• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕಲಬುರ್ಗಿಯಿಂದ ಹಿಂಡಾನ್‌ಗೆ ಮೊದಲ ನೇರ ವಿಮಾನ ಹಾರಾಟಕ್ಕೆ ಚಾಲನೆ

November 19, 2020 by Sachin Hegde Leave a Comment

ಕರ್ನಾಟಕದ ಕಲಬುರ್ಗಿಯಿಂದ ಉತ್ತರ ಪ್ರದೇಶದ ಗಾಜಿಯಾಬಾದ್ನ ಹಿಂಡಾನ್ ವಿಮಾನ ನಿಲ್ದಾಣಕ್ಕೆ ಮೊದಲ ನೇರ ಹಾರಾಟ ಆರಂಭವಾಯಿತು. ಚಾಲನಾ ಕಾರ್ಯಕ್ರಮದಲ್ಲಿ ನಾಗರಿಕ ವಿಮಾನಯಾನ ಸಚಿವಾಲಯ (ಎಂಒಸಿಎ) ಮತ್ತು ಭಾರತ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ದ ಅಧಿಕಾರಿಗಳು ಉಪಸ್ಥಿತರಿದ್ದರು. ಆರ್‌ಸಿಎಸ್-ಉಡಾನ್ (ಪ್ರಾದೇಶಿಕ ಸಂಪರ್ಕ ಯೋಜನೆ – ಉಡೆ ದೇಶ್ ಕಾ ಆಮ್ ನಾಗರಿಕ್) ಅಡಿಯಲ್ಲಿ ಆರಂಭವಾಯಿತು.

