
ಭಟ್ಕಳ: ಭಟ್ಕಳದ ೨೦ಕ್ಕೆ ಹೆಚ್ಚು ಸ್ಪೋಟ್ಸ್F ಸೆಂಟರ್ ಗಳ ಒಕ್ಕೂಟವಾಗಿರುವ ಭಟ್ಕಳ ಮುಸ್ಲಿಮ್ ಯುತ್ ಫೆಡರೇಶನ್ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ತಂಝೀಮ್ ಸಭಾಂಗಣದಲ್ಲಿ ಭಾನುವಾರ ಸಂಜೆ ನಡೆದಿದ್ದು ಭಟ್ಕಳದ ಪ್ರಸಿದ್ಧ ಜಿಮ್ ಪಟು ಮಿ.ಲಕ್ನೋ ಖ್ಯಾತಿಯ ಮೌಲಾನ ಅಝೀಝುರ್ರಹ್ಮಾನ್ ರುಕ್ನುದ್ದೀನ್ ನದ್ವಿ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದು ಪ್ರಧಾನ ಕಾರ್ಯದರ್ಶಿಯಾಗಿ ಉಮೈರ್ ಸಯೀದ್ ರುಕ್ನುದ್ದೀನ್ ಸರ್ವಾನುಮತದೊಂದಿಗೆ ಆಯ್ಕೆಗೊಂಡರು.
ಉಳಿದಂತೆ ಪ್ರಥಮ ಉಪಾಧ್ಯಕ್ಷ: ಇಸ್ಮಾಯಿಲ್ ಅಂಜುಮ್ ಗಂಗಾವಳಿ ನದ್ವಿ (ಕಾಸ್ಮೋಸ್ ಕ್ರೀಡಾ ಕೇಂದ್ರ), ಎರಡನೇ ಉಪಾಧ್ಯಕ್ಷ: ಮುಹಮ್ಮದ್ ಸಾಜಿದ್ ಮಿಸ್ಬಾ (ಮದೀನಾ ವೆಲ್ಫೇರ್ ಸೊಸೈಟಿ), ಕಾರ್ಯದರ್ಶಿ: ಮೌಲ್ವಿ ವಾಸಿಯುಲ್ಲಾ ಡಿ.ಎಫ್ ನದ್ವಿ (ಅಲ್-ಫಲಾಹ್ ಯುತ್ ಸರ್ವಿಸ್), ಲೆಕ್ಕಪರಿಶೋಧಕ: ಅಫ್ಜಲ್ ಮೊಹ್ತಾಶಮ್ (ಒಮರ್ ಸ್ಟ್ರೀಟ್ ಫ್ರೆಂಡ್ಸ್ ಅಸೋಸಿಯೇಷನ್), ಖಜಾಂಚಿ: ಮೌಲ್ವಿ ಮಿರಾನ್ ಪೋತೆ ನದ್ವಿ ನೇಮಕಗೊಂಡಿದ್ದಾರೆ.
