• Skip to main content
  • Skip to secondary menu
  • Skip to primary sidebar
  • Skip to footer
  • ಮುಖಪುಟ
  • ಅಂಕಣಗಳು
  • ಆರೋಗ್ಯ
    • ಮನೆಮದ್ದು
  • ವಿಡಿಯೋ
  • ಪುರವಣಿಗಳು
  • ಸಂಸ್ಕೃತಿ-ಕಲೆ
  • Live News
  • Classifieds
    • Submit FREE Classified Ad

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
  • ರಾಷ್ಟ್ರೀಯ
  • ಅಂತರರಾಷ್ಟ್ರೀಯ
  • ಕ್ರೀಡೆ
  • ಉದ್ಯೋಗ
  • ಅಪರಾಧ
  • ಕೃಷಿ
    • ಪಶುವೈದ್ಯಕೀಯ
  • ಪ್ರವಾಸ
  • ಸಿನೆಮಾ

ಎಟಿಸಿ ಏಷ್ಯಾ ಪೆಸಿಫಿಕ್ ಹಾಗು ಎಟಿಸಿ ದೂರಸಂಪರ್ಕ ಮೂಲಸೌಕರ್ಯ ನಿಯಮಿತದಲ್ಲಿ 2480.92 ಕೋಟಿ ಎಫ್.ಡಿ.ಐ. ಗೆ ಸಂಪುಟದ ಅನುಮೋದನೆ