air idna1555079990


ಕಲಬುರ್ಗಿ – ದೆಹಲಿ (ಹಿಂಡಾನ್) ಮಾರ್ಗದಲ್ಲಿ ವಿಮಾನ ಕಾರ್ಯಾಚರಣೆಯ ಆರಂಭವು ಉಡಾನ್ ಯೋಜನೆಯಡಿ ದೇಶಕ್ಕೆ ಉತ್ತಮ ವಾಯು ಸಂಪರ್ಕವನ್ನು ಕಲ್ಪಿಸಲು ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಭಾರತ ವಿಮಾನ ನಿಲ್ದಾಣ ಪ್ರಾಧಿಕಾರ ಬದ್ಧತೆ ಮತ್ತು ಪರಿಶ್ರಮಕ್ಕೆ ಅನುಗುಣವಾಗಿದೆ. ಇದುವರೆಗೆ, 5 ಹೆಲಿಪೋರ್ಟ್‌ಗಳು ಮತ್ತು 2 ವಾಟರ್ ಏರೋಡ್ರೋಮ್‌ಗಳು ಸೇರಿದಂತೆ 295 ಮಾರ್ಗಗಳು ಮತ್ತು 53 ವಿಮಾನ ನಿಲ್ದಾಣಗಳನ್ನು ಉಡಾನ್ ಯೋಜನೆಯಡಿ ಕಾರ್ಯಗತಗೊಳಿಸಲಾಗಿದೆ.
ಕಳೆದ ವರ್ಷ ಆರ್‌ಸಿಎಸ್-ಉಡಾನ್ -3 ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಸ್ಟಾರ್ ಏರ್ ವಿಮಾನಯಾನ ಸಂಸ್ಥೆಯು ಕಲಬುರ್ಗಿ – ಹಿಂಡಾನ್ ಮಾರ್ಗವನ್ನು ಪಡೆದುಕೊಂಡಿತ್ತು. ಸಂಸ್ಥೆಯು ಈ ಮಾರ್ಗದಲ್ಲಿ ವಾರದಲ್ಲಿ ಮೂರು ವಿಮಾನಗಳನ್ನು ನಿರ್ವಹಿಸಲಿದ್ದು, ತನ್ನ 50 ಆಸನಗಳ ಎಂಬ್ರೇರ್ -145 ಐಷಾರಾಮಿ ವಿಮಾನಗಳನ್ನು ಈ ಮಾರ್ಗಕ್ಕೆ ನಿಯೋಜಿಸಲಿದೆ. ಇದು ಪ್ರಸ್ತುತ ಉಡಾನ್ ಅಡಿಯಲ್ಲಿ 15 ಮಾರ್ಗಗಳನ್ನು ಸಂಪರ್ಕಿಸುತ್ತಿದ್ದು, ಕಲಬುರ್ಗಿ – ಹಿಂಡಾನ್ ಮಾರ್ಗದ ಸೇರ್ಪಡೆಯೊಂದಿಗೆ, ಸ್ಟಾರ್ ಏರ್ ಸಂಸ್ಥೆಯು ಆರ್‌ಸಿಎಸ್-ಉಡಾನ್ ವ್ಯಾಪ್ತಿಯಲ್ಲಿ 16 ಮಾರ್ಗಗಳಲ್ಲಿ ಕಾರ್ಯಾಚರಿಸುತ್ತದೆ.
ನವದೆಹಲಿಯಿಂದ 30 ಕಿ.ಮೀ. ದೂರದಲ್ಲಿರುವ ಹಿಂಡಾನ್ ವಿಮಾನ ನಿಲ್ದಾಣವು ಭಾರತೀಯ ವಾಯುಪಡೆಗೆ (ಐಎಎಫ್) ಸೇರಿದ್ದು, ಹೊಸ ನಾಗರಿಕ ಎನ್ಕ್ಲೇವ್ ಅಭಿವೃದ್ಧಿಗಾಗಿ ಭೂಮಿಯನ್ನು ಎಎಐಗೆ ಹಸ್ತಾಂತರಿಸಲಾಯಿತು. ಉಡಾನ್ ಯೋಜನೆಯಡಿ ನಾಗರಿಕ ವಿಮಾನಗಳಿಗೆ ಏರ್ ಬೇಸ್ ಬಳಕೆಗೆ ಐಎಎಫ್ ಅಗತ್ಯ ಅನುಮತಿಗಳನ್ನು ನೀಡಿತು. ಹಾಗೆಯೇ, ಕಲಬುರ್ಗಿ ನಗರದಿಂದ 13.8 ಕಿ.ಮೀ ದೂರದಲ್ಲಿರುವ ಕಲಬುರ್ಗಿ ವಿಮಾನ ನಿಲ್ದಾಣವನ್ನು ದೇಶದ 2 ಮತ್ತು 3 ನೇ ಶ್ರೇಣಿ ನಗರಗಳ ವೈಮಾನಿಕ ಸಂಪರ್ಕವನ್ನು ಹೆಚ್ಚಿಸಲು ಉಡಾನ್ ಅಡಿಯಲ್ಲಿ ಕಾರ್ಯಗತಗೊಳಿಸಲಾಗಿದೆ. ಬುದ್ಧ ವಿಹಾರ, ಶರಣ ಬಸವೇಶ್ವರ ದೇವಸ್ಥಾನ, ಖ್ವಾಜಾ ಬಂದೇ ನವಾಜ್ ದರ್ಗಾ ಮತ್ತು ಗುಲ್ಬರ್ಗಾ ಕೋಟೆ ಸೇರಿದಂತೆ ಪ್ರವಾಸಿ ತಾಣಗಳಿಗೆ ಹೆಬ್ಬಾಗಿಲಾಗಿರುವ ಕಲಬುರ್ಗಿಯು ಈಗ ಮೊದಲ ಬಾರಿಗೆ ನೇರ ವಿಮಾನದೊಂದಿಗೆ ದೇಶದ ರಾಜಧಾನಿ ನವದೆಹಲಿಯೊಂದಿಗೆ ಸಂಪರ್ಕ ಹೊಂದಿದೆ. ಇದು ಈ ಪ್ರದೇಶದ ವ್ಯಾಪಾರ ಮತ್ತು ಪ್ರವಾಸೋದ್ಯಮದ ಅಭಿವೃದ್ಧಿಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ.
ಇದುವರೆಗೆ, ಕಲಬುರ್ಗಿಯಿಂದ ಹಿಂಡಾನ್‌ಗೆ ಪ್ರಯಾಣ ಮಾಡಲು ಜನರಿಗೆ ತೀವ್ರ ಅನಾನುಕೂಲಗಳಿದ್ದವು. ಎರಡು ನಗರಗಳ ನಡುವೆ ನೇರ ವಿಮಾನಯಾನ ಕಾರ್ಯಾಚರಣೆ ಲಭ್ಯವಿಲ್ಲದ ಕಾರಣ, ಜನರು ರಸ್ತೆಯ ಮೂಲಕ ಪ್ರಯಾಣಿಸಬೇಕಾಗಿತ್ತು ಅಥವಾ ರೈಲು ಪ್ರಯಾಣವನ್ನು ಅವಲಂಬಿಸಬೇಕಾಗಿತ್ತು. ಎರಡು ನಗರಗಳ ನಡುವಿನ 1600 ಕಿ.ಮೀ ದೂರವನ್ನು ಕ್ರಮಿಸಲು 25 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು. ಈಗ, ನೇರ ವಿಮಾನದ ಮೂಲಕ ಕೇವಲ 2-ಗಂಟೆ 20 ನಿಮಿಷಗಳಲ್ಲಿ ಈ ದೂರವನ್ನು ಕ್ರಮಿಸಬಹುದು. ವೈಯಕ್ತಿಕ ಮತ್ತು ವೃತ್ತಿಪರ ಉದ್ದೇಶಗಳಿಗಾಗಿ ಅನೇಕ ಮಂದಿ ಈ ಎರಡು ನಗರಗಳ ನಡುವೆ ಆಗಾಗ್ಗೆ ಪ್ರಯಾಣಿಸುತ್ತಾರೆ. ವಿಜಯಪುರ, ಸೋಲಾಪುರ, ಬೀದರ್, ಉಸ್ಮಾನಾಬಾದ್, ಲಾತೂರ್, ಯಾದಗೀರ್, ರಂಗಾರೆಡ್ಡಿ, ಮೇಡಕ್ ಜನರು ಕಲಬುರ್ಗಿ – ಹಿಂಡಾನ್ ವಿಮಾನದ ಪ್ರಯೋಜನ ಲಾಭವನ್ನು ಪಡೆಯುತ್ತಾರೆ.

