ಭಟ್ಕಳ: ಶಿರಾಲಿಯ ಸ್ನೇಹಿಜೀವಿ ಸಮಾಜ ಸೇವಕ,ಕ್ರೀಡಾಭಿಮಾನಿಯಾಗಿದ್ದ ಅಣ್ಣಪ್ಪ ನಾರಾಯಣ ನಾಯ್ಕ (44)ಶಿರಾಲಿ ಶುಕ್ರವಾರದಂದು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾರೆ.

ಕೆಲವು ದಿನಗಳ ಹಿಂದೆ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದು ಇವರನ್ನು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಮೃತರು ಬೋಟಿ ಅಣ್ಣಪ್ಪ ಎಂದು ಪ್ರಸಿದ್ಧರಾಗಿದ್ದರು. ಶಿರಾಲಿಯಲ್ಲಿ ಅನೇಕ ಕಬ್ಬಡ್ಡಿ ಹಾಗೂ ವಾಲಿಬಾಲ್ ಕ್ರೀಡಾಪಟುಗಳನ್ನು ಪ್ರೀತಿ ಸ್ಫೋಟ್ಸ್ ಕ್ಲಬ್ ಮೂಲಕ ಬೆಳೆಸಿ ಪೋಷಿಸಿದ್ದರು. ಇವರ ಗರಡಿಯಲ್ಲಿ ಅನೇಕ ಕ್ರೀಡಾಪಟುಗಳು ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ್ದರು.ಶುಕ್ರವಾರ ಮಧ್ಯಾಹ್ನ ಮೃತರ ಅಂತ್ಯ ಸಂಸ್ಕಾರ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ನಡೆಸಲಾಯಿತು.ಅಂತ್ಯ ಸಂಸ್ಕಾರ ಮೊದಲು ಪ್ರೀತಿ ಸ್ಫೋಟ್ಸ್ ಕ್ಲಬ್ ಸದಸ್ಯರು,ಹಾಗೂ ಕ್ರೀಡಾಪಟುಗಳು ಕ್ರೀಡೆಯ ಸಮವಸ್ತ್ರವನ್ನು ಅಣ್ಣಪ್ಪ ಅವರ ಪಾರ್ಥಿವ ಶರೀರದ ಮೇಲೆ ಇಟ್ಟು ಗೌರವಿಸಿದರು.ಮೃತ ರಿಗೆ ಹೆಂಡತಿ, ಓರ್ವ ಪುತ್ರ ಮತ್ತು ಇಬ್ಬರು ಪುತ್ರಿಯನ್ನು ಅಗಲಿದ್ದಾರೆ.ಇವರ ಮರಣದ ನಂತರದ ಆಸ್ಪತ್ರೆಯ ಸರಿಸುಮಾರು ರೂ.೧.೫೦ ಲಕ್ಷ ವೆಚ್ಚವನ್ನು ಮಾಜಿ ಶಾಸಕ ಮಂಕಾಳು ವೈದ್ಯ ಭರಿಸಿ ಮಾನವೀಯತೆ ಮೆರೆದಿದ್ದಾರೆ.ಅಂತ್ಯ ಸಂಸ್ಕಾರದಲ್ಲಿ ಶಾಸ ಸುನೀಲ್ ನಾಯ್ಕ,ಜಿಲ್ಲಾ ಕಬ್ಬಡ್ಡಿ ಅಸೋಶೀಯೇಷನ್ ನ ಅಧ್ಯಕ್ಷರಾದ ಸೂರಜ್ ಸೋನಿ, ಶಿರಾಲಿ ಪಂಚಾಯತನ ಮಾಜಿ ಅಧ್ಯಕ್ಷ ವ ವೆಂಕಟೇಶ ನಾಯ್ಕ, ಪ್ರೀತಿ ಸ್ಪೋಟ್ಸ ಕ್ಲಬ್ ನ ಅಧ್ಯಕ್ಷ ಕಿಶೋರ ನಾಯ್ಕ ಸೇರಿದಂತೆ ಹಲವರು ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ್ದರು.
Leave a Comment