• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಇಂದಿನಿಂದ ಐದು ದಿನ ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ಜಾತ್ರೆ ಆರಂಭ’ಕೋವಿಡ್ ಮಾರ್ಗಸೂಚಿಯಂತೆ ಭಕ್ತರಿಗೆ ದೇವರ ದರ್ಶನಕ್ಕೆ ವ್ಯವಸ್ಥೆ’

January 23, 2021 by bkl news Leave a Comment

ಭಟ್ಕಳ: ಕಳೆದ ಬಾರಿ ಜನಸಾಗರದ ನಡುವೆ ವಿಜೃಂಭನೆಯಿಂದ ನಡೆದಿದ್ದ ರಾಜ್ಯದಲ್ಲಿಯೇ ಸುಪ್ರಸಿದ್ದ ಶಕ್ತಿ ಸ್ಥಳವಾದ ಸೋಡಿಗದ್ದೆ ಶ್ರೀ ಮಹಾಸತಿ ದೇವರ ವರ್ಷದ ಜಾತ್ರೋತ್ಸವವೂ ಈ ಈ ವರ್ಷ ಕೋವಿಡ್ ಮಾರ್ಗಸೂಚಿಯಂತೆ ನಾಳೆಯಿಂದ ಐದು ದಿನಗಳ ಕಾಲ ನಡೆಯಲಿದ್ದು, ಈಗಾಗಲೇ ಬರುವಂತಹ ಭಕ್ತರಿಗೆ ಎಲ್ಲಾ ವ್ಯವಸ್ಥೆ ಸಹಿತ ಧಾರ್ಮಿಕ ಕಾರ್ಯಕ್ರಮಕ್ಕೆ ತಯಾರಿಗಳು ನಡೆಯುತ್ತಿವೆ.  

IMG 20210123 WA0027


ದಕ್ಷಿಣೋತ್ತರ ಜಿಲ್ಲೆಯ ಅತ್ಯಂತ ದೊಡ್ಡ ಜಾತ್ರೆಯಾಗಿರುವ ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ಜಾತ್ರೆಯಲ್ಲಿ ಊರ ಹಾಗೂ ಪರ ಊರಿನ ಭಕ್ತರು ಬಂದು ಪ್ರತಿ ವರ್ಷದಂದು ಈ ಸಂಧರ್ಭದಲ್ಲಿ ವಿವಿಧ ರೂಪದಲ್ಲಿ ಹರಕೆ ತಿರಿಸುವುದು ರೂಢಿಯಲ್ಲಿದೆ. ಈ ಬಾರಿಯ ಜಾತ್ರೆಯಲ್ಲಿ ಕೋವಿಡ್ ಕರಿನೆರಳಿನ ಮಧ್ಯೆಯೇ ಜಾತ್ರಾ ಸಂಭ್ರಮವೂ ಮೆರಗು ನೀಡಿದೆ. ಈಗಾಗಲೇ ದೇವಸ್ಥಾನದಲ್ಲಿ ನಾಳೆಯಿಂದ ನಡೆಯಲಿರುವ ಜಾತ್ರೆಗೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ವಿಶೇಷವಾಗಿ ದೇವಸ್ಥಾನದ ಪ್ರಾಂಗಣವನ್ನು ವಿವಿಧ ಬಗೆಯ ಹೂವಿನಿಂದ ಅಲಂಕೃತಗೊಳಿಸಲಾಯಿತು. 

