ಹೊನ್ನಾವರ: ತಾಲೂಕಿನ ಮಾಡಗೇರಿ ಮೂಲದ ಚೈತನ್ಯ ಭಟ್ ಗೆ ಅಮೆರಿಕ ಮಿಚಿಗನ್ ತಾಂತ್ರಿಕ ವಿಶ್ವವಿದ್ಯಾಲಯದಿಂದ ಪಿಎಚ್ಇಡಿ ಪದವಿ ದೊರೆತಿದೆ.ಇವರು ರಸ್ತೆ ನಿರ್ಮಾಣ ಹಾಗೂ ಕಾಮಗಾರಿಯಿಂದ ಆಗುವ ಹವಾಮಾನ ವ್ಯತ್ಯಾಸಗಳ ಅಧ್ಯಯನ ಹಾಗೂ ಅನಿಶ್ಚಿತತೆಯನ್ನು ಒಳಗೊಂಡ ಪ್ರದೂಷಣವನ್ನು ಕಡಿಮೆ ಮಾಡುವ ವಿಧಾನದ ಬಗ್ಗೆ ಡಾ. ಅಮ್ಲಾನ್ ಮುಖರ್ಜಿ ಮಾರ್ಗದರ್ಶನದಲ್ಲಿ ಪ್ರೌಢ ಪ್ರಬಂಧ ಮಂಡಿಸಿದ್ದರು.

ಹುಬ್ಬಳ್ಳಿಯ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ ಪೂರೈಸಿರುವ ಚೈತನ್ಯ ಭಟ್, ಮಿಚಿಗನ್ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಮಾಸ್ಟರ್ಸ್ ಪದವಿ ಪೂರೈಸಿದ್ದಾರೆ. ಜತೆಗೆ ಅಮೆರಿಕದ ಲೈಫ್ ಸೈಕಲ್ ಅಸೆಸ್ ಮೆಂಟ್ ಪ್ರಮಾಣೀಕೃತ ಪ್ರಾಕ್ಟೀಷನರ್ ಆಗಿ ಹೊರಹೊಮ್ಮಿದ್ದಾರೆ.ಈ ವೇಳೆ ಅವರು ಸಂಯುಕ್ತ ಹೆದ್ದಾರಿ ಪ್ರಾಧಿಕಾರ(ಎಫ್ಎಚ್ ಡ್ಬ್ಲುಎ), ರಾಷ್ಟ್ರೀಯ ಸಹಕಾರ ಹೆದ್ದಾರಿ ಸಂಶೋಧನಾ ಯೋಜನೆ(ಎನ್ ಸಿ ಎಚ್ ಆರ್ ಪಿ) ಮತ್ತು ಮಿಚಿಗನ್ ಸಾರಿಗೆ ಇಲಾಖೆ(ಎಂ ಡಿ ಓಟಿ) ಪ್ರಾಯೋಜಿತ ಪ್ರಾಜೆಕ್ಟ್ ಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಇದಲ್ಲದೆ, ಸಾರಿಗೆ ಸಂಶೋಧನಾ ಮಂಡಳಿ, ಅಮೆರಿಕದ ಲೈಫ್ ಸೈಕಲ್ ಅಸೆಸ್ ಮೆಂಟ್ ಕೇಂದ್ರ ಹಾಗೂ ರಸ್ತೆ ಮತ್ತು ಸೇತುವೆ ಲೈಫ್ ಸೈಕಲ್ ಅಸೆಸ್ ಮೆಂಟ್ ಅಂತಾರಾಷ್ಟ್ರೀಯ ಸಮ್ಮೇಳನ (ಎಲ್ ಸಿ ಎ-2020) ದಲ್ಲಿ ಪ್ರಬಂಧ ಮಂಡಿಸಿದ್ದಾರೆ. ಶೀಘ್ರವೆ ಟರ್ನರ್ ಫೈರ್ ಬ್ಯಾಂಕ್ ಹೈವೇ ಸಂಶೋಧನಾ ಕೇಂದ್ರದಲ್ಲಿ ಸಂಶೋಧನಾ ಅಭಿಯಂತ ಆಗಿ ಸೇವೆ ಆರಂಭಿಸಲಿದ್ದಾರೆ.
Leave a Comment