ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹವಾ ಜೋರಾಗಿತ್ತು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕುಮುಟಾ ಗೆ ಆಗಮಿಸಿರುವ ಸುದ್ದಿ ತಿಳಿದು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಪುನೀತ್ ರಾಜಕುಮಾರ್ ಅವರನ್ನು ಕಾಣಲು ಕಿಕ್ಕಿರಿದು ತುಂಬಿದ್ದರು.ಇಂದು ಪುನೀತ್ ರಾಜಕುಮಾರ್ ಅವರು ಕುಮಟಾ ನಗರಕ್ಕೆ ಆಗಮಿಸುತ್ತಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಪೊಲೀಸ್ ಅವರು ಅಭಿಮಾನಿಗಳನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಗಿತ್ತು.
ಪುನೀತರಾಜ್‍ಕುಮಾರ ಕುಮಟಾಕ್ಕೆ ಆಗಮಿಸಲು ಕಾರಣ ಏನು ಎಂಬುದನ್ನು ತಿಳಿಯುವುದಾದರೆ ಪುನೀತ್ ರಾಜಕುಮಾರ್ ಅವರ ಆಪ್ತರು ಹಾಗೂ ಪುನೀತ್ ರಾಜಕುಮಾರ್ ಅವರ ಕಚೇರಿಯಲ್ಲಿ ಲೆಕ್ಕದ ವಿಭಾಗದಲ್ಲಿ ಕಾರ್ಯ ನಿರ್ವಹಿಸುವ ಗುರುರಾಜ್ ಎಂಬುವವರ ಮದುವೆ ಕುಮಟಾ ನಗರದಲ್ಲಿ ಜರುಗಿತ್ತು. ಹೀಗಾಗಿ ಈ ಶುಭ ಕಾರ್ಯಕ್ರಮಕ್ಕೆ ಪುನೀತ್ ರಾಜಕುಮಾರ್ ಅವರು ಆಗಮಿಸಿದ್ದರು. ಕುಮುಟಾದ ದೇವರಹಕ್ಕಲ ಸಭಾಭವನದಲ್ಲಿ ಗುರುರಾಜ್ ಅವರ ವಿವಾಹ ಸಮಾರಂಭ ನಿಗದಿಯಾಗಿತ್ತು.ಹೀಗಾಗಿ
ಪುನೀತ್ ರಾಜಕುಮಾರ್ ಅವರು ಕುಮುಟಾದ ಆಗಮಿಸಿದ್ದರು. ಪುನೀತ್ ರಾಜಕುಮಾರ್ ಅವರು ಮದುವೆಗೆ ಆಗಮಿಸಿದ ಸುದ್ದಿ ಸುತ್ತಮುತ್ತ ಶರವೇಗದಲ್ಲಿ ತಿಳಿಯುತ್ತಿದ್ದಂತೆ ಅಭಿಮಾನಿಗಳು ಸಹ ಪ್ರತಿಕ್ಷಣ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಗೊಂಡ ಕಾರಣ ಕೆಲಕಾಲ ಪೊಲೀಸರಿಗೆ ಅಭಿಮಾನಿಗಳನ್ನು ನಿಯಂತ್ರಿಸುವುದು ಕಷ್ಟ ಸಾಧ್ಯವಾಗಿತ್ತು. ಪುನೀತ್ ರಾಜಕುಮಾರ್ ಅವರು ತಮ್ಮ ಆಪ್ತರ ಮದುವೆ ಮುಗಿಸಿ ಗೋಕರ್ಣದ ಶ್ರೀ ಮಹಾಬಲೇಶ್ವರನ ದರ್ಶನ ಪಡೆದರು. ಗೋಕರ್ಣದಲ್ಲಿ ಪುನೀತ್ ರಾಜಕುಮಾರ್ ಅವರು ಈ ವೇಳೆ ವಿಶೇಷ ಪೂಜೆ ಸಹ ನೆರವೇರಿಸಿದರು.
ಸೆಲ್ಫಿಗಾಗಿ ಮುಗಿಬಿದ್ದ ಪುನೀತ್ ಅಭಿಮಾನಿಗಳು..
Leave a Comment