ಭಟ್ಕಳ : ಅಪ್ರಾಪ್ತೆ ಬಾಲಕಿಯೊರ್ವಳನ್ನು ಪುಸಲಾಯಿಸಿ ಲೈಂಗಿಕ ಸಂಪರ್ಕ ಬೆಳೆಸಿ ಗರ್ಭಿಣಿಯನ್ನಾಗಿಸಿದ ಪ್ರಕರಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
9 ನೇ ತರಗತಿ ಓದುತ್ತಿದ್ದು,ಶಾಲೆಗೆ ಹೋಗುವ ಸಮಯದಲ್ಲಿ ಚಿತ್ತಾಪುರದಲ್ಲಿ ಇರುವ ತನ್ನ ಅಜ್ಜಿ ಮನೆಗೆ ಹೋಗಿ ಬಂದು ಮಾಡುತ್ತಿದ್ದವಳು,ಆ ಮನೆಯಲ್ಲಿ ಶಿರಿಸಿಯ ರವಿ ಪಟಗಾರ ಎಂಬ ಆರೋಪಿತನು ಅಪ್ರಾಪ್ತ 14 ವರ್ಷದ ಬಾಲಕಿಯನ್ನು ಪುಸಲಾಯಿಸಿ ಲೈಂಗಿಕ ಸಂಪರ್ಕ ಬೆಳೆಸಿ ಗರ್ಭಧರಿಸುವಂತೆ ಮಾಡಿದ್ದನು.ಪ್ರಕರಣ ಬೆಳಕಿಗೆ ಬಂದ ನಂತರ ಆರೋಫಿ ನಾಪತ್ತೆಯಾಗಿದ್ದು,ಬಾಲಕಿಯ ತಾಯಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಈ ಪ್ರಕರಣ ಬೆಳಕಿಗೆ ಬಂದಿದ್ದು..ಬಾಲಕಿಯ ಹೊಟ್ಟೆ ನೋವು ಎಂದು ಭಟ್ಕಳ ಸರಕಾರಿ ಆಸ್ಪತ್ರೆಗೆ ಬಂದಿದ್ದ ಸಂದರ್ಭದಲ್ಲಿ ವೈದ್ಯರು ಪರಿಕ್ಷೆ ಮಾಡಿದ್ದಾಗ ಪ್ರಕಾರ ಬೆಳಕಿಗೆ ಬಂದು ತಕ್ಷಣ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಮತ್ತು ಮಹಿಳಾ ಸಾಂತ್ವನ ಕೇಂದ್ರದ ಸದಸ್ಯರುಬಾಲಕಿ ಬಳಿ ವಿಚಾರಣೆ ಮಾಡಿದ್ದಾಗ ತನ್ನಗೆ ಆಗಿದ್ದ ದೌರ್ಜನ್ಯ ವಿವಾರಿಸಿದ್ದಾಳೆ ನಂತರ ಪೊಲೀಸರು ಮಕ್ಕಳ ಲೈಂಗಿಕ ದೌರ್ಜನ್ಯ ಕಾಯ್ದ ಅಡಿಯಲ್ಲಿ ಪ್ರಕಾರ ದಾಖಲಿಸಿ ಆರೋಪಿಗಾಗಿ ಬಲೆ ಬಿಸಿದ್ದಾರೆ.ನಂತರ ಬಾಲಕಿಗೆ ಚಿಕಿತ್ಸೆ ಮುಂದುವರಿಸಿದ್ದಾರೆ.
Leave a Comment