ಯುತ್ ಫೇಡರೇಶನ್ ಪರಿಚಯ: ಭಟ್ಕಳದಲ್ಲಿ ಹಲವಾರು ಸ್ಪೋಟ್ಸ್F ಸೆಂಟರ್ ಗಳಿದ್ದು ಅವುಗಳ ಒಕ್ಕೂಟವನ್ನು ಮಾಡುವ ಉದ್ದೇಶದೊಂದಿಗೆ ೧೯೯೩ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಭಟ್ಕಳ ಮುಸ್ಲಿಮ್ ಯುತ್ ಫೆಡರೇಶನ್ ಒಂದು ಜವಾಬ್ದಾರಿಯುತ ಸಂಘಟನೆಯಾಗಿದ್ದು ಭಟ್ಕಳದಲ್ಲಿ ಕ್ರೀಡಾ ಚಟುವಟಿಕೆಗಳನ್ನು ನಿಯಂತ್ರಿಸುವುದರೊಂದಿಗೆ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡುತ್ತ ಬಂದಿದೆ. ಯುವಕರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವುದರ ಜೊತೆಗೆ ಅವರನ್ನು ಸಮಾಜದ ಉತ್ತಮ ಪ್ರಜೆಯನ್ನಾಗಿ ಬೆಳೆಸುವಲ್ಲಿ ಈ ಫೆಡರೇಶನ್ ಕಾರ್ಯನಿರ್ವಹಿಸುತ್ತಿದೆ.ಇಲ್ಲಿನ ಸಾಮಾಜಿಕ ರಾಜಕೀಯ ಸಂಸ್ಥೆಯಾಗಿರುವ ಮಜ್ಲಿಸೆ ಇಸ್ಲಾಹ್-ವ-ತಂಝಿಮ್ ಸಂಸ್ಥೆಯ ಸಂಯೋಗದೊಂದಿಗೆ ಸಮಾಜದಲ್ಲಿ ಶಾಂತಿ,ಸೌಹಾರ್ಧತೆಯನ್ನು ಕಾಪಾಡಿಕೊಂಡು ಹೋಗುವಲ್ಲಿಯೂ ಇದು ಸಕ್ರೀಯವಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ಮೌಲಾನ ಅಝೀಝುರ್ರಹ್ಮಾನ್ ನದ್ದಿ, ಭಟ್ಕಳದ ಯುವಕರಲ್ಲಿ ಉತ್ತಮ ಪ್ರತಿಭೆಗಳಿದ್ದು ಅವರ ಪ್ರತಿಭೆಗಳನ್ನು ಗುರುತಿಸಿ ಅವರನ್ನು ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ತರಬೇತುಗೊಳಿಸುವುದು, ಭಟ್ಕಳದಲ್ಲಿ ಐದು ಕೇಂದ್ರಿಯ ಸಂಸ್ಥೆಗಳಿಗಾಗಿ ಯುವಕರನ್ನು ನಾಯಕತ್ವಕ್ಕಾಗಿ ಸಿದ್ದಗೊಳಿಸುವುದು ನನ್ನ ಪ್ರಥಮ ಆದ್ಯತೆಯಾಗಿದೆ ಎಂದರು.
ಒಕ್ಕೂಟದ ಹಿಂದಿನ ಸಮಿತಿಯ ಅಧಿಕಾರಾವಧಿಯಲ್ಲಿ, ಸಂವಿಧಾನವನ್ನು ಇತ್ತೀಚೆಗೆ ತಿದ್ದುಪಡಿ ಮಾಡಲಾಗಿದ್ದು, ಇದರಲ್ಲಿ ಒಕ್ಕೂಟಕ್ಕೆ ಸೇರುವ ಪ್ರತಿನಿಧಿಗಳು 47 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು ಎಂದು ಕಡ್ಡಾಯಗೊಳಿಸಲಾಗಿದೆ. ಫೆಡರೇಶನ್ನಲ್ಲಿ ಸೇರ್ಪಡೆಗೊಂಡಿರುವ ಕ್ರೀಡಾ ಕೇಂದ್ರಗಳ ಜೊತೆಗೆ ಇನ್ನೂ ಎರಡು ಕ್ರೀಡಾ ಕೇಂದ್ರಗಳನ್ನು (ಮೂಸಾ ನಗರ ಪ್ರದೇಶದ ಕೋಸ್ಟಲ್ ಕಿಂಗ್ ವೆಲ್ಫೇರ್ ಅಸೋಸಿಯೇಷನ್ ಮತ್ತು ಮೊಹಿ-ಉದ್-ದಿನ್ ಸ್ಟ್ರೀಟ್ನ ಯಂಗ್ ಸ್ಟಾರ್ ವೆಲ್ಫೇರ್ ಅಸೋಸಿಯೇಷನ್) ಪ್ರತಿನಿಧಿಸಲಾಗಿದೆ.
Leave a Comment