• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಅಕ್ರಮ ಚಿನ್ನಾ ಸಾಗಟ ಆರೋಪ : ಭಟ್ಕಳದ ಸುಲ್ತಾನ ಸ್ಟ್ರೀಟ್‌ನ ಮಹ್ಮದ್ ಫರಾನ್‌ ಪುಣೆಯ ಕಸ್ಟಮ್ಸ್ ಅಧಿಕಾರಿಗಳ ವಶಕ್ಕೆ

January 3, 2021 by bkl news Leave a Comment

ಭಟ್ಕಳ:  ಅಕ್ರಮವಾಗಿ ಚಿನ್ನ ಸಾಗಾಟ ಆರೋಪದ ಮೇರೆಗೆ ಭಟ್ಕಳದ ವ್ಯಕ್ತಿಯೊರ್ವನ ಮನೆ ಹಾಗೂ ಕಚೇರಿಯ ಮೇಲೆ ದಾಳಿ ನಡೆಸಿದ ಪುಣೆಯ ಕಸ್ಟಮ್ಸ್ ಅಧಿಕಾರಿಗಳು, ಹೆಚ್ಚಿನ ವಿಚಾರಣೆಗಾಗಿ ಆತನನ್ನು ವಶಕ್ಕೆ ಪಡೆದು ಮುಂಬೈ ಕರೆದುಕೊಂಡ ಹೋದ ಘಟನೆ ಶನಿವಾರ ರಾತ್ರಿ ನಡೆದಿದೆ.

IMG 20210103 WA0089

 
ಪಟ್ಟಣದ ಸುಲ್ತಾನ ಸ್ಟ್ರೀಟ್‌ನ ನಿವಾಸಿ ಮಹ್ಮದ್ ಫರಾನ್‌ನನ್ನು ಕಸ್ಟ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈತನ ಮೇಲೆ ಅಕ್ರಮ ಚಿನ್ನ ಸಾಗಾಟ ಮತ್ತು ಮಾರಾಟದ ಆರೋಪವಿದೆ. ಈತನು ಭಟ್ಕಳದ ಒಂದು ಖಾಸಗಿ ಕಚೇರಿಯಲ್ಲಿ ವಿಮಾನದ ಟಿಕೆಟ್‌ಗಳನ್ನು ಬುಕ್ ಮಾಡುತ್ತಿದ್ದ ಎನ್ನಲಾಗಿದೆ. ವಿದೇಶಕ್ಕೆ ಗೋವಾ ಅಥವಾ ಮಂಗಳೂರು ನಿಲ್ದಾಣದಿಂದ ಟಿಕೆಟ್ ಬುಕ್ ಮಾಡಿದರೆ ಈತ ಅಲ್ಲಿಂದ ತೆರಳದೆ ಮುಂಬೈನಿಂದ ವಿದೇಶಕ್ಕೆ ತೆರಳುತ್ತಿದ್ದ. ಅಲ್ಲಿಂದ ಅಕ್ರಮವಾಗಿ ತಂದ ಚಿನ್ನವನ್ನು ಮಾರಾಟ ಮಾಡುತ್ತಿದ್ದ. ಈತನಿಂದ ಚಿನ್ನ ಪಡೆದ ವ್ಯಕ್ತಿಯೊರ್ವ ಕೆಲವು ದಿನಗಳ ಹಿಂದೆ ಪುಣೆಯ ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಬಿದ್ದಿದ್ದ. ಆತನು ನೀಡಿದ ಮಾಹಿತಿ ಪ್ರಕಾರ ಪುಣೆಯ ಕಸ್ಟ್ಟಮ್ಸ್ ಅಧಿಕಾರಿಗಳು ಭಟ್ಕಳದ ಆರೋಪಿಯ ಮನೆಯ ಮೇಲೆ ದಾಳಿ ನಡೆಸಿದ್ದಾರೆ. 
ಭಟ್ಕಳದ ಕಸ್ಟಮ್ಸ್ ಅಧಿಕಾರಿಗಳೊಂದಿಗೆ ಸ್ಥಳೀಯ ಪೊಲೀಸರ ಸಹಾಯ ಪಡೆದು ಬೆಳಿಗ್ಗೆಯಿಂದಲೆ ಸುಲ್ತಾನ ಸ್ಟ್ರೀಟ್‌ನಲ್ಲಿರುವ ಮನೆಯ ಮೇಲೆ ಪುಣೆಯ ಅಧಿಕಾರಿಗಳು ಹುಡುಕಾಟ ಆರಂಭಿಸಿದ್ದರು. ಮನೆಯಲ್ಲಿ ನಗನಗದು ಪತ್ತೆಯಾಗಿಲ್ಲಾವಾದರೂ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡದ ಕಾರಣ ಆರೋಪಿಯ ಆಧಾರ ಕಾರ್ಡ ಮತ್ತಿತರ ದಾಖಲೆಗಳ ಸಮೇತ ವಶಕ್ಕೆ ಪಡೆದು ಕಮಿಷನರ್ ಸೂಚನೆ ಮೆರೆಗೆ ಭಟ್ಕಳದ ವ್ಯಕ್ತಿಯನ್ನು ಮುಂಬೈಗೆ ಕರೆದೊಯ್ದಿದ್ದಾರೆ. ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರೆದಿದೆ. ಈತನ ಮೇಲೆ ಇನ್ನು ಹಲವು ಪ್ರಕರಣಗಳು ಇದೆ ಎನ್ನಲಾಗಿದೆ. ಕಾರ್ಯಚರಣೆಯಲ್ಲಿ ಪುಣೆಯ ಜಾಯಿಂಟ್ ಕಮಿಷನರ್, ಇಬ್ಬರು ಇನ್ಸಪೆಕ್ಟರ್‌ಗಳು ಸೇರಿ ಅವರ ಸಹಾಯಕರು ಇದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Bhatkal News, Canara News, Crime, Trending Tagged With: the booking of plane tickets, the customs officials of Pune, the Mumbai incident, the raid on the office, The seizure of documents, the smuggling of gold, ಅಕ್ರಮವಾಗಿ ಚಿನ್ನ ಸಾಗಾಟ, ಕಚೇರಿಯ ಮೇಲೆ ದಾಳಿ, ದಾಖಲೆಗಳ ಸಮೇತ ವಶ, ಪುಣೆಯ ಕಸ್ಟಮ್ಸ್ ಅಧಿಕಾರಿಗಳು, ಮುಂಬೈ ಕರೆದುಕೊಂಡ ಹೋದ ಘಟನೆ, ವಿಮಾನದ ಟಿಕೆಟ್‌ಗಳನ್ನು ಬುಕ್

Explore More:

About bkl news

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,377 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

 

Loading Comments...