ವಿಮಾನಗಳ ಸಂಚಾರದ ವೇಳಾಪಟ್ಟಿಯನ್ನು ಹೀಗಿದೆ:

ಆರಂಭಿಕ ನಗರತಲುಪುವ ನಗರಹೊರಡುವ ವೇಳೆತಲುಪುವ ವೇಳೆಹಾರಾಟದ ಮಾದರಿಹಾರಾಟದ ದಿನಗಳು
ಕಲಬುರ್ಗಿಹಿಂಡಾನ್ (ದೆಹಲಿ)10.2012.40ತಡೆ ರಹಿತಮಂಗಳವಾರ, ಬುಧವಾರ, ಶನಿವಾರ
ಹಿಂಡಾನ್ (ದೆಹಲಿ)ಕಲಬುರ್ಗಿ13.1015.30ತಡೆ ರಹಿತಮಂಗಳವಾರ, ಬುಧವಾರ, ಶನಿವಾರ

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: National News, Trending Tagged With: Acceleration, Air Operations, Driving Program, Good Air Lines, India Airport, Ministry of Civil Aviation, Rail Travel, RCS-Udon, Schedule of air traffic, tourism development, ಆರ್‌ಸಿಎಸ್-ಉಡಾನ್, ಉತ್ತಮ ವಾಯು ಸಂಪರ್ಕ, ಚಾಲನಾ ಕಾರ್ಯಕ್ರಮ, ನಾಗರಿಕ ವಿಮಾನಯಾನ ಸಚಿವಾಲಯ, ಪ್ರವಾಸೋದ್ಯಮದ ಅಭಿವೃದ್ಧಿ, ಭಾರತ ವಿಮಾನ ನಿಲ್ದಾಣ, ರೈಲು ಪ್ರಯಾಣ, ವಿಮಾನ ಕಾರ್ಯಾಚರಣೆ, ವಿಮಾನಗಳ ಸಂಚಾರದ ವೇಳಾಪಟ್ಟಿಯನ್ನು, ವೇಗವರ್ಧಕ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...