ಭಟ್ಕಳ: ಕೋವಿಡ್ ಸಾಂಕ್ರಾಮಿಕ ರೋಗದ ಮರು ವಿಶ್ಲೇಷಣೆ ಹಾಗೂ ಸಾಮಾಜಿಕ ಜಾಗ್ರತಿ ಮೂಡಿಸುವ ಸಭೆಯು ಇಲ್ಲಿನ ತಾಲೂಕಾ ಸರಕಾರಿ ಆಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಶರದ ನಾಯಕ ಅವರ ಅಧ್ಯಕ್ಷತೆಯಲ್ಲಿ ವಿವಿಧ ಸಮಾಜದ ಮುಖಂಡರ ಉಪಸ್ಥಿತಿಯಲ್ಲಿ ನಡೆಸಲಾಯಿತು.

ಸಭೆಯ ಆರಂಭದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಶರದ ನಾಯಕ ಮಾತನಾಡಿ ‘ ಸದ್ಯ ಕೋವಿಡ್ ಎರಡನೇ ಹಂತ ಬೇರೆ ದೇಶದಲ್ಲಿ ಕಂಡು ಬಂದಿದೆ. ಅಲ್ಲಿಂದ ನಮ್ಮ ದೇಶದ ಜನರು ಜಿಲ್ಲೆಗೆ ಆಗಮಿಸುವ ಜಿಲ್ಲೆ, ತಾಲೂಕಿನ ಜನರ ಆರೋಗ್ಯದ ಕಾಳಜಿ ಮಾಡುವ ನಿಟ್ಟಿನಲ್ಲಿ ಅವರ ಮೇಲೆ ವಹಿಸಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಭಟ್ಕಳದಲ್ಲಿಯೇ ಮೊದಲ ಸಾಮಾಜಿಕ ಜಾಗ್ರತಿ ಸಭೆ ನಡೆಸಿದ್ದೇವೆ. ಆರೋಗ್ಯ ಇಲಾಖೆಗೆ ಸಾರ್ವಜನಿಕರ ಸಹಕಾರ ಕೋರುತ್ತಿದ್ದೇವೆ. ವಿದೇಶದಿಂದ ತಾಲೂಕಿಗೆ ಆಗಮಿಸಿದ ಯಾವುದೇ ವ್ಯಕ್ತಿಯ ಬಳಿ ಕೋವಿಡ್ ಟೆಸ್ಟ ಮಾಡಿದ ವರದಿ 72 ಗಂಟೆಯಾಗಿದ್ದರೆ ಅವರಿಗೆ ಮತ್ತೆ ಪುನಃ ಪರೀಕ್ಷೆಗೆ ಒಳಪಡಿಸುವುದಿಲ್ಲ. ಆದರೆ ಅವರು ಮನೆಯಲ್ಲಿ ಸರಕಾರದ ಆದೇಶ ಪಾಲನೆಯಂತೆ ಹೋಮ್ ಕ್ವಾರಂಟೈನನಲ್ಲಿರಬೇಕು. ವಿದೇಶದಿಂದ ತಾಲೂಕಿಗೆ ಬಂದವರ ಬಗ್ಗೆ ಸಾರ್ವಜನಿಕರು ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಒಂದು ಹಂತದ ಸಂಪೂರ್ಣ ಮಾಹಿತಿ ಏರರ್ಪೋರ್ಟನಿಂದ ಬರಲಿದ್ದು ಅದರನ್ವಯ ಅವರನ್ನು ಪರೀಕ್ಷೆಗೆ ಒಳಪಡಿಸಲಿದ್ದೇವೆ ಎಂದರು.
ಯು.ಕೆ.ದಲ್ಲಿ ಎರಡನೇ ಹಂತದ ಕೋರೊನಾ ಹರಡುವಿಕೆಯನ್ನು ಪತ್ತೆ ಹಚ್ಚಿದ್ದು ಇದು ಈ ಹಿಂದಿನ ಕೋರೊನಾ ವೈರಸಗಿಂತ 70% ಹೆಚ್ಚಿದ್ದಾಗಿ ಒಬ್ಬರಿಂದ ಒಬ್ಬರಿಗೆ ಹರಡುವ ವೇಗ ಹೆಚ್ಚಿದೆ. ಇದರಿಂದ ಮುಂಜಾಗ್ರತಾ ಕ್ರಮವಾಗಿ ಜನರ ಆರೋಗ್ಯ ರಕ್ಷಣೆಗಾಗಿ ಪ್ರತಿ ವಾರ್ಡನಲ್ಲಿ ಗಂಟಲ ದ್ರವ ಪರೀಕ್ಷೆ ತಾಲೂಕಿನಲ್ಲಿ ಆರಂಭಿಸಲಿದ್ದು ಸಾರ್ವಜನಿಕರು ಸಹಕರಿಸಬೇಕಾಗಿದೆ. ಈ ಹಿಂದೆ ಬರುತ್ತಲಿದ್ದ ಪಾಸಿಟಿವ್ ಪ್ರಕರಣಗಳು ಎರಡನೇ ಹಂತಕ್ಕೆ ತಲುಪಿದ ಕೋರೋನಾದಿಂದ ಎರಡು ಪಟ್ಟು ಹೆಚ್ಚಾಗಲಿದೆ ಎಂದರು.
