ಹೊನ್ನಾವರ: ಜಿಲ್ಲೆಯಲ್ಲಿಯೇ ಅತ್ಯಂತ ಪ್ರತಿಷ್ಟಿತ ವೈದ್ಯಕೀಯ ಹಾಗೂ ಶಿಕ್ಷಣ ಸಂಸ್ಥೆಯಾದ ಸೇಂಟ್ ಇಗ್ನೇಸಿಯಸ್ ಸಂಸ್ಥೆಯಲ್ಲಿ ನೂತನವಾಗಿ ಆರಂಭಗೊಂಡ ಪ್ಯಾರಾ ಮೇಡಿಕಲ್ ಕೋರ್ಸಿನ್ ಉದ್ಘಾಟನೆಯನ್ನು ತಾಲೂಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ರಾಜೇಶ ಕಿಣಿಯವರು ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಬಂಡೆಕಲ್ಲಿನಿಂದ ಕೂಡಿದ ಹೊನ್ನಾವರದ ಗುಡ್ಡವನ್ನು ಸಿಸ್ಟರ್ ಮಾರಿಯಾ ಗೊರಟ್ಟಿ ದೊಡ್ಡ ವೈದ್ಯಕೀಯ ಹಾಗೂ ಶಿಕ್ಷಣ ಸಂಸ್ಥೆಯಾಗಿ ಬೆಳಗಿಸಿದ್ದಾರೆ, ಜಿಲ್ಲೆಯ ಜನತೆಗೆ ಅವರು ನೀಡಿದ ಕೊಡುಗೆ ಅಭಿನಂದನೀಯ ಎಂದರು. ಪ್ಯಾರಾ ಮೆಡಿಕಲ್ ಇ ಕೋರ್ಸ ಅತ್ಯಂತ ಅಗತ್ಯ ಹಾಗೂ ಬೇಡಿಕೆ ಹೊಂದಿದ ಕೋರ್ಸಾಗಿದ್ದು ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಸರಿಯಾಗಿ ಪಡೆದುಕೊಳ್ಳಬೇಕೆಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಭಾವನಾ ವಾಹಿನಿಯ ಪ್ರಧಾನ ಸಂಪಾದಕ ಹಾಗೂ ಮುಖ್ಯಸ್ಥರಾದ ಭವಾನಿಶಂಕರ ಮಾತನಾಡಿ ವಿದ್ಯಾರ್ಥಿಗಳು ವೃತ್ತಿಪರ ಉನ್ನತ ವ್ಯಾಸಾಂಗಕ್ಕಾಗಿ ಬೇರೆ ಜಿಲ್ಲೆಗೆ ಹೋಗಾಬೇಕಾದ ಪರಿಸ್ಥಿತಿಯನ್ನು ಸಂಸ್ಥೆಯವರು ಇಂದು ದೂರಮಾಡಿದ್ದಾರೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಂಡು ಶ್ರದ್ಧೆಯಿಂದ ಈ ಕೋರ್ಸುನ್ನು ಮುಗಿಸಬೇಕು. ನೀವು ಉತ್ತಮ ಗುರಿಯನ್ನನ್ನಿಟ್ಟು ಇಲ್ಲಿಗೆ ಬಂದಿದ್ದು, ಗುರಿ ಸಾಧಿಸಲು ಉತ್ತಮ ಗುರುಗಳು ಇದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಿಸ್ಟರ್ ಮಾರಿಯಾ ಗೊರಟ್ಟಿ ಮಾತನಾಡಿ ಸತತ ಪ್ರಯತ್ನದಿಂದ ಈ ಕೋರ್ಸು ಹೊನ್ನಾವರದಲ್ಲಿ ಆರಂಭಿಸುವಂತಾಗಿದೆ. ಇಂತಹ ಕೋರ್ಸುಗಳು ವಿದ್ಯಾರ್ಥಿಗಳಲ್ಲಿ ಉತ್ತಮ ಮೌಲ್ಯಯುತ ಜೀವನವನ್ನು ನಡೆಸುವಲ್ಲಿ ಸಹಕಾರಿಯಾಗುತ್ತದೆ. ದೇವರು ಪ್ರತಿಯೊರ್ವನಿಗೂ ಉತ್ತಮ ಕೌಶಲ್ಯ ನೀಡಿದ್ದಾನೆ. ಅದನ್ನು ಗುರುತಿಸಿ ಉತ್ತಮ ಗುರಿಯತ್ತ ಸಾಗಿದರೆ ಜೀವನದಲ್ಲಿ ಶಾಂತಿ ಸಮಾಧಾನ ನೆಮ್ಮದಿಯನ್ನು ಪಡೆಯಬಹುದು ಎಂದರು.
ವೇದಿಕೆಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸತೀಶ ನಾಯ್ಕ ಪ್ಯಾರಾ ಮೇಡಿಕಲ್ನ್ ಮೇಲ್ವಿಚಾರಕಿ ಸಿಸ್ಟರ್ ನತಾಶ ಉಪಸ್ಥಿತರಿದ್ದರು.. ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಂಟನಿ ಲೋಪಿಸ್ ಸ್ವಾಗತಿಸಿ, ಸಿಸ್ಟರ ಲೀನಾರವರು ವಂದಿಸಿದರು.
Leave a Comment