ಭಟ್ಕಳ: ಇಲ್ಲಿನ ಅಂಜುಮಾನ್ ಸಂಸ್ಥೆಯಿರುವ ಅಂಜುಮಾನಾಬಾದ್‍ನಲ್ಲಿನ ಖಾಲಿ ಜಾಗಾದಲ್ಲಿ ಬೆಳೆದಿದ್ದ ಹುಲ್ಲು ಒಣಗಿ ಅಕಸ್ಮಾತ್ ಬೆಂಕಿ ತಗುಲಿದ್ದು ಅಪಾರ ಪ್ರಮಾಣದಲ್ಲಿ ಹುಲ್ಲು ಸುಟ್ಟು ಕರಕಲಾಗಿದೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಲು ಯಶಸ್ವೀಯಾಗಿದ್ದು ಯಾವುದೇ ಅನಾಹುತವಾಗದಂತೆ ತಡೆದಿದ್ದಾರೆ. ರವಿವಾರ ಬೆಳಿಗ್ಗೆಯಿಂದ ಸುಮಾರು ಮೂರು ಬಾರಿ ಬೆಂಕಿ ಕಾಣಿಸಿಕೊಂಡಿದ್ದರೂ ಅಗ್ನಿಶಾಮಕ ದಳದ ಸೂಕ್ತ ಸ್ಪಂಧನೆಯಿಂದ ಸಂಪೂರ್ಣ ಹತೋಟಿಗೆ ತರುವಲ್ಲಿ ಸಾಧ್ಯವಾಯಿತು. ಅಂಜುಮಾನ್ ಕಾಲೇಜಿನ ವಾಹನಗಳು, ಕಟ್ಟಡಗಳು ಹತ್ತಿರದಲ್ಲಿಯೇ ಕ್ಯಾಂಟೀನ್, ವಾಹನ ನಿಲುಗಡೆ ಪ್ರದೇಶ, ಲೈಬ್ರರಿ ಇತ್ಯಾದಿಗಳಿದ್ದು ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕ ದಳ ನಡೆಸಿದ ಕಾರ್ಯಾಚರಣೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸ್ವಲ್ಪ ಅಜಾಗ್ರತೆಯಾಗಿದ್ದರೂ ಕೂಡಾ ಅಪಾಯ ಎದುರಾಗುವ ಎಲ್ಲಾ ಸಾಧ್ಯತೆಗಳಿತ್ತು ಎನ್ನಲಾಗಿದೆ.

Leave a Comment