ಈ ಸಂದರ್ಭದಲ್ಲಿ ಸರಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಮಾತನಾಡಿ ‘ ಸ್ವಾಬ್ ಟೆಸ್ಟ್ ಇಷ್ಟು ಹೆಚ್ಚು ಮಾಡಲಾಗುತ್ತೋ ಅದರಿಂದ ನಮ್ಮಲ್ಲಿನ ಕೋವಿಡ್ ನೆಗೆಟಿವ್ ವರದಿ ತಿಳಿದು ಬರಲಿದೆ. ಇದರಿಂದ ಜಿಲ್ಲಾಢಳಿತಕ್ಕು ಸರಕಾರಕ್ಕೆ ಜಿಲ್ಲೆ ತಾಲೂಕಿನಲ್ಲಿ ಕೋವಿಡ್ ಪ್ರಕರಣಗಳು ಕಡಿಮೆ ಇರುವುದು ಅರಿವಿಗೆ ಬರಲಿದೆ. ಇವೆಲ್ಲವು ಸಾರ್ವಜನಿಕರು ಇಲಾಖೆಯ ಜಂಟಿ ಕಾರ್ಯದಿಂದ ಸಾಧ್ಯ.
ಅದರಿಂದ ಕೋವಿಡನೊಂದಿಗೆ ಹೋರಾಟ ಮಾಡಬೇಕಾದರೆ ದಿನಕ್ಕೆ 200 – 250 ಸ್ವಾಬ್ ಟೆಸ್ಟ್ ಮಾಡಲೇ ಬೇಕಾಗಿದೆ. ಆದ್ದರಿಂದ ಶುಕ್ರವಾರದಿಂದ ತಾಲೂಕಿನ ನಗರ ಭಾಗದಲ್ಲಿ ಪ್ರತಿ ವಾರ್ಡನಂತೆ ಮನೆ ಮನೆಗೆ ತೆರಳಿ ಗಂಟಲ ದ್ರವ ಪರೀಕ್ಷೆ ಅರಂಭಿಸಲಿದ್ದೇವೆ ಎಂದು ತಿಳಿಸಿದರು.
ನಂತರ ಸಭೆಯಲ್ಲಿ ಉಪಸ್ಥಿತರಿಂದ ಮುಸ್ಲಿಂ ಸಮಾಜದ ಮುಖಂಡ ಇನಾಯತುಲ್ಲಾ ಶಾಬಂದ್ರಿ ಹಾಗೂ ರಕೀಬ್ ಎಮ್.ಜೆ. ನದ್ವಿ ಮಾತನಾಡಿ ವಿದೇಶದಿಂದ ಬಂದಂತಹವರ ಮೇಲೆ ನಿಗಾ ಇರಿಸಿ ಅವರ ಕೋವಿಡ್ ಪರೀಕ್ಷೆ ಮಾಡುವ ಬದಲು ಈಹಿಂದೆ ಮನೆ ಮನೆಗೆ ತೆರಳಿ ಪ್ರತಿಯೊಬ್ಬರಿಗೆ ಕಿರಿಕಿರಿ ನೀಡಿ ಪರೀಕ್ಷೆಗೆ ಒಳಪಡಿಸುವುದು ತಪ್ಪಲ್ಲ. ಮೊದಲು ನಿಮ್ಮಲ್ಲಿನ ವ್ಯವಸ್ಥೆ ಸರಿಪಡಿಸಿಕೊಳ್ಳಿ ಆಮೇಲೆ ಜನರಿಗೆ ಕೋವಿಡ್ ಪರೀಕ್ಷೆ ಮಾಡಿ. ಈ ಹಿಂದೆ ಸಾಕಷ್ಟು ಜನರ ಕೋವಿಡ್ ಟೆಸ್ಟ್ ವರದಿ ಇನ್ನು ತನಕ ಬಾರದೇ ಇರುವುದು ಇಲಾಖೆಯ ಕೆಲಸದ ವೈಖರಿ ತಿಳಿಯುತ್ತದೆ. ತಾಲೂಕಿನಲ್ಲಿ ಮತ್ತೆ ಮನೆ ಮನೆಗೆ ತೆರಳಿ ವಾರ್ಡಗಳಲ್ಲಿ ಕೋವಿಡ್ ಪರೀಕ್ಷೆ ಮಾಡಲು ನಮ್ಮ ಸಹಕಾರವಿಲ್ಲ ಒಂದು ವೇಳೆ ಇಲಾಖೆಯು ಮುಂದುವರೆದಲ್ಲಿ ನಮ್ಮನ್ನು ಹೊಣೆಗಾರರನ್ನಾಗಿ ಮಾಡಬೇಡಿ ಎಂದು ಅಧಿಕಾರಿಗಳಿಗೆ ಹೇಳಿದರು.
