ಹಳಿಯಾಳ:- ತಾಲೂಕಿನ ಬಿಕೆ ಹಳ್ಳಿ ಗ್ರಾಮದಲ್ಲಿ ಗ್ರಾಮದೇವಿ ಶ್ರೀ ಲಕ್ಷ್ಮೀ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಜಾತ್ರೆಯ ಪ್ರಮುಖ ಘಟ್ಟ ದೇವಿಯ ಹೊನ್ನಾಟ ಸಹಸ್ರಾರು ಭಕ್ತರ ಭಕ್ತಿಘೋಷಗಳ ಮಧ್ಯೆ ವಿಜೃಂಭಣೆಯಿಂದ ಜರುಗಿತು.

ದಿ.24 ರ ವರೆಗೆ ಜಾತ್ರೆ ನಡೆಯಲಿದ್ದು ಎರಡು ದಿನಗಳ ಕಾಲ ನಡೆದ ಹೊನ್ನಾಟ ಸಂಪನ್ನಗೊಂಡಿದ್ದು ದಿ.19 ರಂದು ಮಧ್ಯಾಹ್ನ 12 ಗಂಟೆಗೆ ಗ್ರಾಮದಲ್ಲಿ ಮಹಾರಥೋತ್ಸವ ಕಾರ್ಯಕ್ರಮ ನಡೆಯಲಿದೆ.
ಕಳೆದ ವರ್ಷ ಜರುಗಬೇಕಿದ ಜಾತ್ರಾ ಮಹೋತ್ಸವವು ಕೊರೊನಾ ಹಿನ್ನೆಲೆ ಸ್ಥಗೀತಗೊಂಡಿತ್ತು, ಈ ಬಾರಿ ಸರ್ಕಾರದ ಆದೇಶದಂತೆ ಮುಜರಾಯಿ ಹಾಗೂ ಧಾರ್ಮಿಕ ದತ್ತಿ ಇಲಾಖೆಯವರು ಕೋವಿಡ್-19 ನಿಯಮಗಳನ್ನು ಅನುಸರಿಸಿ ಜಾತ್ರೆಯನ್ನು ಕೈಗೊಳ್ಳಲು ಅನುಮತಿ ನೀಡಿದ್ದರಿಂದ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ.

Leave a Comment