ಹೊನ್ನಾವರ: ತಾಲೂಕಿನ ಹೊಸಾಡ ರಂಗಿನಮೋಟಾದಲ್ಲಿ ರೈಸ್ ಮಿಲ್‌ವೊಂದಕ್ಕೆ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ ಸಂಪೂರ್ಣ ಸುಟ್ಟುಕರಕಲಾದ ಘಟನೆ ಸೋಮವಾರ ಮದ್ಯಾಹ್ನ ನಡೆದಿದೆ.

ಇಲ್ಲಿನ ನಿವಾಸಿ ಅನಂತ ರಾಮಚಂದ್ರ ಪೈ ಅವರಿಗೆ ಸೇರಿದೆ ಎನ್ನಲಾದ ರೈಸ್ ಮಿಲ್ ಅಗ್ನಿ ಅವಘಡಕ್ಕೆ ತುತ್ತಾಗಿದೆ. ಅದ್ರಷ್ಟವಷಾತ್ ಯಾವುದೇ ಪ್ರಾಣಾಪಾಯ, ಗಾಯನೋವು ಸಂಭವಿಸಿಲ್ಲ. ರೈಸ್ ಮಿಲ್ ಯಂತ್ರಗಳು, ಇನ್ನಿತರ ಉಪಕರಣಗಳು ಅಗ್ನಿ ಅವಘಡಕ್ಕೆ ತುತ್ತಾಗಿ ಅಂದಾಜು ಮೂರು ಲಕ್ಷದಷ್ಟು ಹಾನಿ ಸಂಭವಿಸಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಈ ಘಟನೆಯಲ್ಲಿ ತೆಂಗಿನ ಮರವೊಂದಕ್ಕೆ ಹಾನಿಯಾಗಿದ್ದು ಪಕ್ಕದಲ್ಲಿನ ಮನೆಯ ಒಂದು ಭಾಗಕ್ಕೆ ತಗುಲಿದ ಬೆಂಕಿಯನ್ನು ಕೂಡಲೇ ನಂದಿಸಿರುವುದರಿಂದ ಇನ್ನಷ್ಟು ಅವಘಡ ತಪ್ಪಿದೆ. ಬೆಂಕಿ ನಂದಿಸುವಲ್ಲಿ ನೂರೈವತ್ತಕ್ಕು ಹೆಚ್ಚು ಸ್ಥಳೀಯರು ಆಗಮಿಸಿ ಸಹಕರಿಸಿ ಯಶಸ್ವಿಯಾದ ಹಿನ್ನಲೆ ಅಗ್ನಿಶಾಮಕದಳ ಬಂದಿಲ್ಲ. ಘಟನಾ ಸ್ಥಳಕ್ಕೆ ಯಾವುದೇ ಅಧಿಕಾರಿ ಭೇಟಿ ನೀಡದ ಹಿನ್ನಲೆ ಹಾನಿ ಅಂದಾಜು ದಾಖಲಿಸಿದ ಮಾಹಿತಿ ಲಭ್ಯವಾಗಿಲ್ಲ. ಜೀವನೋಪಾಯಕ್ಕಾಗಿ ರೈಸ್ ಮಿಲ್ ಅವಲಭಿಸಿದ ಕುಟುಂಬ ಇದೀಗ ಸಂಕಷ್ಟಕ್ಕೆ ಒಳಗಾಗಿದೆ. ಮೇಲ್ನೊಟಕ್ಕೆ ಸಾರ್ಟಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ.ಸಂಬಂಧಪಟ್ಟ ಇಲಾಖೆ ಸೂಕ್ತ ಪರಿಹಾರ ಒದಗಿಸಬೇಕೆಂದು ಕುಟುಂಬ ಸದಸ್ಯರು ಆಗ್ರಹಿಸಿದ್ದಾರೆ.


Leave a Comment