ಭಟ್ಕಳ: ಉತ್ತರಕನ್ನಡ ಜಿಲ್ಲಾ ಪಂಚಾಯತ ಹಾಗೂ ಮಾವಳ್ಳಿ ಗ್ರಾಮ ಪಂಚಾಯ್ತಿಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರುವ ನಮ್ಮ ನಡಿಗೆ ತ್ಯಾಜ್ಯ ಮುಕ್ತ ಕಡೆಗೆ ವಿಶೇಷ ಆಂದೋಲನದ ಅಂಗವಾಗಿ ಮುರುಡೇಶ್ವರ ಕಡಲತೀರದ ಸ್ವಚ್ಛತೆ ನಡೆಸಲಾಯಿತು.
ಸ್ವಚ್ಚತಾ ಅಭಿಯಾನಕ್ಕೆ ಜಿಲ್ಲಾ ಪಂಚಾಯತ ಸಿಇಒ ಪ್ರಿಯಾಂಗ ಎಂ ಮತ್ತು ಜಿ.ಪಂ ಅಧ್ಯಕ್ಷೆ ಜಯಶ್ರೀ ಮೋಗೇರ ಜೊತೆಯಾಗಿ ಚಾಲನೆ ನೀಡಿದರು.
ನಂತರ ಮಾತನಾಡಿದ ಸಿಇಒ ಪ್ರಿಯಾಂಕಾ ಎಂ ಮುರ್ಡೇಶ್ವರ ಪ್ರವಾಸಿ ತಾಣ ಮಾತ್ರವಲ್ಲ ಬಹಳಷ್ಟು ಜನ ಮುರುಡೇಶ್ವರವನ್ನು ದೇವರ ಸ್ಥಳ ಎಂದು ನಂಬಿಕೊಂಡು ಬಂದಿದ್ದಾರೆ. ದೇವರ ಸ್ಥಳ ಕೊಳಕಾದರೆ ಪುಣ್ಯ ಬರುವುದಾದರೂ ಹೇಗೆ, ಇಷ್ಟು ದೊಡ್ಡ ಪ್ರವಾಸಿ ತಾಣದಲ್ಲಿ ಇಲ್ಲಿಯವರೆಗೂ ತ್ಯಾಜ್ಯ ವಿಲೇವಾರಿ ಘಟಕ ಇಲ್ಲದಿರುವುದು ದೊಡ್ಡ ಸಮಸ್ಯೆಯನ್ನು ಸೃಷ್ಟಿಸಿದೆ .ಮುರುಡೇಶ್ವರದಲ್ಲಿ ಅತ್ಯಂತ ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಉದ್ದೇಶಿಸಲಾಗಿದೆ.ಪಂಚಾಯಿತಿ ಸದಸ್ಯರು ಗೋಕರ್ಣ ಉಡುಪಿಗೆ ತೆರಳಿ ಅಲ್ಲಿನ ವ್ಯವಸ್ಥೆಯನ್ನು ಅರಿಯಲು ಪ್ರಯತ್ನಿಸಬೇಕು .ಮುರ್ಡೇಶ್ವರದಲ್ಲಿ ಸ್ವಚ್ಛತೆ ಮತ್ತು ರಸ್ತೆ ನಿರ್ಮಾಣ ಪ್ರಸಕ್ತವಾಗಿ ಸಮಸ್ಯೆಯಾಗಿಯೇ ಉಳಿದಿದ್ದು. ರಸ್ತೆಯನ್ನು ಆದಷ್ಟು ಶೀಘ್ರವಾಗಿ ಮುಗಿಸಿಕೊಡುತ್ತೇನೆ ಸಾರ್ವಜನಿಕರು ಇದಕ್ಕೆ ಸಹಕಾರ ನೀಡಬೇಕು ಎಂದು ಕೋರಿಕೊಂಡರು .
ಬೈಟ್: ಪ್ರಿಯಾಂಕಾ ಎಂ ಜಿ.ಪಂ ಸಿಇಒ
ಇದಕ್ಕೂ ಪೂರ್ವದಲ್ಲಿ ಮುರುಡೇಶ್ವರದ ಕಡಲ ತೀರದ ಸುತ್ತ ಮುತ್ತಲು ಹಾಗೂ ರಸ್ತೆಗಳ ಇಕ್ಕೆಲಗಳಲ್ಲಿ ಸುಮಾರು 100 ಮೀಟರ್ ಗಳವರೆಗೂ ಕಸವನ್ನು ವಿಂಗಡಿಸಿ ಸ್ವಚ್ಛಗೊಳಿಸಲಾಯಿತು.
Leave a Comment