ಮಾಜಿ ಸೈನಿಕ ಶ್ರೀಕಾಂತ ನಾಯ್ಕ ಈ ಹಿಂದಿನ ಕೋವಿಡ್ ಪ್ರಮಾಣಕ್ಕೂ ಈಗಿನ ಕೋವಿಡ್ ಪ್ರಮಾಣ ಅದರ ಹರಡುವಿಕೆಯ ವೇಗದ ಬಗ್ಗೆ ಹಾಗೂ ಈ ಹಿಂದಿನ ರೋಗ ಲಕ್ಷಣದಂತೆಯೇ ಕೋವಿಡ ಇರಲಿದೆಯಾ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಪ್ರಶ್ನಿಸಿದರು. ಇದಕ್ಕೆ ಡಿ.ಎಚ್.ಓ. ಅವರು ಜ್ವರ, ನೆಗಡಿ, ಶೀತ, ಕೆಮ್ಮು ಜೊತೆಗೆ ಈ ಬಾರಿ ಎರಡನೇ ಹಂತದ ವೈರಸನಲ್ಲಿ ವ್ಯಕ್ತಿಯಲ್ಲಿ ಬೇಧಿಯ ಲಕ್ಷಣಗಳಿದ್ದರು ಸಹ ತಕ್ಷಣಕ್ಕೆ ಆಸ್ಪತ್ರೆಗೆ ಬಂದು ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು.
ಕೊನೆಯಲ್ಲಿ ಸದ್ಯ ಸರಕಾರಿ ಆಸ್ಪತ್ರೆ ಕೋವಿಡ್ ಮುಕ್ತವಾಗಿ ಹೊರರೋಗಿಗಳಿಗೆ ಚಿಕಿತ್ಸೆ ಆರಂಭಗೊಂಡಿದ್ದು ಮತ್ತೆ ಪುನಃ ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಬೇಡಿ ಎಂದು ಇನಾಯತುಲ್ಲಾ ಶಾಬಂದ್ರಿ ಅವರು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶರದ ನಾಯಕ ಅವರಿಗೆ ಮನವಿ ಮಾಡಿದ್ದು ಇದಕ್ಕೆ ಡಾ. ಶರದ ನಾಯಕ ಮತ್ತೆ ಉತ್ತಮ ಸ್ಥಿತಿಯಲ್ಲಿರುವ ಭಟ್ಕಳ ಸರಕಾರಿ ಆಸ್ಪತ್ರೆ ಕೋವಿಡ್ ಆಸ್ಪತ್ರೆ ಆಗಿ ಮಾರ್ಪಾಡಾಗಬಾರದು ಎಂಬ ಉದ್ದೇಶಕ್ಕೆ ಮೊದಲ ಜಾಗ್ರತಿ ಸಭೆ ನಡೆಸಿದ್ದೇವೆ. ಇಲ್ಲವಾದಲ್ಲಿ ಜನರ ಸಹಕಾರ ಸಿಗದಿದ್ದಲ್ಲಿ ವೈರಸ್ ಪ್ರಮಾಣ ಏರಿಕೆಯಾಗಿ ಮತ್ತೆ ಈ ಹಿಂದಿನ ಪರಿಸ್ಥಿತಿಗೆ ಮರಳಬೇಕಾಗುತ್ತದೆ ಎಂಬ ಎಚ್ಚರಿಕೆಯೊಂದಿಗೆ ಭಟ್ಕಳ
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ದೇವರಾಜು, ತಾಲೂಕಾ ಆರೋಗ್ಯ ಅಧಿಕಾರಿ ಡಾ. ಮೂರ್ತಿರಾಜ್ ಭಟ್, ನಾಮಧಾರಿ ಸಮಾಜದ ಅಧ್ಯಕ್ಷ ಕ್ರಷ್ಣ ನಾಯ್ಕ ಆಸರಕೇರಿ, ಹಿರಿಯರಾದ ಎಮ್.ಆರ್.ನಾಯ್ಕ, ನರೇಂದ್ರ ಕಾಮತ್, ಮುಸ್ಲಿಂ ಸಮಾಜದ ಮುಖಂಡ ಇಮ್ತಿಯಾಜ್ ಉದ್ಯಾವರ, ಪುರಸಭೆ ಸದಸ್ಯ ಪಯಾಜ್ ಮುಲ್ಲಾ, ಸಮಾಜ ಸೇವಕ ನಿಸ್ಸಾರ ಸೇರಿದಂತೆ ಮುಂತಾದವರು ಇದ್ದರು.
Leave a Comment