ಹೊನ್ನಾವರ – ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರಿಂದ ಪ್ರೇರಣೆ ಪಡೆದ ಅಂಕೋಲಾದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟ ದಂಡಿ ಸತ್ಯಾಗ್ರಹದ ಕಥಾವಸ್ತುವನ್ನು ಒಳಗೊಂಡಿರುವ ಡಾ.ರಾಜೇಶಖರ ಮಠಪತಿ ಅವರ ಕಾದಂಬರಿ ಆಧಾರಿತ ದಂಡಿ ಚಲನಚಿತ್ರದ ಕಲಾವಿದರ ಆಯ್ಕೆ ಪ್ರಕ್ರಿಯೆ ದಿನಾಂಕ 24-01-2021 ರಂದು ಭಾನುವಾರ ಪಟ್ಟಣದ ರೋಟರ್ ಕ್ಲಬ್ ಸಭಾಭವನದಲ್ಲಿ ನಡೆಯಲಿದೆ.

ಕಲ್ಯಾಣಿ ಪ್ರೊಡಕ್ಷನ್ ಅರ್ಪಿಸುವ “ದಂಡಿ”ಹ್ಯಾಟ್ರಿಕ್ ರಾಜ್ಯ ಪ್ರಶಸ್ತಿ ಹಾಗೂ ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ನಿರ್ದೇಶಕ ವಿಶಾಲ್‍ರಾಜ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ವಿಶಾಲ್‍ರಾಜ್ ಡಿ.ಎಫ್‍ಎ ನಿರ್ದೇಶಕಿ ಎಸ್.ಸಿ.ಉಷಾರಾಣಿ ನಿರ್ಮಾಕರಾಗಿದ್ದಾರೆ. ಸಿನೆಮಾದ ಪಾತ್ರಗಳಿಗೆ ಉತ್ತರಕನ್ನಡ ಜಿಲ್ಲೆಯ ಕಲಾವಿದರ ಆಯ್ಕೆಗೆ ಭಾನುವಾರ 10 ಗಂಟೆಯಿಂದ ನಡೆಯಲಿದ್ದು ಕಲಾವಿದರಿಗೆ ಯಾವುದೇ ವಯೋಮಿತಿ ಇರುವುದಿಲ್ಲ ಮತ್ತು ಕಲಾಪ್ರದರ್ಶನಕ್ಕೆ 2 ನಿಮಿಷಗಳ ಕಾಲಾವಕಾಶವನ್ನು ಮಾತ್ರ ನೀಡಲಾಗುವುದು ಎಂದು ರಂಗಭೂಮಿ ಕಲಾವಿದ ದಾಮೋದರ ನಾಯ್ಕ ಅವರು ತಿಳಿಸಿದ್ದಾರೆ. (9141257089)
Leave a Comment