• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಧಾರ್ಮಿಕ ಕಾರ್ಯಕ್ಕೆ ಬಳಸುವ ಜಾಗೆ ಬಿಟ್ಟು ಕೊಡುವುದಿಲ್ಲ -ಮುರ್ಕವಾಡ ಗ್ರಾಮಸ್ಥರ ಎಚ್ಚರಿಕೆ

November 27, 2020 by Yogaraj SK Leave a Comment

ಹಳಿಯಾಳ:- ರೈತ ಸಂಪರ್ಕ ಕೇಂದ್ರ ಕಟ್ಟಲು ಕೃಷಿ ಇಲಾಖೆ ಬಳಸಿಕೊಳ್ಳುತ್ತಿರುವ ಕಳೆದ 5-6 ದಶಕಗಳಿಂದ ಗ್ರಾಮಸ್ಥರ ವಹಿವಾಟಿನಲ್ಲಿ ಸಾರ್ವಜನೀಕ, ದೇವರ ಕಾರ್ಯಗಳಿಗೆ ಮಿಸಲಿರುವ ಜಾಗೆಯನ್ನು ಎಂದಿಗೂ ಗ್ರಾಮಸ್ಥರು ಬಿಟ್ಟುಕೊಡುವುದಿಲ್ಲ ಎಂದು ಗ್ರಾಮಸ್ಥರೆಲ್ಲ ಒಂದಾಗಿ ಮಂಗಳವಾರ ಪ್ರತಿಭಟನೆ ನಡೆಸಿದ ವಿದ್ಯಮಾನ ತಾಲೂಕಿನ ಮುರ್ಕವಾಡ ಗ್ರಾಮದಲ್ಲಿ ನಡೆಯಿತು.

24 hly 5


ಮುರ್ಕವಾಡ ಗಾಂವಠಾಣಾ ಸರ್ವೆ ನಂ.9999- ಪ್ಲಾಟ್‍ನಂ-21 ನಲ್ಲಿರುವ 6 ಗುಂಟೆ ಜಮೀನು ಕೃಷಿ ಇಲಾಖೆಯ ಅಧಿನದಲ್ಲಿದ್ದರು ಈವರೆಗೆ ಅಂದರೇ ಕಳೆದ 50-60 ವರ್ಷಗಳಿಂದ ಗ್ರಾಮಸ್ಥರು ಇಲ್ಲಿ ಸಾರ್ವಜನೀಕ ಕಾರ್ಯಕ್ರಮಗಳು, ಅನ್ನಸಂತರ್ಪಣೆ, ದೇವತಾ ಕಾರ್ಯಗಳು ಸೇರಿದಂತೆ ಸಾಂಸ್ಕøತೀಕ ಚಟುವಟಿಕೆ ನಡೆಸಲು ಉಪಯೋಗಿಸುತ್ತಾ ಬಂದಿರುವುದು ಅಲ್ಲದೇ ಈ ಸ್ಥಳ ಗ್ರಾಮಸ್ಥರಿಗೆ ಅತ್ಯಂತ ಸೂಕ್ತ ಜಾಗೆಯಾಗಿದೆ.
ಹಳಿಯಾಳ ಕೃಷಿ ಇಲಾಖೆಯವರು ಈ ಜಮೀನಿನಲ್ಲಿ ರೈತ ಸಂಪರ್ಕ ಕೇಂದ್ರ ಕಟ್ಟಲು ಸಜ್ಜಾಗಿದ್ದು ಸರಿಯಾದ ನಿರ್ಧಾರವಲ್ಲ. ನಾವು ಗ್ರಾಮಸ್ಥರು ಈ ಹಿಂದಿನಿಂದಲೂ ಈ ಜಾಗೆ ಸರ್ವ ಗ್ರಾಮಸ್ಥರ ಆಶಯದಂತೆ ಕಾರ್ಯಕ್ರಮಗಳಿಗೆ ಮೀಸಲಿಡಬೇಕು ಎಂದು ಮನವಿ ಪತ್ರಗಳನ್ನು ಸಲ್ಲಿಸಲಾಗಿದೆ.
ಆದರೇ ಈಗ ಏಕಾಏಕಿ ಗ್ರಾಮಸ್ಥರ ಭಾವನೆಗಳಿಗ ಬೆಲೆ ಕೊಡದೆ ಈ ಜಾಗೆಯಲ್ಲಿಯೇ ರೈತ ಸಂಪರ್ಕ ಕೇಂದ್ರ ಕಟ್ಟಲು ತಯಾರಿ ನಡೆಸಿರುವುದು ಗ್ರಾಮಸ್ಥರ ಬೇಸರಕ್ಕೆ ಕಾರಣವಾಗಿದ್ದು ಮಂಗಳವಾರ ಗ್ರಾಮಸ್ಥರು ಒಂದಾಗಿ ಇದೇ ಸ್ಥಳದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.


