• Skip to main content
  • Skip to secondary menu
  • Skip to primary sidebar
  • Skip to footer
  • ಮುಖಪುಟ
  • ಅಂಕಣಗಳು
  • ಆರೋಗ್ಯ
    • ಮನೆಮದ್ದು
  • ವಿಡಿಯೋ
  • ಪುರವಣಿಗಳು
  • ಸಂಸ್ಕೃತಿ-ಕಲೆ
  • Live News
  • Classifieds
    • Submit FREE Classified Ad

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
  • ರಾಷ್ಟ್ರೀಯ
  • ಅಂತರರಾಷ್ಟ್ರೀಯ
  • ಕ್ರೀಡೆ
  • ಉದ್ಯೋಗ
  • ಅಪರಾಧ
  • ಕೃಷಿ
    • ಪಶುವೈದ್ಯಕೀಯ
  • ಪ್ರವಾಸ
  • ಸಿನೆಮಾ

ಕೋವಿಡ್ ಲಸಿಕೆ ಅಭಿವೃದ್ಧಿ ಮತ್ತು ಉತ್ಪಾದನೆ ಪ್ರಕ್ರಿಯೆ ಕುರಿತಂತೆ ಪ್ರಧಾನಿ ಪರಿಶೀಲನೆ ಮೂರು ಲಸಿಕಾ ಉದ್ಘಾಟನಾ ಘಟಕಗಳಿಗೆ ಶ್ರೀ ನರೇಂದ್ರ ಮೋದಿ ಭೇಟಿ

November 28, 2020 by Sachin Hegde Leave a Comment

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಮೂರು ನಗರಗಳಿಗೆ ಭೇಟಿ ನೀಡಿ, ಲಸಿಕೆ ಅಭಿವೃದ್ಧಿ ಮತ್ತು ಉತ್ಪಾದನಾ ಪ್ರಕ್ರಿಯೆಯ ವ್ಯಾಪಕ ಪರಾಮರ್ಶೆ ನಡೆಸಿದರು. ಅವರು ಅಹ್ಮದಾಬಾದ್ ನ ಜೈಡುಸ್ ಬಯೋಟೆಕ್ ಪಾರ್ಕ್, ಹೈದ್ರಾಬಾದ್ ನ ಭಾರತ್ ಬಯೋಟೆಕ್ ಮತ್ತು ಪುಣೆಯ ಸೆರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾಗೆ ಭೇಟಿ ನೀಡಿದ್ದರು.


ಲಸಿಕೆ ಅಭಿವೃದ್ಧಿ ಪಯಣದ ಈ ನಿರ್ಣಾಯಕ ಹಂತದಲ್ಲಿ ತಮ್ಮ ಮನೋಸ್ಥೈರ್ಯವನ್ನು ಹೆಚ್ಚಿಸಲು ಮತ್ತು ತಮ್ಮ ಪ್ರಯತ್ನಗಳನ್ನು ವೇಗಗೊಳಿಸಲು ನೆರವಾಗುವ ನಿಟ್ಟಿನಲ್ಲಿ ಪ್ರಧಾನಮಂತ್ರಿಯವರು ತಮ್ಮನ್ನು ಮುಖಾಮುಖಿ ಭೇಟಿಯಾದ ಬಗ್ಗೆ ವಿಜ್ಞಾನಿಗಳು ಸಂತಸ ವ್ಯಕ್ತಪಡಿಸಿದರು. ಭಾರತದ ದೇಶೀಯ ಲಸಿಕೆ ಅಭಿವೃದ್ಧಿ ಇಲ್ಲಿಯವರೆಗೆ ತ್ವರಿತವಾಗಿ ಪ್ರಗತಿಯಲ್ಲಿರುವ ಬಗ್ಗೆ ಪ್ರಧಾನಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು. ಭಾರತವು ಲಸಿಕೆ ಅಭಿವೃದ್ಧಿಯ ಸಂಪೂರ್ಣ ಪಯಣದಲ್ಲಿ ವಿಜ್ಞಾನದ ಉತ್ತಮ ತತ್ವಗಳನ್ನು ಹೇಗೆ ಅನುಸರಿಸುತ್ತಿದೆ ಎಂಬುದರ ಬಗ್ಗೆ ಮಾತನಾಡಿದ ಅವರು, ಲಸಿಕೆ ವಿತರಣಾ ಪ್ರಕ್ರಿಯೆಯನ್ನು ಉತ್ತಮಗೊಳಿಸಲು ಸಲಹೆ ಕೇಳಿದರು.