ಜಾತ್ರೆಯೂ ನಾಳೆಯಿಂದ ಅಂದರೆ ಜನವರಿ ತಿಂಗಳಿನಲ್ಲಿ 23ರಂದು ಆರಂಭವಾಗುವ ಜಾತ್ರೆಯಲ್ಲಿ ಮೊದಲ ದಿನ ಹಾಲ ಹಬ್ಬ, ಜನವರಿ 24 ರಂದು ಎರಡನೇ ದಿನ ಕೆಂಡ ಸೇವೆ ಹಾಗೂ ನಂತರದ ದಿನಗಳಲ್ಲಿ ತುಲಾಭಾರ ಸೇವೆಯು ಅತ್ಯಂತ ವಿಶೇಷವಾಗಿದೆ. ಸೋಡಿಗದ್ದೆ ಶ್ರೀ ಮಹಾಸತಿ ದೇವಿಯೂ ಅಸಂಖ್ಯಾತ ಭಕ್ತರನ್ನು ಹೊಂದಿದ್ದು, ಜಾತ್ರೆಯಲ್ಲಿ ದೇವರಿಗೆ ಗೊಂಬೆಗಳನ್ನು ಅರ್ಪಿಸುವುದು ಪ್ರಮುಖ ಹರಕೆಗಳಲ್ಲಿ ಒಂದು. ಗೊಂಬೆಗಳಲ್ಲಿಯೂ ಕೂಡಾ ಮೂರು ಗಾತ್ರದ ಗೊಂಬೆಗಳನ್ನು ಅರ್ಪಿಸಲಾಗುತ್ತಿದ್ದು ಭಕ್ತರು ತಮ್ಮ ತಮ್ಮ ಶಕ್ತ್ಯಾನುಸಾರ ಹರಕೆಯ ಗೊಂಬೆಗಳನ್ನು ನೀಡುತ್ತಾರೆ.

IMG 20210123 WA0031

ಗೊಂಬೆಗಳಲ್ಲಿ ಮಹಾಸತಿ, ಜಟ್ಟಿಗರಾಯ, ಮರದ ಹುಲಿರಾಯ, ನಾಗರಕಲ್ಲು, ಹಾಯ್ ಗೂಳಿ ಗೊಂಬೆಗಳನ್ನು ಹರಕೆಯ ರೂಪದಲ್ಲಿ ಸಲ್ಲಿಸಲಾಗುತ್ತಿದೆ. ಗೊಂಬೆಗಳ ಹರಕೆ ಒಂದು ವಿಧವಾದರೆ ಕೆಂಡ ಕಾಣಿಕೆ, ತುಲಾಭಾರ, ಬಲಿ ಸಮರ್ಪಣೆ, ಹೂವಿನಪೂಜೆ ಮತ್ತೊಂದು ರೀತಿಯ ಹರಕೆಯಾಗಿದೆ. ಆದರೆ ಇಲ್ಲಿ ಗೊಂಬೆ ಹರಕೆಯೇ ಪ್ರಸಿದ್ದಿಯಾಗಿದ್ದು ಶಕ್ತಾನುಸಾರ ಗೊಂಬೆ ಕಾಣಿಕೆ ನೀಡುವುದು ವಿಶೇಷವಾಗಿದೆ.  ಪ್ರತಿ ನಿತ್ಯ ಭಕ್ತರು ಹೂವಿನ ಪೂಜೆ, ತೊಟ್ಟಿಲು ಸಮರ್ಪಣೆ, ಕಣ್ಣು, ಇತ್ಯಾದಿಗಳನ್ನು ಸಮರ್ಪಿಸಿ ತಮ್ಮ ಹರಕೆಯನ್ನು ತೀರಿಸುತ್ತಾರೆ. ಕಷ್ಟದಲ್ಲಿದ್ದಾಗ ಹರಿಕೆ ಹೇಳಿಕೊಂಡು ಅವುಗಳನ್ನು ಜಾತ್ರೆಯ ಸಂದರ್ಭದಲ್ಲಿ ತೀರಿಸುವುದರಿಂದ ದೇವಿ ಸಂತುಷ್ಟಳಾಗಿ ತಮ್ಮ ಹರಿಕೆ ಒಪ್ಪಿಕೊಳ್ಳುತ್ತಾಳೆನ್ನುವದು ಭಕ್ತರ ನಂಬಿಕೆಯಾಗಿದೆ.  

IMG 20210123 WA0028

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Bhatkal News, Canara News Tagged With: ಕೋವಿಡ್ ಮಾರ್ಗಸೂಚಿಯಂತೆ, ಜಟ್ಟಿಗರಾಯ, ದಕ್ಷಿಣೋತ್ತರ ಜಿಲ್ಲೆಯ ಅತ್ಯಂತ ದೊಡ್ಡ ಜಾತ್ರೆ, ನಾಗರಕಲ್ಲು, ಪರ ಊರಿನ ಭಕ್ತರು, ಮರದ ಹುಲಿರಾಯ, ಮಹಾಸತಿ

Explore More:

About bkl news

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,062 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...