November 26, 2020 by Sachin Hegde Leave a Comment

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಆರ್ಥಿಕ ವ್ಯವಹಾರಗಳ ಕುರಿತ ಸಚಿವ ಸಂಪುಟ ಸಭೆ, ಟಾಟಾ ಟೆಲಿ ಸರ್ವೀಸಸ್ ಲಿಮಿಟೆಡ್ (ಟಿಟಿಎಸ್ಎಲ್) ಮತ್ತು ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್ (ಟಿಎಸ್.ಪಿ.ಎಲ್) ಆಯ್ಕೆಯ ಪ್ರಯತ್ನದ ಪರಿಣಾಮವಾಗಿ ಮೆ. ಎ.ಟಿ.ಸಿ. ದೂರಸಂಪರ್ಕ ಮೂಲಸೌಕರ್ಯ ಪ್ರೈ. ಲಿಮಿಟೆಡ್ ನ ಶೇ.12.32ರಷ್ಟು ಈಕ್ವಿಟಿ ಶೇರು ಬಂಡವಾಳವನ್ನು (ಸಂಪೂರ್ಣ ದುರ್ಬಲಗೊಳಿಸಿದ ಆಧಾರದಲ್ಲಿ) ಮೆ. ಎ.ಟಿ.ಸಿ. ಏಷ್ಯಾ ಪೆಸಿಫಿಕ್ ಪಿಟಿಇ ಲಿಮಿಟೆಡ್ ಗೆ ನೀಡುವ ಎಫ್.ಡಿ.ಐ. ಪ್ರಸ್ತಾವನೆ ಸಂಖ್ಯೆ 4930ಗೆ ಅನುಮೋದನೆ ನೀಡಿದೆ.
ಇದು 2480.92 ಕೋಟಿ ರೂಪಾಯಿ ವಿದೇಶೀ ನೇರ ಬಂಡವಾಳ ಹೂಡಿಕೆಯ ಹರಿವಿಗೆ ದಾರಿ ಮಾಡಿಕೊಡುತ್ತದೆ. ಈ ಅನುಮೋದನೆಯೊಂದಿಗೆ ದೂರಸಂಪರ್ಕ ಮೂಲಸೌಕರ್ಯ ಪ್ರೈ. ಲಿಮಿಟೆಡ್ (ಎಟಿಸಿ ಇಂಡಿಯಾ)ದಲ್ಲಿ ಮೆ. ಎಟಿಸಿ ಏಷ್ಯಾ ಪೆಸಿಫಿಕ್ ಪಿಟಿಇ ಲಿಮಿಟೆಡ್ (ಎ.ಟಿ.ಸಿ. ಸಿಂಗಾಪೂರ್)ನ ಸಂಚಯಿತ ಎಫ್.ಡಿ.ಐ. 2018-19ರಿಂದ 2020-21ರ ಹಣಕಾಸು ವರ್ಷದಲ್ಲಿ 5417.2 ಕೋಟಿ ರೂಪಾಯಿಗಳಾಗಿವೆ.
ವಿವರಗಳು:
i. . ಎಟಿಸಿ ದೂರಸಂಪರ್ಕ ಮೂಲಸೌಕರ್ಯ ಪ್ರೈವೇಟ್ ಲಿಮಿಟೆಡ್ ದೂರಸಂಪರ್ಕ ಆಪರೇಟರುಗಳಿಗೆ ದೂರಸಂಪರ್ಕ ಮೂಲಸೌಕರ್ಯ ಸೇವೆಗಳನ್ನು ಒದಗಿಸುವ ವ್ಯವಹಾರದಲ್ಲಿ ತೊಡಗಿದೆ.
ii. ಪ್ರಸ್ತುತ ಶೇ.86.36ರವರೆಗೆ ಎಫ್‌. ಡಿಐ ಅನುಮೋದನೆಯನ್ನು ಹೊಂದಿದೆ ಮತ್ತು ಈ ಅನುಮೋದನೆಯೊಂದಿಗೆ ಅದು ಶೇ.98.68ಕ್ಕೆ ಏರುತ್ತದೆ (ಸಂಪೂರ್ಣ ದುರ್ಬಲಗೊಳಿಸಿದ ಆಧಾರದಲ್ಲಿ).
iii. ನೇರ ಬಂಡವಾಳ ಹೂಡಿಕೆ 2020-2021ನೇ ಸಾಲಿನ ಅವಧಿಯಲ್ಲಿ ಮೆ. ಎಟಿಸಿ ಏಷ್ಯಾ ಪೆಸಿಫಿಕ್ ಪಿಟಿಇ ಲಿಮಿಟೆಡ್ ನಿಂದ ಮೆ. ಎಟಿಸಿ ದೂರಸಂಪರ್ಕ ಮೂಲಸೌಕರ್ಯ ಪ್ರೈವೇಟ್ ಲಿಮಿಟೆಡ್‌ ನಲ್ಲಿ 2480.92 ಕೋಟಿ ರೂ. ಆಗಿದ್ದು, ಎಫ್‌.ಡಿಐ ಪ್ರಸ್ತಾವನೆ ಸಂಖ್ಯೆ 4854 ಮತ್ತು 2018-19ರ 4860ರ ಅನುಮೋದನೆಯಂತೆ ಒಟ್ಟು ಸಂಚಯಿತ 5417.2 ಕೋಟಿ ರೂ. ಆಗುತ್ತದೆ.
ಪರಿಣಾಮ:
ಭಾರತಕ್ಕೆ ವಿದೇಶೀ ಹೂಡಿಕೆಯ ಹರಿವು ಆರ್ಥಿಕ ಪ್ರಗತಿಯನ್ನು ಉತ್ತೇಜಿಸುತ್ತದೆ, ಜೊತೆಗೆ ನಾವಿನ್ಯತೆಯನ್ನೂ ಹೆಚ್ಚಿಸುತ್ತದೆ.
ಹಿನ್ನೆಲೆ:
ದೂರಸಂಪರ್ಕ ಸೇವಾ ವಲಯದಲ್ಲಿ ಶೇ.100ವರೆಗೆ ಎಫ್‌.ಡಿಐಗೆ ಅವಕಾಶವಿದೆ, ಇದರಲ್ಲಿ ಶೇ.49 ಸ್ವಯಂಚಾಲಿತ ಮಾರ್ಗದಲ್ಲಿ ಮತ್ತು ಶೇ.49 ಮೇಲ್ಪಟ್ಟು ಸರ್ಕಾರದ ಮಾರ್ಗದ ಮೂಲಕ ಅವಕಾಶವಿದ್ದು, ಪರವಾನಗಿ ಪಡೆದವರು ಮತ್ತು ಹೂಡಿಕೆದಾರರಿಬ್ಬರಿಗೂ ದೂರಸಂಪರ್ಕ ಇಲಾಖೆಯಿಂದ (ಡಿಒಟಿ) ಕಾಲಕಾಲಕ್ಕೆ ಅಧಿಸೂಚಿಸುವ ಪರವಾನಗಿ ಮತ್ತು ಭದ್ರತಾ ಷರತ್ತುಗಳಿಗೆ ಒಳಪಟ್ಟಿರುತ್ತದೆ.
ದೂರಸಂಪರ್ಕ ಇಲಾಖೆಯು ನೀಡಿದ ವಿವಿಧ ಅನುಮೋದನೆಗಳಿಗೆ ಅನುಗುಣವಾಗಿ ದೂರಸಂಪರ್ಕ ಆಪರೇಟರುಗಳಿಗೆ ದೂರಸಂಪರ್ಕ ಮೂಲಸೌಕರ್ಯ ಸೇವೆಗಳನ್ನು ಒದಗಿಸುವ ವ್ಯವಹಾರದಲ್ಲಿ ಕಂಪನಿಯು ತೊಡಗಿಸಿಕೊಂಡಿದೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: National News Tagged With: (TTSL), (ಟಿಟಿಎಸ್ಎಲ್), ATC Asia Pacific PTE Limited, Foreign Direct Investment, Tata Sons Private Limited, Tata Tele Services Limited, ಎ.ಟಿ.ಸಿ. ಏಷ್ಯಾ ಪೆಸಿಫಿಕ್ ಪಿಟಿಇ ಲಿಮಿಟೆಡ್, ಟಾಟಾ ಟೆಲಿ ಸರ್ವೀಸಸ್ ಲಿಮಿಟೆಡ್, ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್, ವಿದೇಶೀ ನೇರ ಬಂಡವಾಳ ಹೂಡಿಕೆ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 964,677 visitors

