ಹಳಿಯಾಳ:- ಹಳಿಯಾಳದ ಮುಗ್ದ ಜನತೆಯ, ಸಂಘ-ಸಂಸ್ಥೆಗಳ ಸಹಾಯ ಸಹಕಾರದಿಂದ ಹಳಿಯಾಳದಲ್ಲಿ ಉತ್ತಮ ಸೇವೆ ಸಲ್ಲಿಸಲು ಸಹಕಾರಿಯಾಗಿದೆ. ತಾವು ಎಲ್ಲೆ ಹೊದರು ಹಳಿಯಾಳಿಗರನ್ನು ಮರೆಯಲು ಸಾಧ್ಯವಿಲ್ಲ. ಮತ್ತೊಮ್ಮೆ ಅವಕಾಶ ಸಿಕ್ಕರೆ ಹಳಿಯಾಳ ಕ್ಷೇತ್ರಕ್ಕೆ ಬಂದು ಸೇವೆ ಸಲ್ಲಿಸುವೇ ಎಂದು ಪಿಎಸ್ ಐ ಯಲ್ಲಾಲಿಂಗ್ ಕುನ್ನೂರ ಅವರು ಹೇಳಿದರು.
ಹಳಿಯಾಳ ಪೋಲಿಸ್ ಠಾಣೆಯಲ್ಲಿ ಒಂದು ವರ್ಷಗಳ ಕಾಲ ಅಲ್ಪ ಅವಧಿಯಲ್ಲಿ ತಮ್ಮ ಅಮೋಘ ಸೇವೆಯ ಮೂಲಕ ದಕ್ಷ ಮತ್ತು ಖಡಕ್ ಅಧಿಕಾರಿ ಎಂದು ಹೇಸರಾಗಿದ್ದ ಯಲ್ಲಾಲಿಂಗ್ ಕುನ್ನೂರ್ ಅವರು
ಬೆಂಗಳೂರು ನಗರಕ್ಕೆ ವರ್ಗಾವಣೆ ಆಗಿರುವುದರಿಂದ ಭಾನುವಾರ ಹಳಿಯಾಳ ಪೋಲಿಸ್ ಠಾಣೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರನ್ನು ಹೃದಯಸ್ಪರ್ಶಿಯಾಗಿ ಬಿಳ್ಕೋಡಲಾಯಿತು.
ಹಳಿಯಾಳ ಪೋಲಿಸ್ ಠಾಣೆಯಿಂದ ಮತ್ತು ಪಟ್ಟಣದ ಹಲವು ಸಂಘ-ಸಂಸ್ಥೆಯವರು, ಜನಪ್ರತಿನಿಧಿಗಳು ಅವರನ್ನು ಸನ್ಮಾನಿಸಿ ಗೌರವಿಸಿ ಅವರ ಸೇವೆಯನ್ನು ಶ್ಲಾಘಿಸಿ ಬಿಳ್ಕೊಟ್ಟರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಹಳಿಯಾಳ ಪೋಲಿಸ್ ಠಾಣೆಯ ಸಿಬ್ಭಂದಿಗಳು ಮತ್ತು ಹಿರಿಯ ಪೋಲಿಸ್ ಅಧಿಕಾರಿಗಳ ಸಹಕಾರವನ್ನು ಸ್ಮರಿಸಿದರು. ಹಳಿಯಾಳ ಎರಡು ವರ್ಷಗಳ ಕಾಲ ಉತ್ತಮ ಸೇವೆ ನೀಡಬೇಕು ಸೇರಿದಂತೆ ಹಲವು ಕನಸುಗಳು ಇದ್ದವು ಆದರೇ ಇಲಾಖೆಯು ಒಂದು ವರ್ಷಕ್ಕೆ ತಮ್ಮನ್ನು ವರ್ಗಾವಣೆ ಮಾಡಿದೆ ಆದರೇ ಮುಂದಿನ ದಿನಗಳಲ್ಲಿ ಮತ್ತೇ ಈ ಕ್ಷೇತ್ರಕ್ಕೆ ಬಂದು ಸೇವೆ ಸಲ್ಲಿಸುವೇ ಎಂದರು.
