ಹಳಿಯಾಳ: ಹಳಿಯಾಳ ಪುರಸಭೆ ಸದಸ್ಯರು ಕೈ ಬಾಯಿ ಸ್ವಚ್ಚ ಇಟ್ಟುಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಇಲ್ಲವೇ ಪದೆ ಪದೆ ತಪ್ಪು ಮಾಡಿದರೇ ಯಾವುದೇ ಮುಲಾಜಿಲ್ಲದೇ ಅಂತಹವರನ್ನು ಪಕ್ಷದಿಂದ ಹೊರ ಹಾಕುತ್ತೇನೆ ಎಂದು ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಹಳಿಯಾಳ ಪಟ್ಟಣದ ಬಸವ ನಗರದಲ್ಲಿ 2017-18ನೇ ಸಾಲಿನ ಪುರಸಭೆಯ ವಿಶೇಷ ಅನುದಾನದಡಿಯಲ್ಲಿ 1 ಕೊಟಿ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ 8 ಸುಸಜ್ಜಿತ ನೂತನ ವಸತಿಗೃಹಗಳ ಉಧ್ಘಾಟನೆ ನೆರವೆರಿಸಿ ದೇಶಪಾಂಡೆ ಮಾತನಾಡಿದರು.
ಹಳಿಯಾಳ ಪುರಸಭೆಯ ಅಧಿಕಾರಿ, ಸಿಬ್ಬಂದಿಗಳಿಗಾಗಿ ನಿರ್ಮಿಸಲಾದ ವಸತಿ ಗೃಹಗಳ ಉಧ್ಘಾಟನೆ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಪುರಸಭಾ ಸದಸ್ಯರ ವಿರುದ್ದ ಸ್ಥಳೀಯ ಶಾಸಕ ಆರ್ ವಿ ದೇಶಪಾಂಡೆ ಅವರು ಕಿಡಿ ಕಾರಿ ತರಾಟೆಗೆ ತೆಗೆದುಕೊಂಡ ವಿದ್ಯಮಾನ ನಡೆಯಿತು.

ಪುರಸಭಾ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಶಾಸಕರು ಪುರಸಭೆ ಸದಸ್ಯರಾದವರು ಸಾಮಾಜಿಕ ಹೊಣೆಗಾರಿಕೆ ಉಳ್ಳವರಾಗಿದ್ದು ಜನರೊಂದಿಗೆ ಪ್ರಿತಿ-ಮಮಕಾರ, ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ಎಲ್ಲವೂ ದುಡ್ಡಿನಿಂದಲೇ ಮಾಡುವುದಲ್ಲ ಕೈ ಬಾಯಿ ಸ್ವಚ್ಚ ಇಟ್ಟುಕೊಂಡು ಕೆಲಸ ಮಾಡಬೇಕು. ಹಲವು ಪುರಸಭಾ ಸದಸ್ಯರು ಜನರ ಕೆಲಸಕ್ಕಾಗಿ ದುಡ್ಡು ಪಡೆದಿದ್ದು ಹಾಗೂ ಹಣಕ್ಕೆ ಬೇಡಿಕೆ ಇಡುತ್ತಿರುವ ಬಗ್ಗೆ ತಮ್ಮ ಬಳಿ ದೂರುಗಳು ಬಂದಿದ್ದು ಮುಂದಿನ ದಿನಗಳಲ್ಲಿ ಆ ಬಗ್ಗೆ ಸಭೆ ಕರೆದು ಚರ್ಚಿಸುತ್ತೇನೆ. ಹೀಗೆಯೆ ಮುಂದುವರೆದರೇ ಅಂತಹ ಸದಸ್ಯರ ಮೇಲೆ ಕ್ರಮ ಕೈಗೊಳ್ಳುವುದು ಅಲ್ಲದೇ ಅವರನ್ನು ಪಕ್ಷದಿಂದ ಹೊರ ಹಾಕುವುದಾಗಿ ಖಡಕ್ ಎಚ್ಚರಿಕೆ ನೀಡಿದರು ಶಾಸಕ ದೇಶಪಾಂಡೆ.
ವಸತಿ ಗೃಹಗಳನ್ನು ವಿಕ್ಷಿಸುತ್ತಿರುವಾಗ ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ ಹಾಗೂ ಇಂಜೀನಿಯರ್ ಹರೀಶ ಗೌಡ ಅವರನ್ನು ತರಾಟೆಗೆ ತೆಗೆದುಕೊಂಡ ಶಾಸಕರು ತಮ್ಮ ಮೇಲೆ ಸಾಕಷ್ಟು ದೂರುಗಳು ಬರುತ್ತಿವೆ ಸರಿಯಾಗಿ ಕಾರ್ಯ ನಿರ್ವಹಿಸಿ, ನೂತನ ವಸತಿ ಗೃಹಗಳು ಸರಿಯಾಗಿ ಹಂಚಿಕೆಯಾಗಬೇಕು ಏನಾದರೂ ಸಮಸ್ಯೆ ಕಂಡು ಬಂದಲ್ಲಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಅಜರುದ್ದೀನ್ ಬಸರಿಕಟ್ಟಿ, ಉಪಾಧ್ಯಕ್ಷೆ ಸುವರ್ಣಾ ಮಾದರ, ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ ಚವ್ವಾಣ, ಜಿಪಂ ಉಪಾಧ್ಯಕ್ಷ ಸಂತೋಷ ರೆಣಕೆ, ಸದಸ್ಯ ಕೃಷ್ಣಾ ಪಾಟೀಲ್, ಪುರಸಭೆಯ ಸದಸ್ಯರು, ಪುರಸಭೆ ಅಧಿಕಾರಿ, ಸಿಬ್ಬಂದಿ ವರ್ಗದವರು ಇತರರು ಇದ್ದರು.
Leave a Comment