ಭಟ್ಕಳ: ಕೊನೆಗೂ ಭಟ್ಕಳ ಮಿನಿ ವಿಧಾನಸೌಧ ಉದ್ಘಾಟನೆಗೆ ಕಾಲ ಕೂಡಿ ಬಂದಿದ್ದು, ಜ.25ರಂದು ಕಂದಾಯ ಸಚಿವ ಸಚಿವ ಅಶೋಕ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.
ವಿನಿ ವಿಧಾನ ಸೌಧ ಉದ್ಘಾಟನೆಗೆ ಸಂಬಂಧಿಸಿದಂತೆ ಶಾಸಕ ಸುನಿಲ್ ನಾಯ್ಕ ಭಟ್ಕಳ ಸಹಾಯಕ ಆಯುಕ್ತ ಭರತ್, ತಹಸೀಲ್ದಾರ ಎಸ್.ರವಿಚಂದ್ರ ಮತ್ತಿತರ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಸರಿಸುಮಾರು 13.15ಕೋ. ರುಪಾಯಿ ವೆಚದ ಈ ಬೃಹತ್ ಭಟ್ಕಳ ಮಿನಿ ವಿಧಾನಸೌಧ ನಿರ್ಮಾಣ ಯೋಜನೆಯನ್ನು ಈ. ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳು ಹಾಗೂ ಮಂಕಾಳು ವೈದ್ಯ ಭಟ್ಕಳದ ಶಾಸಕರಾಗಿದ್ದ ಕಾಲದಲ್ಲಿಯೇ ಕೈಗೆತ್ತಿಕೊಳ್ಳಲಾಗಿದ್ದು, ಕೊರೊನಾ ತಡೆ ಲಾಕ್ಡೌನ್ ಮತ್ತಿತರ ಕಾರಣಗಳಿಂದಾಗಿ ಕಾಮಗಾರಿ ಕುಂಟುತ್ತ ಸಾಗಿ ಕಾಮಗಾರಿ ಪೂರ್ಣಗೊಳ್ಳುವುದು ಯಾವಾಗ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಉದ್ಭವವಾಗಿತ್ತು. ಪೀಠೋಪಕರಣಗಳ ಹೊರತಾಗಿಉಳಿದೆಲ್ಲ ಕೆಲಸ ಕಾರ್ಯಗಳು ಪೂರ್ಣವಾಗಿದ್ದು, ಅಂತಿಮವಾಗಿ ಕಟ್ಟಡ ಉದ್ಘಾಟನೆಗೆ ಮುಹೂರ್ತ ನಿಗದಿಯಾಗಿದೆ. ಭಟ್ಕಳದಲ್ಲಿ ಅಭಿವೃದ್ಧಿ ಕಾಂರ್ಯಕ್ಕೆ ಮೊದಲ ಆದ್ಯತೆಯನ್ನು ನೀಡಲಾಗಿದೆ. ಅಭಿವೃದ್ಧಿಯ ವಿಷಯದಲ್ಲಿ ಯಾವುದೇ ರೀತಿಯ ರಾಜಕಾರಣವನ್ನು ನಾನು ಒಪ್ಪುವುದಿಲ್ಲ ಮೀನಿ ವಿಧಾನಸೌಧ ಕಟ್ಟಡಕ್ಕೆ ಬೇಕಾದ ಪೀಠ ಪಕರಣಗಳನ್ನು ಒದಗಿಸಲು ಪ್ರಯತ್ನ ನಡೆದಿದೆ ಎಂದು ಶಾಸಕ ಸುನಿಲ್ ನಾಯ್ಕ ತಿಳಿಸಿದ್ದಾರೆ.
Leave a Comment