ದಾಂಡೇಲಿ ಡಿವೈಎಸ್ಪಿ ಕೆಎಲ್ ಗಣೇಶ್ ಅವರು ಮಾತನಾಡಿ ಹಳಿಯಾಳ ಉತ್ತಮ ವಾತಾವರಣವಿರುವ ಪಟ್ಟಣವಾಗಿದೆ. ಇಲ್ಲಿ ಜನರಿಂದ ಪ್ರಶಂಸನೆಗೆ ಒಳಗಾದ ಅಧಿಕಾರಿ ಯಲ್ಲಾಲಿಂಗ್ ಅವರು ಮುಂದೆ ಕರ್ತವ್ಯದಲ್ಲಿ ಇನ್ನೂ ಹೆಚ್ಚಿನ ಪ್ರಶಂಸೆ, ಪ್ರಶಸ್ತಿ ಪಡೆದು ಭಡ್ತಿ ಪಡೆಯಲಿ ಎಂದು ಆಶಿಸಿದರು.
ಹಳಿಯಾಳ ಠಾಣೆಯ ಸಿಪಿಐ ಮೋತಿಲಾಲ್ ಪವಾರ್ ಮಾತನಾಡಿ ಉತ್ತಮ ಕಾರ್ಯ ನಿರ್ವಹಿಸುವ ವಿಶೇಷ ಕಲೆ ಯಲ್ಲಾಲಿಂಗ್ ಅವರಲ್ಲಿದ್ದು ಅವರ ಕಾರ್ಯವೈಖರಿ ನಿಜಕ್ಕೂ ಅಭಿನಂದನಾರ್ಹವಾಗಿದೆ. ಅವರು ಮುಂದಿನ ದಿನಗಳಲ್ಲಿ ಭಡ್ತಿ ಪಡೆದು ದೊಡ್ಡ ಮಟ್ಟದ ಅಧಿಕಾರಿ ಆಗಲಿ ಮತ್ತು ಬೆಂಗಳೂರು ನಗರದಲ್ಲಿ ಉತ್ತಮ ಕಾರ್ಯ ನಿರ್ವಹಿಸಿ ಹೆಸರು ಮಾಡಲಿ ಎಂದು ಹಾರೈಸಿದರು.
ದಲಿತ ಸಂಘಟನೆಯ ಮುಖಂಡ ಹನುಮಂತ ಹರಿಜನ, ಪೊಮನ್ನ ದಾನಪ್ಪನವರ, ಪತ್ರಕರ್ತ ಯೋಗರಾಜ ಎಸ್.ಕೆ, ಎಎಸ್ಐ ಸುರೇಶ ಮುಳೆ, ಪೋಲಿಸ್ ಸಿಬ್ಬಂದಿಗಳಾದ ಮಂಜುನಾಥ ಲಮಾಣಿ, ಗೀತಾ ರಾಥೋಡ, ಗೃಹ ರಕ್ಷಕ ಸಿಬ್ಬಂದಿ ಕಲ್ಲಪ್ಪಾ ಕದಂ ಇತರರು ಮಾತನಾಡಿ ಪಿಎಸ್ಐ ಯಲ್ಲಾಲಿಂಗ್ ಅವರು ಜನಸ್ನೇಹಿ ಆಗಿದ್ದು ಎಲ್ಲರ ಸಮಸ್ಯೆಗಳನ್ನು ಆಲಿಸುತ್ತಿದ್ದರು. ಮಾನವೀಯ ಗುಳಗಳಿದ್ದ ಅವರು ಹಳಿಯಾಳದಲ್ಲಿ ಇನ್ನೂ ಸೇವೆ ಸಲ್ಲಿಸಬೇಕಾಗಿತ್ತು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕ್ರೈಂ ಪಿಎಸ್ಐ ರಾಜಕುಮಾರ ಉಕ್ಕಲಿ, ಕರ್ನಾಟಕ ರಕ್ಷಣಾ ವೇದಿಕೆ, ದಲಿತ ಸಂಘಟನೆಯವರು, ಜನಪ್ರತಿನಿಧಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದು ಹಲವರು ತಮ್ಮ ಅಭಿಪ್ರಾಯ-ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಪೊಲಿಸ್ ಸಿಬ್ಬಂದಿಗಳಾದ ನಿಂಗಪ್ಪಾ ಕುಂಟಿಮೆಟಿ ಮತ್ತು ದುರ್ಗಪ್ಪಾ ಮೂಲಿಮನಿ ಕಾರ್ಯಕ್ರಮ ನಿರ್ವಹಿಸಿದರು.
Leave a Comment