಳಬೇಕು.
ಈ ಅನುಮತಿ ಇತರ ಸರ್ಕಾರಿ ಏಜೆನ್ಸಿಗಳು ರೂಪಿಸಿದ ರಿಮೋಟ್ ಪೈಲಟ್ ಏರ್ಕ್ರಾಫ್ಟ್ ಸಿಸ್ಟಮ್ ಮೇಲಿನ ಇತರ ನಿರ್ಬಂಧಗಳು/ಎಸ್ಒಪಿಯನ್ನು ಅತಿಕ್ರಮಿಸುವುದಿಲ್ಲ.
ಕಾರ್ಯಾಚರಣೆಯ ಯಾವುದೇ ಹಂತದಲ್ಲಿ ಅವಘಡ / ಅಪಘಾತ ಸಂಭವಿಸಿದರೆ ಅದರ ವರದಿಗಳನ್ನು ಡಿಜಿಸಿಎ ವಾಯು ಸುರಕ್ಷತಾ ನಿರ್ದೇಶನಾಲಯಕ್ಕೆ ಸಲ್ಲಿಸಬೇಕು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: National News, ಕೃಷಿ Tagged With: Aircraft System, ICRISAT responsible, Legal Problem, medical, operators, physical contact, property, Public, Remote Pilot, security and privacy guarantee to the Government of India, Voluntary, ಆಪರೇಟರ್ಸು, ಆಸ್ತಿಪಾಸ್ತಿ, ಏರ್ಕ್ರಾಫ್ಟ್ ಸಿಸ್ಟಮ್, ಐಸಿಆರ್‌ಐಎಸ್ಎಟಿ ಜವಾಬ್ದಾರ, ಕಾನೂನು ಸಮಸ್ಯೆ, ಭಾರತ ಸರ್ಕಾರಕ್ಕೆ ಸ್ವಯಂಪ್ರೇರಣೆ, ಭೌತಿಕ ಸಂಪರ್ಕ, ರಕ್ಷತೆ ಮತ್ತು ಗೌಪ್ಯತೆಯನ್ನು ಖಚಿತ, ರಿಮೋಟ್ ಪೈಲಟ್, ವೈದ್ಯಕೀಯ, ಸಾರ್ವಜನಿಕರು

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...