ಭಟ್ಕಳ: ತಾಲೂಕಿನ ಮುರುಡೇಶ್ವರ ಆಂಗನ ಹೊಟೆಲ್ ಹತ್ತಿರ ಗಲಾಟೆ ನಡೆಯುತ್ತಿದೆ ಎಂಬ ಮಾಹಿತಿಯ ಮೇರೆಗೆ ಸ್ಥಳಕ್ಕೆ ತೆರಳಿ ಗಲಾಟೆ ಮಾಡದಂತೆ ಸೂಚಿಸಿದ ಪೊಲೀಸರನ್ನು ನಿಂದಿಸಿ ಹಲ್ಲೆ ನಡೆಸಿದ ಬಗ್ಗೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳನ್ನು ತಾಲೂಕಿನ ಮಾವಳ್ಳಿ -1 ಕಿಸಗಾರಮಕ್ಕಿ ಖಂಡಕ ನಿವಾಸಿ ಗಣೇಶ ಈಶ್ವರ ನಾಯ್ಕ (27) ಹಾಗೂ ದಿನೇಶ ಹನುಮಂತ ನಾಯ್ಕ (26) ಎಂದು ಗುರುತಿಸಲಾಗಿದೆ. ಈ ಬಗ್ಗೆ ಮುರುಡೇಶ್ವರ ಠಾಣಾ ಪೊಲೀಸ್ ಕಾನ್ಸ್ಟೇಬಲ್ ಕಿರಣ ಗಣಪತಿ ತಿಳಗಂಜಿ (26) ದೂರು ದಾಖಲಿಸಿದ್ದಾರೆ. ಎಸೈ ರವೀಂದ್ರ ಬಿರಾದಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
Leave a Comment