• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಗುಣಮಟ್ಟದ ಉತ್ಪನ್ನಗಳು ಮತ್ತು ಗ್ರಾಹಕರ ಮನಸ್ಸು ಗೆಲ್ಲಲು ಗಮನ ಹರಿಸಿ: ಪ್ರಧಾನಿ ನರೇಂದ್ರ ಮೋದಿ

January 6, 2021 by Sachin Hegde Leave a Comment

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆತ್ಮನಿರ್ಭರ ಭಾರತ ಕುರಿತು ಕೆಲವು ಆಲೋಚನೆಗಳನ್ನು @LinkedInನಲ್ಲಿ ಹಂಚಿಕೊಂಡಿದ್ದಾರೆ. ವಿಶ್ವವ್ಯಾಪಿ ಸ್ವೀಕೃತವಾಗುವ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುವಂತೆ ಅವರು ಕರೆ ಕೊಟ್ಟಿದ್ದಾರೆ

modi 2

ಪ್ರಧಾನ ಮಂತ್ರಿಯವರು ಹಂಚಿಕೊಂಡಿರುವ ಆಲೋಚನೆಗಳು ಹೀಗಿವೆ:

“ಕೆಲವು ದಿನಗಳ ಹಿಂದೆ, ನಾನು ಮಾಪನಶಾಸ್ತ್ರದ ರಾಷ್ಟ್ರೀಯ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದೆ.

ಇದೊಂದು ವ್ಯಾಪಕವಾಗಿ ಚರ್ಚೆಯಾಗದ ಪ್ರಮುಖ ವಿಷಯವಾಗಿದೆ.

ಅಂದಿನ ಭಾಷಣದಲ್ಲಿ ನಾನು ಪ್ರಸ್ತಾಪಿಸಿದ ವಿಷಯವೆಂದರೆ, ಮಾಪನಶಾಸ್ತ್ರ ಅಥವಾ ಮಾಪನದ ಅಧ್ಯಯನವು ಆತ್ಮನಿರ್ಭರ ಭಾರತ (ಸ್ವಾವಲಂಬಿ ಭಾರತ) ಮತ್ತು ನಮ್ಮ ಉದ್ಯಮಿಗಳ ಆರ್ಥಿಕ ಸಮೃದ್ಧಿಗೆ ಹೇಗೆ ಸಹಾಯ ಮಾಡುತ್ತದೆ ಎಂಬುದು.

ಭಾರತವು ಕೌಶಲ್ಯ ಮತ್ತು ಪ್ರತಿಭೆಯ ಶಕ್ತಿಕೇಂದ್ರವಾಗಿದೆ.

ನಮ್ಮ ನವೋದ್ಯಮದ ಯಶಸ್ಸು ನಮ್ಮ ಯುವಜನತೆಯ ಹೊಸತನದ ಉತ್ಸಾಹವನ್ನು ತೋರಿಸುತ್ತದೆ.

ಹೊಸ ಉತ್ಪನ್ನಗಳು ಮತ್ತು ಸೇವೆಗಳನ್ನು ವೇಗವಾಗಿ ಸೃಷ್ಟಿಸಲಾಗುತ್ತಿದೆ.

ದೇಶೀಯವಾಗಿ ಮತ್ತು ಜಾಗತಿಕವಾಗಿ ಅವಕಾಶಗಳಿರುವ  ಬೃಹತ್ ಮಾರುಕಟ್ಟೆಯೂ ಇದೆ.

ಜಗತ್ತು ಇಂದು ಕೈಗೆಟುಕುವ, ದೀರ್ಘ ಬಾಳಿಕೆಯ ಮತ್ತು ಬಳಸಬಹುದಾದ ಉತ್ಪನ್ನಗಳ ಅನ್ವೇಷಣೆಯಲ್ಲಿದೆ.

ಆತ್ಮನಿರ್ಭರ ಭಾರತವು ಪ್ರಮಾಣ ಮತ್ತು ಗುಣಮಟ್ಟ ಎಂಬ ಅವಳಿ ತತ್ವಗಳ ಮೇಲೆ ನಿಂತಿದೆ.

ನಾವು ಹೆಚ್ಚು ಉತ್ಪಾದನೆಯನ್ನು ಮಾಡಲು ಬಯಸುತ್ತೇವೆ. ಹಾಗೆಯೇ, ಉತ್ತಮ ಗುಣಮಟ್ಟದ ಉತ್ಪನ್ನಗಳ ಉತ್ಪಾದನೆಯನ್ನು ನಾವು ಬಯಸುತ್ತೇವೆ.

