ಭಟ್ಕಳ: ತಾಲೂಕಿನ ಆಟೋ ರಿಕ್ಷಾ ಚಾಲಕರಿಗೆ ಎದುರಾಗಿರುವ ಸಾಕಷ್ಟು ಸಮಸ್ಯೆಗೆ ಪರಿಹಾರ ಒದಗಿಸಿಕೊಡಬೇಕೆಂದು ಆಗ್ರಹಿಸಿ ಸಹಾಯಕ ಆಯುಕ್ತರಿಗೆ ಆಟೋ ರಿಕ್ಷಾ ಚಾಲಕ ಮಾಲಕ ಸಂಘದ ವತಿಯಿಂದ ಮನವಿಯನ್ನು ಸಲ್ಲಿಸಿದರು.

ಕೋವಿಡ್ -19 ನಿಂದ ಆರ್ಥಿಕ ಸಂಖಷ್ಟ ಎದುರಾದ ಸಂಧರ್ಬದಲ್ಲಿ ರಾಜ್ಯ ಸರಕಾರವು ಆಟೋ ಚಾಲಕರಿಗೆ 5 ಸಾವಿರ ಸಹಾಯಧನವಾಗಿ ನೀಡಲು ಆದೇಶಿಸಿತ್ತು ಆದರೆ ನೀಡಿರುವ ಆದೇಶದ ಪ್ರಕಾರ ಕೆಲವು ಆಟೋ ಚಾಲಕರಿಗೆ ಮಾತ್ರ ಸಹಾಯಧನ ದೊರೆತಿದ್ದು ಇನ್ನುಳಿದ ಅಂದರೆ ಸಹಾಯ ಧನ ದೊರೆಯದೆ ಇದಂತಹ ಆಟೋ ಚಾಲಕರಿಗೆ ಆದಷ್ಟು ಬೇಗ ಸಹಾಯಧನವನ್ನು ಒದಗಿಸಿಕೊಡಬೇಕು. ಹಾಗೂ ಆಟೋ ರಿಕ್ಷಾದ ಇನ್ಸುರೆನ್ಸ ಪಾವತಿಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದನ್ನು ಕಡಿಮೆಗೊಳಿಸಬೇಕು. ಮತ್ತು ಕೋವಿಡ್ 19 ನಿಂದ ಆರ್ಥಿಕ ಪರಿಸ್ಥಿತಿಯು ಸಹ ಹದಗೆಟ್ಟಿದ್ದು, ಈ ಮಧ್ಯೆ ಆಟೋ ಗ್ಯಾಸ ಇಂಧನದ ಬೆಲೆಯು ಸಹ ಹೆಚ್ಚಾಗುತ್ತಿದೆ. ಇದರಿಂದ ಬಡ ಆಟೋ ಚಾಲಕರಿಗೆ ತುಂಬಾ ತೊಂದರೆಯಾಗುತ್ತಿದ್ದು, ಹೆಚ್ಚಾಗುತ್ತಿರುವ ಆಟೋ ಗ್ಯಾಸ ಇಂಧನದ ಬೆಲೆಯನ್ನು ಕಡಿಮೆಗೊಳಿಸಬೇಕು.ಪ್ರಸ್ತುತ ಭಟ್ಕಳದಲ್ಲಿ ಹೆದ್ದಾರಿ ಅಗಲೀಕರಣ ಕಾಮಗಾರಿಯಿಂದಾಗಿ ಈ ಹಿಂದೆ ಇಂದ ಆಟೋ ರಿಕ್ಷಾ ನಿಲ್ದಾಣಕ್ಕೆ ಸ್ಥಳಾವಕಾಶ ಇಲ್ಲವಾಗಿದೆ. ಆಟೋ ಪಾರ್ಕಿಂಗ ವ್ಯವಸ್ಥೆಗೆ ತುಂಬಾ ತೊಂದರೆಯಾಗುತ್ತಿದೆ. ಆದರೆ ಈ ಸಮಸ್ಯೆಯನ್ನು ಆಲಿಸದೇ, ಸರಕಾರ ಬೇಕಾಬಿಟ್ಟಿ ಪರ್ಮಿಟ್ ನೀಡುತ್ತಿರುವ ಬಗ್ಗೆ ಹಾಗೂ ಆಟೋ ಚಾಲಕರನ್ನು ಕಾರ್ಮಿಕ ವಲಯಕ್ಕೆ ಸೇರಿಸಬೇಕೆಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಸಹಾಯಕ ಆಯುಕ್ತರ ಅನುಪಸ್ಥಿತಿಯಲ್ಲಿ ಕಛೇರಿಯ ಶಿರಸೇದ್ದಾರ್ ಎಲ್.ಎ.ಭಟ್ಟ ಮನವಿಯನ್ನು ಸ್ವೀಕರಿಸಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಹಾಗೂ ತಾಲೂಕಾ ಆಟೋ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ, ತಾಲೂಕಾ ಸಂಘದ ಉಪಾಧ್ಯಕ್ಷ ನಾಸೀರ್, ಪ್ರಧಾನ ಕಾರ್ಯದರ್ಶಿ ಪ್ರವೀಣ ನಾಯ್ಕ, ಖಜಾಂಚಿ ಪರಮೇಶ್ವರ ನಾಯ್ಕ, ಸಹ ಕಾರ್ಯದರ್ಶಿ ಪಾಂಡು ನಾಯ್ಕ, ನಾಗೇಶ ನಾಯ್ಕ, ನಾರಾಯಣ ಮೋಗೇರ, ಫಯಾಜ್ ಪಟೇಲ್, ಶೇಖರ ನಾಯ್ಕ ಮುಂತಾದವರು ಇದ್ದರು.
Leave a Comment