ಭಟ್ಕಳ: ತಾಲೂಕ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ತಾಲೂಕ ಆಸ್ಪತ್ರೆಯ ಆಡಳಿತಾಧಿಕಾರಿ ಸವಿತಾ ಕಾಮತ ಅವರು ವರದಿ ಮಂಡಿಸುವ ಸಂದರ್ಬದಲ್ಲಿ ಪಂಚಾಯತ್ ಸದಸ್ಯರಿಗೆ ಸಾರ್ವಜನಿಕರೆಂದರೆ ಯಾರು ಎಂಬ ಪ್ರಶ್ನೆಮಾಡಿ ಸದಸ್ಯರ ಕೆಂಗಣ್ಣಿಗೆ ಗುರಿಯಾದ ಪ್ರಸಂಗ ನಡೆದಿರುತ್ತದೆ.

ಗುರುವಾರ ತಾಲೂಕ ಪಂಚಾಯತ್ ಸಭಾಭವನದಲ್ಲಿ ಸಾಮಾನ್ಯ ಸಭೆ ನಡೆದಿದ್ದು ತಾಲೂಕಿನ ವಿವಿದ ಇಲಾಖಾ ಅಧಿಕಾರಿಗಳು ತಮ್ಮ ತಮ್ಮ ಇಲಾಖಾ ವರದಿಯನ್ನು ಮಂಡಿಸಿದರು ಈ ಸಂದರ್ಬದಲ್ಲಿ ತಾಲೂಕ ಆಸ್ಪತ್ರೆಯ ವೈದ್ಯಾಧಿಕಾರಿ ಸವಿತಾ ಕಾಮತ್ ಆಸ್ಪತ್ರೆಯ ವರದಿ ಮಂಡಿಸುವ ಸಂದರ್ಬದಲ್ಲಿ ತಾಲೂಕ ಪಂಚಾಯತ್ ಸದಸ್ಯ ವಿಷ್ಣು ದೇವಾಡಿಗ ಅವರು ತಾಲೂಕ ಆಸ್ಪತ್ರೆಯ ಆಂಬ್ಯುಲೆನ್ಸ ಚಾಲಕ ಮಂಜುನಾಥ ಅವರನ್ನು ಕೆಲಸದಿಂದ ತೆಗೆದು ಹಾಕಿರುವುದು ಬೆಳಕಿಗೆ ಬಂದಿರುತ್ತದೆ ಯಾವ ಕಾರಣಕ್ಕೆ ಮಂಜುನಾಥ ಅವರನ್ನು ಕೆಲಸದಿಂದ ತೆಗೆದು ಹಾಕಿದ್ದಿರಾ ಎಂದು ಪ್ರಶ್ನಿಸಿದರು ಇದಕ್ಕೆ ಉತ್ತರಿಸಿ ಸವಿತಾ ಕಾಮತ್ ನಮ್ಮ ಆಸ್ಪತ್ರೆಯಿಂದ ಅವರನ್ನು ನಾವು ಕೆಲಸದಿಂದ ತೆಗೆದಿರುವುದಿಲ್ಲಾ ಅವರು ಸ್ಕೈಲೈನ್ ಎಂಟರ್ ಪ್ರ್ಯಸಸ್ ಎಂಬ ಅಂಕೋಲಾದ ಸಂಸ್ಥೆಯ ಮುಖಾಂತರ ಗುತ್ತಿಗೆ ಆದಾರದಲ್ಲಿ ನಮ್ಮ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಆ ಸಂಸ್ಥೆಯೆ ಅವರನ್ನು ಕೆಲಸದಿಂದ ತೆಗೆದಿರುತ್ತದೆ .