ಲಸಿಕೆ ಉತ್ತಮ ಆರೋಗ್ಯಕ್ಕೆ ಮಾತ್ರವೇ ಮುಖ್ಯವಲ್ಲ ಜೊತೆಗೆ ಜಾಗತಿಕ ಒಳಿತಗೂ ಅದೂ ಉತ್ತಮ ಹಾಗೂ ವೈರಾಣುವಿನ ವಿರುದ್ಧ ಸಂಘಟಿತವಾದ ಹೋರಾಟದಲ್ಲಿ ನೆರೆಯ ರಾಷ್ಟ್ರಗಳೂ ಸೇರಿದಂತೆ ಇತರ ರಾಷ್ಟ್ರಗಳಿಗೆ ನೆರವಾಗುವುದು ಭಾರತದ ಕರ್ತವ್ಯ ಎಂದು ದೇಶ ಪರಿಗಣಿಸುತ್ತದೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು.
ದೇಶವು ತನ್ನ ನಿಯಂತ್ರಕ ಪ್ರಕ್ರಿಯೆಗಳನ್ನು ಹೇಗೆ ಮತ್ತಷ್ಟು ಸುಧಾರಿಸಬಹುದು ಎಂಬುದರ ಕುರಿತು ತಮ್ಮ ಮುಕ್ತ ಮತ್ತು ಸ್ಪಷ್ಟವಾದ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅವರು ವಿಜ್ಞಾನಿಗಳಿಗೆ ಕೇಳಿದರು. ಕೋವಿಡ್-19 ವಿರುದ್ಧ ಉತ್ತಮವಾಗಿ ಹೋರಾಡಲು ವಿವಿಧ ನೂತನ ಮತ್ತು ಪುನರ್ ರೂಪಿತ ಔಷಧಿಗಳನ್ನು ಹೇಗೆ ಅಭಿವೃದ್ಧಿಪಡಿಸಲಾಗುತ್ತಿದೆ ಎಂಬ ಬಗ್ಗೆ ವಿಜ್ಞಾನಿಗಳು ಒಂದು ಪಕ್ಷಿನೋಟ ಪ್ರಸ್ತುತಪಡಿಸಿದರು.


ಅಹ್ಮದಾಬಾದ್ ನ ಜೈಡುಸ್ ಬಯೋಟೆಕ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು “ದೇಶೀಯವಾಗಿ ಜೈಡುಸ್ ಕ್ಯಾಡಿಲಾ ಅಭಿವೃದ್ಧಿಪಡಿಸುತ್ತಿರುವ ಡಿ.ಎನ್‌.ಎ ಆಧಾರಿತ ಲಸಿಕೆ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಅಹಮದಾಬಾದ್‌ ನ ಜೈಡುಸ್ ಬಯೋಟೆಕ್ ಪಾರ್ಕ್‌ ಗೆ ಭೇಟಿ ನೀಡಿದ್ದೆ. ಈ ಉತ್ತಮ ಪ್ರಯತ್ನದ ಹಿಂದಿನ ತಂಡವನ್ನು ನಾನು ಅಭಿನಂದಿಸುತ್ತೇನೆ. ಈ ಪಯಣದಲ್ಲಿ ಅವರನ್ನು ಬೆಂಬಲಿಸಲು ಭಾರತ ಸರ್ಕಾರ ಅವರೊಂದಿಗೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.” ಎಂದರು.
ಹೈದ್ರಾಬಾದ್ ನ ಭಾರತ್ ಬಯೋಟೆಕ್ ಗೆ ಭೇಟಿ ನೀಡಿದ ತರುವಾಯ ಪ್ರಧಾನಮಂತ್ರಿಯವರು , “ಹೈದರಾಬಾದ್‌ ನ ಭಾರತ್ ಬಯೋಟೆಕ್ ಸೌಲಭ್ಯದಲ್ಲಿ, ದೇಶೀಯ ಕೋವಿಡ್-19 ಲಸಿಕೆ ಬಗ್ಗೆ ತಮಗೆ ವಿವರಿಸಲಾಯಿತು. ಇದುವರೆಗಿನ ಪ್ರಯೋಗಗಳಲ್ಲಿ ವಿಜ್ಞಾನಿಗಳು ಪ್ರಗತಿ ಸಾಧಿಸಿದ್ದಕ್ಕಾಗಿ ಅಭಿನಂದನೆಗಳು. ತ್ವರಿತ ಪ್ರಗತಿಗೆ ಅನುಕೂಲವಾಗುವಂತೆ ಅವರ ತಂಡ ಐಸಿಎಂಆರ್ ಜೊತೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ.” ಎಂದರು.


