ಭಟ್ಕಳ:ಡ್ರಗ್ಸ್ ಜಾಲಕ್ಕೆ ಸಂಬಂದಿಸಿದಂತೆ ಬೆಂಗಳೂರಿನ ಸಿಸಿಬಿ ಪೊಲೀಸರು ಭಟ್ಕಳ ಸುಲ್ತಾನ ಸ್ಟ್ರೀಟ್ನ ಮನೆಯೊಂದರ ಮೇಲೆ ಶುಕ್ರವಾರ ದಿಡೀರ ದಾಳಿ ನಡೆಸಿ ವಿಚಾರಣೆ ನಡೆಸಿದ್ದಾರೆ.
ಕಳೆದ ಸಪ್ಟಂಬರ ತಿಂಗಳಲ್ಲಿ ಡ್ರಗ್ಸ್ ಮಾರಾಟಕ್ಕೆ ಸಂಬಂದಿಸಿದಂತೆ ಖಚಿತ ಮಾಹಿತಿ ಮೇರೆಗ ಇದೆ ಮನೆಯ ಮೇಲೆ ದಾಳಿ ಮಾಡಿದ ಪೊಲೀಸರುಎನೂ ಸಿಗದೇ ಬರಿಗೈಯಲ್ಲಿ ವಾಪಾಸು ಬಂದಿದ್ದರು.ಪುನಃ ಸಿಸಿಬಿ ಪೊಲೀಸರು ಇದೆ ಮನೆ ಮೇಲೆ ದಾಳಿ ನಡೆಸಿದ್ದಾರೆ. ಡ್ರಗ್ ಪೆಡ್ಲರ್ ಮೆಸ್ಸಿ ಎಂಬ ಆರೋಪಿಯು ಇದೆ ಕುಟುಂಬದ ಸದಸ್ಯ ಎಂದು ತಿಳಿದುಬಂದಿದೆ. ಕಳೆದಸೆಪ್ಟಂಬರನಿಂದ ಈತನು ತಲೆಮರೆಸಿಕೊಂಡಿದ್ದು ವಿಚಾರಣೆಗಾಗಿ ಭಟ್ಕಳಕ್ಕೆ ಆಗಮಿಸಿದ್ದರು ಎನ್ನಲಾಗುತ್ತಿದೆ. ವಿಚಾರಣೆ ಸಂದರ್ಭದಲ್ಲಿ ಕುಟುಂಬ ಸದಸ್ಯರ ಮಾಹಿತಿ, ದಾಖಲೆ ಕಲೆ ಹಾಕಿರುವ ಸಿಸಿಬಿ ಪೊಲೀಸರು ಈತನ ಮನೆ ಮೇಲೆ ನಿಗಾ ಇರಿಸುವಂತೆ ಸ್ಥಳೀಯ ಪೊಲೀಸರಿಗೆ ತಿಳಿಸಿದ್ದಾರು ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಸಿಸಿಬಿ ಇನ್ಸಪೇಕ್ಟರ್ ವಿರೂಪಾಕ್ಷ ತಂಡದ ಜೊತೆ ಭಟ್ಕಳ ಸಿಪಿಐ ದಿವಾಕರ್,ಸಬ್ ಇನ್ಸಪೇಕ್ಟರ್ ಭರತ್ ಇದ್ದರು.
Leave a Comment