ನಾವು ಕೆಲಸದಿಂದ ತೆಗೆದಿರುವುದಿಲ್ಲಾ ಎಂದು ಹೇಳಿದರು ಆದರೆ ವಿಷ್ಣು ದೇವಾಡಿಗ ಅವರು ಈ ಬಗ್ಗೆ ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ ಹಾಗು ಕಾರಣವನ್ನು ಕೇಳುತ್ತಿದ್ದಾರೆ ಎಂದು ಹೇಳಿದರು ಇದಕ್ಕೆ ತಾಲೂಕ ಆಸ್ಪತ್ರೆಯ ಸವಿತಾ ಕಾಮತ್ ಯಾವ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ ಎಂಬ ಉದ್ದಟನದ ಪ್ರಶ್ನೆಯನ್ನು ಕೇಳಿದ್ದು ಇದರಿಂದ ಆಕ್ರೋಶಿತರಾದ ಪಂಚಾಯತ್ ಸದಸ್ಯರಾದ ಪಾಶ್ವನಾಥ ಜೈನ್ ಒಳಗೊಂಡಂತೆ ಎಲ್ಲಾ ಪಂಚಾಯತ್ ಸದಸ್ಯರು ಈ ಉದ್ದಟತನಕ್ಕೆ ಸ್ಪಷ್ಟಿಕರಣವನ್ನು ನೀಡಲು ಪಟ್ಟುಹಿಡಿದರು ಸವಿತಾ ಕಾಮತ್ ತನ್ನ ಮಾತಿನ ಬಗ್ಗೆ ಸಮಜಾಯಿಸಿ ನಿಡಲು ಮುಂದಾಗಿದ್ದರು ಕೂಡ ಪಂಚಾಯತ್ ಸದಸ್ಯರು ಇಂತಹ ವರ್ತನೆ ಮರುಕಳಿಸ ಬಾರದು ಎಂದು ಎಚ್ಚರಿಸಿ ಕಳಿಸಿರುತ್ತಾರೆ .
ಇನ್ನು ಸಭೆಯಲ್ಲಿ ಪಶು ವೈಧ್ಯಾಧಿಕಾರಿ ವಿವೇಕಾನಂದ ಹೆಬ್ಬಾರ್ ತಮ್ಮ ಇಲಾಖಾ ವರದಿಯನ್ನು ಮಂಡಿಸುವ ಸಂದರ್ಬದಲ್ಲಿ ಪಂಚಾಯತ್ ಸದಸ್ಯೆ ಜಯಲಕ್ಷ್ಮಿ ಗೊಂಡ ಸರಕಾರ ಇತ್ತಿಚೆಗೆ ಪಶು ಸಂರಕ್ಷಣಾ ಕಾನೂನು ಅಂದರೆ ಗೋಹತ್ಯಾ ನಿಷೇದ ಕಾಯ್ದೆ ಜಾರಿಗೆ ತಂದಿರುತ್ತದೆ ಈ ಹಿನ್ನೆಲೆಯಲ್ಲಿ ರೈತರು ತಮ್ಮ ಪಶುಗಳನ್ನು ಹಾಲಿಗಾಗಿ ಇತರ ಕಾರಣಕ್ಕಾ ಸಾಗಣೆ ಮಾಡುವ ಸಂದರ್ಬದಲ್ಲಿ ರೈತರಿಗೆ ತೊಂದರೆಯಾಗಬಾರದು ಎಂದು ಹೇಳಿದರು ಈ ಬಗ್ಗೆ ಪಶು ವೈಧ್ಯಾಧಿಕಾರಿ ವಿವೇಕಾನಂದ ಹೆಬ್ಬಾರ್ ಪ್ರತಿಕ್ರಿಯಿಸಿ ನಾವು ರೈತರಿಗೆ ತಮ್ಮಗೋವುಗಳನ್ನು ಸಾಗಿಸುವ ಸಂದರ್ಬದಲ್ಲಿ ಅವರು ನಮ್ಮನ್ನು ಸಂಪರ್ಕಿಸ ಬೇಕು ಆ ಸಂದರ್ಬದಲ್ಲಿ ನಾವು ಅವರಿಗೆ ಪ್ರಮಾಣಪತ್ರವನ್ನು ನಿಡುತ್ತೆವೆ ಇಂತಹ ಪ್ರಮಾಣ ಪತ್ರ ಹೊಂದಿರುವ ಯಾವ ರೈತರಿಗೂ ಯಾವುದೆ ಸಮಸ್ಯೆ ಇರುವುದಿಲ್ಲಾ ಎಂದು ಹೇಳಿದರು.
Leave a Comment