ಜೋಯಿಡಾ -:- ಜೋಯಿಡಾ ತಾಲೂಕಿನ ಕ್ಯಾಸಲರಾಕ ಅರಣ್ಯದ ಕುಣಗಿಣಿ ಕ್ರಾಸ ಬಳಿಯ ಅರಣ್ಯದ ರಸ್ತೆ ಪಕ್ಕದಲ್ಲಿ ಎರಡು ಕೈ ಚೀಲ ಹಾಗೂ ಒಂದು ಒಂದು ಗನ್ ಪತ್ತೆಯಾಗಿದ್ದು ಈ ಬಗ್ಗೆ ಡಿ.ವೈ.ಎಸ್.ಪಿ ಗಣೇಶ ಕೆ.ಎಲ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

ಇಂದು ಮಧ್ಯಾಹ್ನ ೩ ಘಂಟೆ ಸುಮಾರಿಗೆ ಕುಣಗಿಣಿ ಚೆಕ್ ಪೋ ಬಳಿಯ ಅರಣ್ಯ ಕಾವಲುದಾರರು ರಸ್ತೆ ಅಂಚಿನಲ್ಲಿ ಹೋಗುತ್ತಿರುವಾಗ ಎರಡು ಕೈ ಚೀಲಗಳು ಅಲ್ಲೇ ಪಕ್ಕದಲ್ಲಿ ಒಂದು ಗನ ಮತ್ತು ಅದರ ಪೌಚ್ ( ಕವರ) ಕಂಡು ಬಂದಿತ್ತು. ಕೂಡಲೇ ಈ ಬಗ್ಗೆ ಅರಣ್ಯಾಧಿಕಾರಿಗಳು ಪೋಲಿಸ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ ನಂತರ ಸ್ಥಳಕ್ಕೆ ಆಗಮಿಸಿದ ಪೋಲಿಸ ಅಧಿಕಾರಿಗಳು ಸ್ಥಳ ಪರೀಶಿಲನೆ ನಡೆಸಿದಾಗ ಒಂದು ಚೀಲದಲ್ಲಿ ಬಳಸಿದ ಟೀ ಶರ್ಟ,ಬೂಟ, ಇನ್ನೊಂದು ಚೀಲದಲ್ಲಿ ಕೆಲವಷ್ಟು ಹಣ ಇದ್ದಿದ್ದು ಮೇಲ್ನೋಟಕ್ಕೆ ಕಂಡು ಬಂದಿದೆ. ಚೀಲದ ಪಕ್ಕದ ಸ್ವಲ್ಪ ದೂರದಲ್ಲಿ ಕಾಡಿನೊಳಗೆ ಗನ ಬಿದ್ದಿದ್ದು ಅದರ ಪೊಚ್ ಮರ ಟೊಂಗೆಯ ಮೇಲೆ ಸಿಕ್ಕಿಕೊಂಡಿದ್ದು ನೇತಾಡುತ್ತಿದ್ದು ಕಂಡು ಬಂದಿದೆ. ಇದೇ ಸ್ಥಳದಲ್ಲಿ ಕುಡಿದು ಎಸೆದಿರುವ ಬಿಯರ ಬಾಟಲಿಗಳು ,ನೀರಿನ ಬಾಟಲಿಗಳು ಕಂಡು ಬಂದಿದ್ದು.
ಇದು ಯಾರೋ ಎರಡು ಮೂರು ವ್ಯೆಕ್ತಿಗಳು ಮದ್ಯಪಾನ ಮಾಡಿದಂತೆ ಕಂಡು ಬರುತ್ತಿದೆ. ಅಕ್ರಮದ ಶಂಕೆ – ಕ್ಯಾಸಲರಾಕ ಕಾಡಿನ ಮಧ್ಯೆ ಈ ಹಿಂದೆ ಭಯೋತ್ಪಾದಕ ಚಟುವಟಿಕೆಗಳು ನಡೆದ ದಾಖಲೆಗಳಿವೆ. ರಸ್ತೆಯಂಚಿನಲ್ಲಿ ಕೊಲೆಯಾದ ಘಟನೆಗಳು ನಡೆದಿವೆ. ಹೀಗಿರುವಾಗ ಈ ಗನ ಅನ್ನು ಕಾಡಿನ ಮಧ್ಯೆ ಎಸೆದು ಹೋಗಿರುವ ಉದ್ದೇಶವೇನು ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದ್ದು ,ಇದು ಕೊಲೆ ಪ್ರಕರಣವೋ ,ದರೋಡೆ ಪ್ರಕರಣವೋ ಎನ್ನುವುದು ಸಂಶಯಕ್ಕೆ ಇಡುಮಾಡಿದೆ.ಈ ಬಗ್ಗೆ ದಾಂಡೇಲಿ ಡಿ.ವೈ.ಎಸ್.ಪಿ. ಗಣೇಶ ಕೆ.ಎಲ್. ಸಿ.ಪಿ.ಐ ಬಾಬಾಸಾಹೇಬ ಹುಲ್ಲಣ್ಣನವರ, ರಾಮನಗರ ಕ್ರೈಮ್ ಪಿ.ಎಸ್.ಐ ಮಂಜುಳಾ ರಾವುಜೀ ತನಿಖೆ ನಡೆಸಿದ್ದಾರೆ.

Leave a Comment