ಭಟ್ಕಳ: ತಾಲೂಕಿನ ಮುರ್ಡೇಶ್ವರದ ವಸತಿ ಗೃಹವೊಂದರಲ್ಲಿ ಯುವಕನೊರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಮುರ್ಡೇಶ್ವರ ಠಾಣೆಯಲ್ಲಿ ಶನಿವಾರ ದಾಖಲಾಗಿದೆ.

ಮುರ್ಡೇಶ್ವರದ ಹಿರೇದೋಮಿ ನಿವಾಸಿ ಮಾರುತಿ ಗಣಪತಿ ನಾಯ್ಕ(೩೪) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ಮುಡೇಶ್ವರದಲ್ಲಿ ಮೂನ್ಸ್ಟಾರ್ ಎನ್ನುವ ವಸತಿ ಗೃಹವೊಂದನ್ನು ಲೀಸ್ಗೆ ಪಡೆದು ನಡೆಸುತ್ತಿದ್ದರು. ಅದೆ ವಸತಿ ಗೃಹದಲ್ಲೆ ಶನಿವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೂಮ್ಬಾಯ ಕೊಠಡಿಯನ್ನು ಸ್ವಚ್ಚಗೊಳಿಸಲು ಬಾಗಿಲು ಬಡಿದಾಗ ಬಾಗಿಲು ತೆಗೆಯದ ಕಾರಣ. ಅನುಮಾನಗೊಂಡು ಕಿಟಕಿ ಮೂಲಕ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಈ ಬಗ್ಗೆ ಮೃತನ ಅಣ್ಣ ಸುಬ್ರಾಯ ಗಣಪತಿ ನಾಯ್ಕ ಮುರ್ಡೇಶ್ವರ ಠಾಣೆ ಯಲ್ಲಿ ದೂರು ನೀಡಿದ್ದಾರೆ.ಎ.ಎಸ್.ಐ ಎಂ ಎಂ ಶೇಕ್ ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಗೊಂಡಿದ್ದಾರೆ.
Leave a Comment