ಭಟ್ಕಳ: ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ಸೃಷ್ಟಿಸಿ ತನ್ನ ಹಾಗೂ ಪಕ್ಷದ ತೆಜೋವಧೆಗೆ ಸಂಚು ನಡೆಸಿದ್ದಾರೆ ಎಂದು ಮಾಜಿ ಶಾಸಕ ಮಂಕಾಳ ವೈದ್ಯ ರಾತ್ರಿ ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ನಲ್ಲಿ ಕಾಂಗ್ರೆಸ್ ಅಭಿಮಾನಿ ಬಳಗ ಹಾಗೂ, ವ್ಯಾಟ್ಸ್ ಆಫ್ ಗ್ರೂಪ್ ಗಳಾದ ನಮ್ಮ ಸ್ನೇಹಿತರು, ಬಿಜೆಪಿ ಉತ್ತರ ಕನ್ನಡ , ಪ್ರಾಣಿ ಪ್ರಿಯ ಎನ್ನುವ ಖಾತೆಗಳನ್ನು ತೆರದು ತೇಜೋವಧೆಗೆ ಕಾರಣರಾಗಿದ್ದಾರೆ. ಅದೇ ರೀತಿಗ್ರಾ.ಪಂ ಚುನಾವಣೆ ನಡೆಯುವ ಸಂದರ್ಬದಲ್ಲಿ ಕಾಂಗ್ರೆಸ್ ಅಭಿಮಾನ ಬಳಗ (ಹಿಂದೆ ಶಿಕ್ಷಣ ಪ್ರೇಮಿ ಮಂಕಾಳ ವೈದ್ಯ ಎಂದಿತ್ತು) ಎನ್ನುವ ಹೆಸರಿನಲ್ಲಿ ಮುಸ್ಲಿಂ ಅಭ್ಯರ್ಥಿಗಳು ಮಂಕಾಳ ವೈದ್ಯರ ಕಾಲಿಗೆ ಬಿದ್ದು, ಮುಸ್ಲಿಂ ಹಿಂದು ಹುಲಿ ತಾನು, ನಿಮಗೆ ತಾಕತ್ ಇದ್ದರೆ ಹಿಂದು ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಕೋಮು ಭಾವನೆ ಕದಡಿ ಕಾಂಗ್ರೆಸ್ ಪರ ಅಭ್ಯರ್ಥಿಗಳಿಗೆ ಹಿನ್ನಡೆ ಉಂಟಾಗುವ ಹಾಗೆ ಮಾಡಿದ್ದಾರೆ.ಡಿ.24ರಂದು ಸರ್ಕಾರ ನೈಟ್ ಕರ್ಪ್ಯೂ ವಿಧಿಸಿದಾಗ ಬ್ಯಾಲೆಟ್ ಬಾಕ್ಷ ಬದಲಾಯಿಸೊಕೆ ಈ ನೈಟ್ ಕರ್ಪ್ಯೂ ಎಂದು ಪೊಲೀಸರನ್ನು ಅವಹೇಳನ ಮಾಡಲಾಗಿದೆ.
ಹಾಗೂ ಅದೇ ರೀತಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ,ಮುಖಂಡರು ರಾಮಮಂದಿರ ನಿರ್ಮಾಣ ನಿಧಿ ಸಮರ್ಪಣೆ ಭಾಗವಹಿಸಬಾರುದು.ಭಾಗವಹಿಸಿದಲ್ಲಿ ಅಂತವರನ್ನು ಪಕ್ಷದಿಂದ ಉಚ್ಚಾಟಿಸಲಾಗುವು ಎಂದು ಬರೆಯುವ ಮೂಲಕ ಮಾಜಿ ಶಾಸಕ ಮಂಕಾಳು ವೈದ್ಯ ಹಾಗೂ ಕಾಂಗ್ರೆಸ್ ನಾಯಕರ ಫೋಟೋ ಹಾಕಿದ್ದ ಭಟ್ಕಳದ ಕಾಂಗ್ರೆಸ್ ಅಭಿಮಾನಿ ಬಳಗದಿಂದ ಫೋಸ್ಟ್ ಮಾಡಲಾಗಿತ್ತು .ಕಾಂಗ್ರೆಸ್ ಅಭಿಮಾನಿ ಬಳಕ ಫೇಸ್ ಬುಕ್ ಖಾತೆ,ನಮ್ಮ ಸ್ನೇಹಿತರು ವಾಟ್ಸ್ ಅಪ್ ಗ್ರೂಪ್,ಬಿಜೆಪಿ ಉತ್ತರ ಕನ್ನಡ ವಾಟ್ಸ್ ಅಪ್ ಗ್ರೂಪ್,ಪ್ರಾಣಿಪ್ರಿಯ ವಾಟ್ಸ್ ಅಪ್ ಗ್ರೂಪ್ ವಿರುದ್ಧ ದೂರು ದಾಖಲಾಗಿದೆ.
Leave a Comment