ಸ್ಥಳಕ್ಕೆ ಆಗಮಿಸಿದ ಕೃಷಿ ಇಲಾಖೆ ಅಧಿಕಾರಿ ಪಾಂಡುರಂಗ ಮಾನೆ ಅವರೊಂದಿಗೆ ಚರ್ಚಿಸಿದ ಗ್ರಾಮಸ್ಥರು ಈ ಹಿಂದೆ ಮುಗುದಕೊಪ್ಪ ಗ್ರಾಮಕ್ಕೆ ಹೊಗುವ ಕ್ರಾಸ್ ಪಕ್ಕದ ನವಗ್ರಾಮದಿಂದ ಮುರ್ಕವಾಡ ಮತ್ತು ಮುಗದಕೊಪ್ಪ ಗ್ರಾಮಕ್ಕೆ ತೆರಳುವ ಸ್ಥಳದಲ್ಲಿ ಅತ್ಯಂತ ಸೂಕ್ತ ಜಾಗೆಯನ್ನು ತೊರಿಸಿದ್ದರು ಕೂಡ ಸಂಬಂಧಪಟ್ಟ ಇಲಾಖೆಯವರು ಮಾತ್ರ ಗ್ರಾಮಸ್ಥರ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿದ್ದು ಗ್ರಾಮಸ್ಥರ ಆಶಯದ ವಿರುದ್ದವಾಗಿ ಕೆಲಸ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಆಕ್ರೊಶ ವ್ಯಕ್ತಪಡಿಸಿದರು.
ತಹಶೀಲ್ದಾರ್ ಅವರಿಗೆ ಲಿಖಿತ ಮನವಿಯನ್ನು ಸಲ್ಲಿಸಿರುವ ಗ್ರಾಮಸ್ಥದ ಸರ್ವರು ಸಾರ್ವಜನಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ಬಳಸುತ್ತಿರುವ 6 ಗುಂಟೆ ಕ್ಷೇತ್ರ ಇರುವ ಈ ಭೂಮಿಯನ್ನು ಗ್ರಾಮಸ್ಥರಿಗೆ ಹಸ್ತಾಂತರಿಸಬೇಕು ಎಂದು ವಿನಂತಿಸಲಾಗಿದೆ.
ಪ್ರತಿಭಟನೆಯಲ್ಲಿ ಪ್ರಮುಖರಾದ ಶ್ರೀನಾಥ ಪಾಟೀಲ್, ಮಾರುತಿ ಗುತ್ತೆಣ್ಣವರ, ಯಲ್ಲಪ್ಪಾ ಗುತ್ತೆಣ್ಣವರ, ಶಂಕರ ಗೌಡಾ, ಶಿವಾಜಿ ಗೌಡಾ, ನಾಗರಾಜ ಗೌಡಾ, ಅರುಣ ಕೊಳಾಂಬಿ, ನಾರಾಯಣ ದಳವಿ, ನಂದಾ ಕೊರ್ವೆಕರ, ದಿನೇಶ ಗೌಡಾ, ಸಹದೇವ ಮೇತ್ರಿ, ಸುನಿಳ್ ದಳವಿ, ಪುಂಡ್ಲಿಕ ಶಿಂಧೆ, ಯಶವಂತ ಗೌಡಾ, ಯಶವಂತ ಕೊರ್ವೆಕರ ಮೊದಲಾದವರು ಇದ್ದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Haliyal News Tagged With: all villagers united in Tuesday's protest, the Department of Land and Agriculture, The villagers, ಗ್ರಾಮಸ್ಥರು ಬಿಟ್ಟು, ಗ್ರಾಮಸ್ಥರೆಲ್ಲ ಒಂದಾಗಿ ಮಂಗಳವಾರ ಪ್ರತಿಭಟನೆ, ಜಮೀನು ಕೃಷಿ ಇಲಾಖೆ, ರೈತ ಸಂಪರ್ಕ ಕೇಂದ್ರ ಕಟ್ಟಲು ಸಜ್ಜಾಗಿದ್ದು, ಸರಿಯಾದ ನಿರ್ಧಾರ, ಹಳಿಯಾಳ ಕೃಷಿ ಇಲಾಖೆಯವರು ಈ ಜಮೀನಿನಲ್ಲಿ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,120 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...