Get Updates on WhatsApp




✓ Valid

Footer

ಶ್ವಾಸ್ ಟೀ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಶಾಸಕ ದಿನಕರ್ ಶೆಟ್ಟಿ

September 2, 2020 By Vishwanath Shetty

ಕೊರೋನಾ ಸೋಕು ನಿಯಂತ್ರಿಸಲು ಕಠಿಣ ಕ್ರಮ: ಇಂದಿನಿಂದ ಸೋಂಕಿತರ ಕೈಗಳಿಗೆ ಸೀಲ್ ಹಾಕಲು ಸರ್ಕಾರ ವಿರ್ಧಾರ !

April 17, 2021 By Vishwanath Shetty

ನೀರಿನ ಘಟಕ ನಿರ್ಮಾಣದ ಡಿಜೈನ್ ನೀಡಿದ ಅಧಿಕಾರಿಗೆ ತರಾಟೆ

April 17, 2021 By Vishwanath Shetty

ಆಟೋ ರಿಕ್ಷಾಗೆ ಗುದ್ದಿದ ಕಾರು ; ಚಾಲಕ ಪರಾರಿ

April 17, 2021 By Vishwanath Shetty

ಸಾರಿಗೆ ನೌಕರರ ಮುಷ್ಕರದಿಂದ ಸಂಸ್ಥೆಗೆ ನಷ್ಟ; ದಿನಕರ ಶೆಟ್ಟಿ

April 17, 2021 By Vishwanath Shetty

08 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

April 16, 2021 By Vishwanath Shetty

ಕೋ ಆಪರೇಟಿವ್ ಬ್ಯಾಂಕ್ ನೇಮಕಾತಿ 2021 ; ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

April 16, 2021 By deepika

© 2021 Canara Buzz · Contributors · Privacy Policy · Terms & Conditions

loading Cancel
Post was not sent - check your email addresses!
Email check failed, please try again
Sorry, your blog cannot share posts by email.