ಭಟ್ಕಳ : ಪ್ರತಿಷ್ಠಿತ ಕರ್ನಾಟಕ ರಾಜ್ಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಹಕಾರಿ ಬ್ಯಾಂಕ್ (ಕಾಸ್ಕಡ್)ನಿರ್ದೇಶಕರಾಗಿ ಇಲ್ಲಿನ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ರು ಹಾಗೂ ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಸುನಿಲ್ ನಾಯ್ಕ ಆಯ್ಕೆಯಾಗಿದ್ದಾರೆ .

ಬೆಂಗಳೂರಿನ ಕಾಸ್ಕಾರ್ಡ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅತ್ಯಂತ ಪ್ರಬಲ ಸ್ಪರ್ಧೆಯೊಡ್ಡಿದ ಕುಮಟಾ ಅಭ್ಯರ್ಥಿ ಭುವನ್ ನಾಗರಾಜ್ ಅವರಿಂದ 1ಮತದ ಅಂತರದಿಂದ ಕಾಸ್ಕಾರ್ಡ್ ಬ್ಯಾಂಕ್ ನ ನಿರ್ದೇಶಕರ ಸ್ಥಾನವನ್ನು ಅಲಂಕರಿಸಿದ್ದಾರೆ .
ಈ ಹಿಂದೆ ಕೂಡ ಕಾಸ್ಕಾರ್ಡ್ ಬ್ಯಾಂಕಿನ ನಿರ್ದೇಶಕರಾಗಿ ಭಟ್ಕಳ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ನಿರ್ದೇಶಕ ಈಶ್ವರ ನಾಯ್ಕ ಆಯ್ಕೆಯಾಗಿ ನಂತರ ಉಪಾಧ್ಯಕ್ಷರಾಗಿದ್ದರು .ಹಾಲಿ ಮತ್ತೊಮ್ಮೆ ಅದೃಷ್ಟ ಭಟ್ಕಳ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕಿಗೆ ಒಲಿದು ಬಂದಿದೆ .ನಿನ್ನೆ ನಡೆದ ರೋಚಕ ಚುನಾವಣೆ ಪೈಪೋಟಿ ನೋಡಿದರೆ ಸುನಿಲ್ ನಾಯ್ಕ ಕಾಸ್ಕಾರ್ಡ್ ಬ್ಯಾಂಕ್ ನ ಅಧ್ಯಕ್ಷರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ
ಸುನೀಲ್ ನಾಯ್ಕ ಗೆಲುವಿನ ರೋಚಕ:
ಭಟ್ಕಳದ ಶಾಸಕ ಸುನೀಲ ನಾಯ್ಕ ಕಾಸ್ಕಾರ್ಡ್ ಬ್ಯಾಂಕ್ ಗೆ ಆಯ್ಕೆಯಾಗುವ ರೋಚಕ ಕಥೆಯೊಂದಿದೆ .ಪಕ್ಷ ಪ್ರಾಬಲ್ಯದ ಮೇಲೆ ನಡೆಯುವ ಆಯ್ಕೆಯಲ್ಲಿ ಕಾಂಗ್ರೆಸ್ ಗೆ ಸೇರಿದ ಇಬ್ಬರು ನಿರ್ದೇಶಕರು ಸುನೀಲ ನಾಯ್ಕ ಕೈ ಹಿಡಿದಿದ್ದಾರೆ .
ವಿಶೇಷ ಎಂದರೆ ಉತ್ತರ ಕನ್ನಡ ಜಿಲ್ಲೆಯ ಹನ್ನೊಂದು ವಿವಿಧ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಗಳ ಪೈಕಿ ಹೊನ್ನಾವರ, ಕುಮಟಾ,ಅಂಕೋಲಾ, ಕಾರವಾರ , ಜೋಯಿಡಾ ಶಿರಸಿ, ಸಿದ್ದಾಪುರ, ಸೇರಿದಂತೆ ಒಟ್ಟು 7ಸಹಕಾರಿ ಬ್ಯಾಂಕ್ ಗಳಲ್ಲಿ ಕಾಂಗ್ರೆಸ್ ಬೆಂಬಲಿತರ ಇದ್ದರು ಆದ್ದರಿಂದ ಶಾಸಕ ಸುನೀಲ ನಾಯ್ಕ ಗೆಲುವಿನ ದಡ ಸೇರಿರುವುದು ಕಾಂಗ್ರೆಸ್ ಪಾಳಯಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ .ಜಿಲ್ಲೆಯ ಕಾಂಗ್ರೆಸ ಬೆಂಬಲಿತ 7 ಅಭ್ಯರ್ಥಿಗಳನ್ನು ಜತೆಗೂಡಿಸಿಕೊಂಡು ಬೆಂಗಳೂರಿಗೆ ತೆರಳಿದ ಮಾಜಿ ಶಾಸಕ ಮಂಕಾಳ ವೈದ್ಯ ಅವರಿಗೆ ಸುನೀಲ ನಾಯ್ಕ ಅವರ ಗೆಲುವಿನ ಟ್ವಿಸ್ಟ್ ನಿರಾಸೆ ಉಂಟುಮಾಡಿದೆ
ಭಟ್ಕಳದಲ್ಲಿ ಸಂಭ್ರಮಾಚರಣೆ : ಶಾಸಕ ಸುನೀಲ ನಾಯ್ಕ ಕಾಸ್ಕಾರ್ಡ್ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗುವ ಸುದ್ದಿ ತಿಳಿಯುತ್ತಿದ್ದಂತೆ ಭಟ್ಕಳದಲ್ಲಿ ಅವರ ಬೆಂಬಲಿಗರು ಹಾಗೂ ಬಿಜೆಪಿ ಕಾರ್ಯಕರ್ತರು ರಾತ್ರಿ ಭಟ್ಕಳ ತಾಲೂಕಿನ ಶಂಸುದ್ದೀನ್ ಸರ್ಕಲ್ ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.
Leave a Comment