ಭಟ್ಕಳ: ಕೇಂದ್ರದ ರೈತ ವಿರೋಧಿ ಮಸೂದೆಯನ್ನು ಹಿಂಪಡೆಯುವಂತೆ ಆಗ್ರಹಿತಿ ಮಂಗಳವಾರ ರೈತರು ನೀಡಿದ ಭಾರತ್ ಬಂದ್ ಕರೆ ಭಟ್ಕಳದಲ್ಲಿ ಯಾವುದೇ ಪ್ರತಿಕ್ರಿಯೆ ದೊರೆಯಲಿಲ್ಲ. ಎಂದಿನಂತೆ ಜನರು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು.
ಬಸ್ಸು, ಲಾರಿ, ಆಟೋರಿಕ್ಷಾ ಸೇರಿದಂತೆ ವಾಹನಗಳ ಓಡಾಟ ಎಂದಿನಂತೆ ಮಾಮೂಲಾಗಿತ್ತು. ಒಟ್ಟಿನಲ್ಲಿ ಭಟ್ಕಳದಲ್ಲಿ ಭಾರತ್ ಬಂದ್ ಯಾವುದೇ ಪರಿಣಾಮ ಬೀರಲಿಲ್ಲ ಎಂದಷ್ಟೇ ಹೇಳಬಹುದಾಗಿದೆ.


Leave a Comment