ಸೆರಮ್ ಇನ್ ಸ್ಟಿಟ್ಯೂಟ್ ಗೆ ಭೇಟಿ ನೀಡಿದ ಬಳಿಕ ಪ್ರಧಾನಮಂತ್ರಿಯವರು ಟ್ವೀಟ್ ಮಾಡಿ “ಸೆರಮ್ ಇನ್‌ ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ತಂಡದೊಂದಿಗೆ ಉತ್ತಮ ಸಂವಾದ ನಡೆಸಿದೆ. ಲಸಿಕೆ ತಯಾರಿಕೆಯನ್ನು ಇನ್ನಷ್ಟು ಹೆಚ್ಚಿಸಲು ಅವರು ಹೇಗೆ ಯೋಜಿಸಿದ್ದಾರೆ ಎಂಬುದರ ಕುರಿತ ಈವರೆಗಿನ ಪ್ರಗತಿಯ ಬಗ್ಗೆ ವಿವರಗಳನ್ನು ಹಂಚಿಕೊಂಡರು. ಅವರ ಉತ್ಪಾದನಾ ಸೌಲಭ್ಯವನ್ನೂ ನೋಡಿದೆ.” ಎಂದು ತಿಳಿಸಿದ್ದಾರೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: National News, Trending Tagged With: Bharat Biotech, Domestic Vaccine Development, Domestically Jaidus Cadillac Development, Hyderabad, park, Scientific Principle, Scientists are pleased to report that the Bharat Biotech facility in Hyderabad, Vaccine Development Mission, Vaccine Development Visit the Serum Institute of India, Vaccine Good Health, Visit India, Visit to Bharat Biotech, ಅಹ್ಮದಾಬಾದ್ ನ ಜೈಡುಸ್ ಬಯೋಟೆಕ್ ಪಾರ್ಕ್, ದೇಶೀಯ ಲಸಿಕೆ ಅಭಿವೃದ್ಧಿ, ದೇಶೀಯವಾಗಿ ಜೈಡುಸ್ ಕ್ಯಾಡಿಲಾ ಅಭಿವೃದ್ಧಿ, ಭಾರತದ, ಭಾರತ್ ಬಯೋಟೆಕ್ ಗೆ ಭೇಟಿ, ಮುಖಾಮುಖಿ ಭೇಟಿಯಾದ ಬಗ್ಗೆ, ಲಸಿಕೆ ಅಭಿವೃದ್ಧಿ ಪಯಣ, ಲಸಿಕೆ ಉತ್ತಮ ಆರೋಗ್ಯ, ವಿಜ್ಞಾನದ ಉತ್ತಮ ತತ್ವ, ವಿಜ್ಞಾನಿಗಳು ಸಂತಸ ವ್ಯಕ್ತಪಡಿಸಿದರು, ಹೈದರಾಬಾದ್‌ ನ ಭಾರತ್ ಬಯೋಟೆಕ್ ಸೌಲಭ್ಯ, ಹೈದ್ರಾಬಾದ್ ನ ಭಾರತ್ ಬಯೋಟೆಕ್

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 919,930 visitors

Get Updates on WhatsApp




✓ Valid

Footer

ಶ್ವಾಸ್ ಟೀ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಶಾಸಕ ದಿನಕರ್ ಶೆಟ್ಟಿ

September 2, 2020 By Vishwanath Shetty

ಬೆಳ್ಳಕ್ಕಿ ಬೆಡಗು

January 21, 2021 By Lakshmikant Gowda

ಸಾವಿರಾರು ಭಕ್ತಾದಿಗಳ ಹರ್ಷೋದ್ಗಾರ ನಡುವೆ ಸಂಪನ್ನಗೊಂಡ: ಮಾತೋಬಾರ ಶ್ರೀ ಮುರ್ಡೇಶ್ವರ ದೇವರ ರಥೋತ್ಸವ

January 21, 2021 By bkl news

“ದಂಡಿ” ಚಲನ ಚಿತ್ರಕ್ಕೆ ಕಲಾವಿದರ ಆಯ್ಕೆ

January 20, 2021 By Lakshmikant Gowda

ನಡೆದುಕೊಂಡು ಹೋಗುಟ್ಟಿದ್ದ ಮಹಿಳೆಯ ಮೇಲೆ ಮಂಗನ ದಾಳಿ ಮಹಿಳೆ ಗಂಭೀರ

January 19, 2021 By bkl news

ನಿಧಿ ಸಮರ್ಪಣಾಅಭಿಯಾನಕ್ಕೆ ಚಾಲನೆ

January 19, 2021 By Vishwanath Shetty

ದತ್ತಾತ್ರೇಯ ನಾರಾಯಣ ಭಟ್ಟ ನಿದನ

January 18, 2021 By Vishwanath Shetty

© 2021 Canara Buzz · Contributors · Privacy Policy · Terms & Conditions

loading Cancel
Post was not sent - check your email addresses!
Email check failed, please try again
Sorry, your blog cannot share posts by email.