ಭಟ್ಕಳ : ಯಂಗ್ ಸ್ಟಾರ್ ವೆಲ್ಪೇರ್ ಆರ್ಗನೈಶನ್, ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಹಾಗೂ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಜಂಟಿ ಆಶ್ರಯದಲ್ಲಿ ಭಟ್ಕಳದ ಮೋಹಿದ್ದೀನ್ ಮುನಿರಿ ಹಾಲ್ ನಲ್ಲಿ ರಕ್ತದಾನ ಶಿಬಿರ ನಡೆಯಿತು.
ತಂಜೀಮ್ ಉಪಾಧ್ಯಕ್ಷ ಅತಿಕುರಹಮನ್ ಮುನಿರಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಇದು ಉತ್ತಮ ಕಾರ್ಯವಾಗಿದೆ. ಜಾತಿ, ಧರ್ಮ, ಬೇಧವಿಲ್ಲದೇ ರಕ್ತದಾನ ಮಾಡಿದರೇ ಒಂದು ಜೀವ ಉಳಿಸಲು ಸಹಾಯವಾಗುತ್ತೆ. ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕೆಂದು ಕರೆ ನೀಡಿದರು.ಭಟ್ಕಳ ಮುಸ್ಲಿಂ ಯುಥ್ ಫೆಡರೇಶನ್ ಉಪಾಧ್ಯಕ್ಷ ಸಾಜಿದ್ ಮುಸ್ಬಾ, ಬ್ಲಡ್ ಹೆಲ್ಪ್ ಕೇರ್ ಅಧ್ಯಕ್ಷ ನಜೀರ್ ಹುಸೇನ್ ಉಳ್ಳಾಲ್, ಪಯಾಜ್ ಶೇಖ್ ಬೈಂದೂರು, ನಜೀರ್ ಕಾಶಿಂಜಿ, ಸಮಿವುಲ್ಲಾ ಶೇಖ್, ಡಾ. ವೀರೇಂದ್ರ ಕುಂದಾಪುರ, ಮುಬಾಶ್ಶಿರ್ ಹಲ್ಲಾರೆ, ಸುಹೇಲ್ ಕದ್ದಾರೆ, ಜಹೀರ್ ಶೇಖ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
Leave a Comment