ಹೊನ್ನಾವರ:ಜಾಗತೀಕರಣ ಹಾಗೂ ಖಾಸಗೀಕರಣದ ದೃಷ್ಟಿಕೋನದೊಂದಿಗೆ ಸ್ಥಳೀಯ ಸಂಪನ್ಮೂಲ ಹಾಗೂ ಮಾನವಶಕ್ತಿಯನ್ನು ಬಳಸಿಕೊಳ್ಳುವುದಕ್ಕೆ ಹೊಸ ರಾಷ್ಟಿçÃಯ ಶಿಕ್ಷಣ ನೀತಿಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ’

ಎಂದು ದಾಂಡೇಲಿ ಬಂಗೂರನಗರ ಕಾಲೇಜಿನ ಪ್ರಾಧ್ಯಾಪಕ ಹಾಗೂ ಬರಹಗಾರ ಡಾ.ಆರ್.ಜಿ.ಹೆಗಡೆ ಅಭಿಪ್ರಾಯಪಟ್ಟರು.
ಇಲ್ಲಿಯ ಎಸ್.ಡಿ.ಎಂ.ಕಾಲೇಜಿನ ಐಐಸಿ ಹಾಗೂ ಐಕ್ಯುಎಸಿ ಸಹಯೋಗದಲ್ಲಿ ರಾಷ್ಟಿçÃಯ ಶಿಕ್ಷಣ ನೀತಿಯ ಕುರಿತು ಸೋಮವಾರ ನಡೆದ ಓರಿಯೆಂಟೇಶನ್ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ,ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
‘ಯರೋಪಿನ ದೇಶಗಳಿಗಿಂತ ಭಾರತ ಹಿಂದುಳಿಯಲು ಇಲ್ಲಿನ ಶಿಕ್ಷಣ ವ್ಯವಸ್ಥೆಯಲ್ಲಿನ ದೋಷಗಳು ಕಾರಣ.೧೯೮೩,೧೯೮೬ ಹಾಗೂ ೨೦೦೯ರಲ್ಲಿ ಜಾರಿಗೆ ತರಲಾಗಿದ್ದ ಶಿಕ್ಷಣ ನೀತಿಗಳು ಆಯಾ ಕಾಲದ ಅಗತ್ಯಗಳಿಗೆ ಅನುಗುಣವಾಗಿದ್ದವು.ಇತ್ತೀಚಿನ ವರ್ಷಗಳಲ್ಲಿ ವಿವಿಧ ಕ್ಷೇತ್ರಗಳ್ಲಿ ಹಲವು ಕ್ರಾಂತಿಕಾರಕ ಬದಲಾವಣೆಗಳಾಗಿದ್ದು ಶಿಕ್ಷಣ ವ್ಯವಸ್ಥೆಯಲ್ಲಿನ ಮಾರ್ಪಾಟು ಅನಿವಾರ್ಯವಾಗಿದೆ’ ಎಂದು ಅವರು ಹೇಳಿದರು.

ಯುಜಿಸಿ,ವಿಶ್ವವಿದ್ಯಾಲಯ ಹಾಗೂ ಸರ್ಕಾರದ ನೀತಿ ನಿರ್ಧಾರಗಳ ನಡುವಿನ ಸಾಮ್ಯತೆಯ ಕೊರತೆಯಿಂದ ಶಿಕ್ಷಣ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದ್ದು ಹೊಸ ಶಿಕ್ಷಣ ನೀತಿಯಲ್ಲಿ ಈ ನಿಟ್ಟಿನಲ್ಲಿ ಬದಲಾವಣೆಯ ಚಿಂತನೆಗಳಿವೆ.ಅನುಭವ,ಕೌಶಲ್ಯ ಹಾಗೂ ಪ್ರಾದೇಶಿಕ ಸಂಸ್ಕೃತಿಯನ್ನು ಕಲಿಕೆಯಲ್ಲಿ ಅಳವಡಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳನ್ನು ಮುಂದಿನ ಜೀವನಕ್ಕೆ ಅಣಿಗೊಳಿಸುವ ಉದ್ದೇಶ ಹೊಸ ಶಿಕ್ಷಣ ನೀತಿಯಲ್ಲಿ ಅಡಗಿದೆ’ ಎಂದು ಅವರು ವಿವರಿಸಿದರು.
ಐಕ್ಯುಎಸಿ ಸಂಯೋಜಕ ಡಾ.ಪಿ.ಎಂ.ಹೊನ್ನಾವರ,ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯೆ ಡಾ.ವಿಜಯಲಕ್ಷಿö್ಮ ಎಂ.ನಾಯ್ಕ ಮಾತನಾಡಿದರು.
ಐಐಸಿ ಸಂಯೋಜಕ ಡಾ.ವಿ.ಎಂ.ಭAಡಾರಿ ಸ್ವಾಗತಿಸಿದರು.ಪ್ರೊ.ಎಂ.ಜಿ.ಹೆಗಡೆ,ಪ್ರೊ.ಸುರೇಶ ಎಸ್. ನಿರೂಪಿಸಿದರು.ಡಾ.ಡಿ.ಎಲ್.ಹೆಬ್ಬಾರ ವಂದಿಸಿದರು.
Leave a Comment