ತನ್ನ ಉತ್ಪನ್ನಗಳಿಂದ ಜಾಗತಿಕ ಮಾರುಕಟ್ಟೆಗಳನ್ನು ತುಂಬಲು ಭಾರತ ಬಯಸುವುದಿಲ್ಲ.

ಭಾರತೀಯ ಉತ್ಪನ್ನಗಳು ವಿಶ್ವದಾದ್ಯಂತ ಜನರ ಮನಸ್ಸನ್ನು ಗೆಲ್ಲಬೇಕೆಂದು ನಾವು ಬಯಸುತ್ತೇವೆ.

ನಾವು ‘ಮೇಕ್ ಇನ್ ಇಂಡಿಯಾ’ದಿಂದ ಜಾಗತಿಕ ಬೇಡಿಕೆಯನ್ನು ಪೂರೈಸುವುದು ಮಾತ್ರವಲ್ಲದೆ ಜಾಗತಿಕ ಸ್ವೀಕೃತಿಯನ್ನೂ ಪಡೆಯುತ್ತೇವೆ.

ನೀವು ಉತ್ಪಾದಿಸುವ ಯಾವುದೇ ಉತ್ಪನ್ನ ಅಥವಾ ಸೇವೆಯಲ್ಲಿ ‘ಶೂನ್ಯ ಪರಿಣಾಮ, ಶೂನ್ಯ ದೋಷ’ ಕುರಿತು ಯೋಚಿಸಬೇಕು ಎಂದು ನಾನು ನಿಮ್ಮೆಲ್ಲರನ್ನೂ ಕೋರುತ್ತೇನೆ.

ಉದ್ಯಮದ ಮುಖಂಡರು, ವ್ಯಾಪಾರ ಪ್ರತಿನಿಧಿಗಳು, ನವೋದ್ಯಮದ ಕ್ಷೇತ್ರದ ಯುವಕರು ಮತ್ತು ವೃತ್ತಿಪರರೊಂದಿಗಿನ ನನ್ನ ಸಂವಾದದ ಸಂದರ್ಭದಲ್ಲಿ, ಈ ಬಗ್ಗೆ ಈಗಾಗಲೇ ಹೆಚ್ಚಿನ ಮಟ್ಟದ ಜಾಗೃತಿ ಇರುವುದನ್ನು ನೋಡಿದ್ದೇನೆ.

ಇಂದು, ಜಗತ್ತೇ ನಮ್ಮ ಮಾರುಕಟ್ಟೆಯಾಗಿದೆ.

ಭಾರತದ ಜನರಿಗೆ ಸಾಮರ್ಥ್ಯವಿದೆ.

ವಿಶ್ವದ ನಂಬುಗೆಯ ರಾಷ್ಟ್ರವಾಗಿ, ಭಾರತವು ವಿಶ್ವಾಸಾರ್ಹತೆ ಹೊಂದಿರುವ ರಾಷ್ಟ್ರವಾಗಿದೆ.

ನಮ್ಮ ಜನರ ಸಾಮರ್ಥ್ಯ ಮತ್ತು ದೇಶದ ವಿಶ್ವಾಸಾರ್ಹತೆಯೊಂದಿಗೆ, ಉನ್ನತ ಗುಣಮಟ್ಟದ ಭಾರತೀಯ ಉತ್ಪನ್ನಗಳು ಬಹು ದೂರದವರೆಗೆ ಸಾಗುತ್ತವೆ. ಇದು ಜಾಗತಿಕ ಸಮೃದ್ಧಿಗೆ ಶಕ್ತಿ ವರ್ಧಕವಾದ  ಆತ್ಮನಿರ್ಭರ ಭಾರತಕ್ಕೆ ಸಲ್ಲಿಸುವ ನಿಜವಾದ ಗೌರವವಾಗಿದೆ.”

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: National News Tagged With: LinkedIn, ಆತ್ಮನಿರ್ಭರ ಭಾರತವು, ಉದ್ಯಮದ ಮುಖಂಡರು, ನವೋದ್ಯಮದ ಕ್ಷೇತ್ರ, ವಿಶ್ವದಾದ್ಯಂತ ಜನರ ಮನಸ್ಸನ್ನು, ವ್ಯಾಪಾರ ಪ್ರತಿನಿಧಿಗಳು, ಶೂನ್ಯ ಪರಿಣಾಮ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,206 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...